ಕುಲ ಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ಏಕೆ?: ಪಾಕಿಸ್ತಾನಕ್ಕೆ ಅಮೆರಿಕ ಪ್ರಶ್ನೆ!
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧಕ್ಕೆ ಮಾರಕವಾಗಿ ಪರಿಗಣಿಸಿರುವ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆ ವಿವಾದ ಇದೀಗ ಅಮೆರಿಕ ಗಮನಕ್ಕೆ ಬಂದಿದ್ದು, ಪಾಕಿಸ್ತಾನ ಸೇನಾ ನ್ಯಾಯಾಲಯದ ವಿವಾದಾತ್ಮ ಕ ತೀರ್ಪನ್ನು ಅಮೆರಿಕ ರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ.

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧಕ್ಕೆ ಮಾರಕವಾಗಿ ಪರಿಗಣಿಸಿರುವ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆ ವಿವಾದ ಇದೀಗ ಅಮೆರಿಕ ಗಮನಕ್ಕೆ ಬಂದಿದ್ದು, ಪಾಕಿಸ್ತಾನ ಸೇನಾ ನ್ಯಾಯಾಲಯದ ವಿವಾದಾತ್ಮ ಕ ತೀರ್ಪನ್ನು ಅಮೆರಿಕ ರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ.
ಕುಲಭೂಷಣ್ ಜಾಧವ್ ಪ್ರಕರಣವನ್ನು ತಾವು ಗಮನಿಸಿದ್ದು, ಮೇಲ್ಮೋಟಕ್ಕೆ ಪ್ರಕರಣದಲ್ಲಿ ಸಾಕಷ್ಟು ರಹಸ್ಯಗಳು ಅಡಗಿರುವಂತೆ ಭಾಸವಾಗುತ್ತಿದೆ. ಪ್ರಕರಣದಲ್ಲಿ ಕುಲಭೂಷಣ್ ಯಾದವ್ ಗೂಢಚಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿಸುತ್ತಿದೆ. ಹೀಗಿರುವಾಗ ತರಾತುರಿಯಲ್ಲಿ ಕುಲಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ವಿಧಿಸಿರುವುದು ಏಕೆ? ಎಂದು ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಅಲಿಸ್ಸಾಐರ್ಸ್ ಪ್ರಶ್ನಿಸಿದ್ದಾರೆ.
ಇನ್ನು ಅಟ್ಲಾಂಟಿಕ್ ಕೌನ್ಸಿಲ್ ನ ದಕ್ಷಿಣ ಏಷ್ಯಾ ಕೇಂದ್ರದ ನಿರ್ದೇಶಕ ಭರತ್ ಗೋಪಾಲಸ್ವಾಮಿ ಅವರೂ ಕೂಡ ಪಾಕಿಸ್ತಾನದ ಸಾಕ್ಷಾಧಾರಗಳು ತಿರುಚಿರುವ ಸಾಧ್ಯತೆ ಇದ್ದು, ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳ ಸಾಕ್ಷ್ಯಾಧಾರಗಳು ನಂಬಿಕೆ ಅರ್ಹವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಪಾಕಿಸ್ತಾನ ಸಲ್ಲಿಕೆ ಮಾಡಿರುವ ಸಾಕ್ಷ್ಯಾಧಾರಗಳು ರಾಜಕೀಯ ಪ್ರೇರಿತವಾಗಿದ್ದು, ಉರಿ ಉಗ್ರ ದಾಳಿ ಬಳಿಕ ಅಂತಾರಾಷ್ಟ್ರೀಯ ಸಮುದಾಯದ ಎದುರು ಪಾಕಿಸ್ತಾನವನ್ನು ಏಕಾಂಗಿ ಮಾಡುವ ಭಾರತ ಪ್ರಯತ್ನಕ್ಕೆ ಪಾಕಿಸ್ತಾನ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


