ಆಧಾರ್ ನೆಪದಲ್ಲಿ ಗ್ರಾಹಕರ ಮಾಹಿತಿ ಸಂಗ್ರಹಿಸುತ್ತಿದ್ದ 8 ವೆಬ್ ಸೈಟ್ ಗಳ ವಿರುದ್ಧ ಎಫ್ಐಆರ್ ದಾಖಲು
ಆಧಾರ್ ಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವುದಾಗಿ ಹೇಳಿ ಅಕ್ರಮವಾಗಿ ಆಧಾರ್ ಸಂಖ್ಯೆ ಹಾಗೂ ಜನರ ಮಾಹಿತಿ....

Published On :
ನವದೆಹಲಿ: ಆಧಾರ್ ಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವುದಾಗಿ ಹೇಳಿ ಅಕ್ರಮವಾಗಿ ಆಧಾರ್ ಸಂಖ್ಯೆ ಹಾಗೂ ಜನರ ಮಾಹಿತಿ ಸಂಗ್ರಹಿಸುತ್ತಿದ್ದ ಎಂಟು ಅನಧಿಕೃತ ವೆಟ್ ಸೈಟ್ ಗಳ ವಿರುದ್ಧ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಬುಧವಾರ ಎಫ್ಐಆರ್ ದಾಖಲಿಸಿದೆ.
ಇದೇ ಮೊದಲ ಬಾರಿಗೆ ಯುಐಡಿಎಐ ಅಧಿಕಾರಿಗಳು, ಆಧಾರ್ ಗೆ ಸಂಬಂಧಿಸಿದ ಸೇವೆ ಒದಗಿಸುವುದಾಗಿ ಜನರನ್ನು ವಂಚಿಸಿದ್ದ ಆರೋಪದ ಮೇಲೆ ವೆಬ್ ಸೈಟ್ ಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
aadhaarupdate.com, aadhaarindia.com, pvcaadhaar.in, aadhaarprinters.com, geteaadhaar.com, downloadaadhaarcard.in, aadharcopy.in, and duplicateaadharcard.com ವಿರುದ್ಧ ಯುಐಡಿಎಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ಆಧಾರ್ ಗೆ ಸಂಬಂಧಿಸಿದ ಅನಧಿಕೃತ ವೆಬ್ ಸೈಟ್ ಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದ ನಂತರವೂ ಕೆಲವು ಹೊಸ ಹೊಸ ವೆಬ್ ಸೈಟ್ ಗಳು ಹುಟ್ಟಿಕೊಳ್ಳುತ್ತಿರುವುದಾಗಿ ಪತ್ತೆಯಾಗಿದೆ. ಹೀಗಾಗಿ ನಾವು ಈ ಬಾರಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


