ಅತ್ಯುತ್ತಮ ಅಂತಾರಾಷ್ಟ್ರೀಯ ವರದಿಗೆ ನ್ಯೂಯಾರ್ಕ್ ಟೈಮ್ಸ್ ಗೆ ಪುಲಿಟ್ಜರ್ ಪ್ರಶಸ್ತಿ!
2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ಅಂತಾರಾಷ್ಟ್ರೀಯ ಸುದ್ದಿ ಪ್ರಸಾರ ವಿಭಾಗದಲ್ಲಿ ಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಪುಲಿಟ್ಜರ್ ಪ್ರಶಸ್ತಿ ಒಲಿದಿದೆ.

ನ್ಯೂಯಾರ್ಕ್: 2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ಅಂತಾರಾಷ್ಟ್ರೀಯ ಸುದ್ದಿ ಪ್ರಸಾರ ವಿಭಾಗದಲ್ಲಿ ಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಪುಲಿಟ್ಜರ್ ಪ್ರಶಸ್ತಿ ಒಲಿದಿದೆ.
ಪತ್ರಿಕಾ ರಂಗದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತವಾಗಿರುವ 2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಪುಲಿಟ್ಜರ್ ಪ್ರಶಸ್ತಿ ಸಮಿತಿಯ ನಿರ್ವಾಹಕ ಮೈಕ್ ಪ್ರೈಡ್ ಅವರು ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿದರು. ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರಶಸ್ತಿ ಘೋಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
101ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಪಟ್ಟಿಯಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಸುದ್ದಿ ಪ್ರಸಾರ ವಿಭಾಗದಲ್ಲಿ ಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಪ್ರಶಸ್ತಿಗೆ ಭಾಜನವಾಗಿದೆ. ಅಂತೆಯೇ ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಭೀಕರ ಪ್ರವಾಹದ ಕುರಿತು ಸರಣಿ ಸುದ್ದಿ ಪ್ರಸಾರ ಮಾಡಿದ್ದ ಚಾರ್ಲ್ ಸ್ಟನ್ ಗೆಜೆಟ್ ಮೇಲ್ ನ ಪತ್ರಕರ್ತರಾದ ಎರಿಕ್ ಐರ್ ಅವರಿಗೆ ಅತ್ಯುತ್ತಮ ತನಿಖಾ ಸುದ್ದಿ ವಿಭಾಗ ಪ್ರಶಸ್ತಿ ಒಲಿದಿದೆ. ಅತ್ಯುತ್ತಮ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಆಕ್ಲೆಂಡ್ ನ ಈಸ್ಟ್ ಬೇ ಟೈಮ್ಸ್ ಸಂಸ್ಥೆ ಪ್ರಶಸ್ತಿಗೆ ಪಾತ್ರವಾಗಿದೆ.
ಉಳಿದಂತೆ 2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪಟ್ಟಿ ಇಂತಿದೆ.
ಅತ್ಯುತ್ತಮ ಅಂತಾರಾಷ್ಟ್ರೀಯ ಸುದ್ದಿ ಪ್ರಸಾರ- ನ್ಯೂಯಾರ್ಕ್ ಟೈಮ್ಸ್ (ನ್ಯೂಯಾರ್ಕ್)
ಅತ್ಯುತ್ತಮ ತನಿಖಾ ಸುದ್ದಿ- ಚಾರ್ಲ್ ಸ್ಟನ್ ಗೆಜೆಟ್ ಮೇಲ್ (ಚಾರ್ಲ್ ಸ್ಟನ್)
ಅತ್ಯುತ್ತಮ ಬ್ರೇಕಿಂಗ್ ನ್ಯೂಸ್ - ಈಸ್ಟ್ ಬೇ ಟೈಮ್ಸ್ (ಆಕ್ಲೆಂಡ್)
ಅತ್ಯುತ್ತಮ ನಾಗರಿಕ ಸೇವಾ ವಿಭಾಗ- ನ್ಯೂಯಾರ್ಕ್ ಡೈಲಿ ನ್ಯೂಸ್ (ನ್ಯೂಯಾರ್ಕ್) ಮತ್ತು ಪ್ರೋ ಪಬ್ಲಿಕಾ
ಅತ್ಯುತ್ತಮ ವಿಸ್ತೃತ ವರದಿ- ಮೆಕ್ಲ್ಯಾಚಿ ಮತ್ತು ಮಿಯಾಮಿ ಹೆರಾಲ್ಡ್- ಅಂತಾರಾಷ್ಟ್ರೀಯ ತನಿಖಾ ವರದಿಗಾರರ ಒಕ್ಕೂಟ
ಅತ್ಯುತ್ತಮ ಸ್ಥಳೀಯ ವರದಿ-ದಿ ಸಾಲ್ಟ್ ಲೇಕ್ ಟ್ರಿಬ್ಯೂನ್
ಅತ್ಯುತ್ತಮ ರಾಷ್ಟ್ರೀಯ ವರದಿಗಾರಿಕೆ - ಡೇವಿಡ್ ಎ ಫರ್ಹೇನ್ತೋಲ್ಡ್ (ದಿ ವಾಷಿಂಗ್ಟನ್ ಪೋಸ್ಟ್)
ಅತ್ಯುತ್ತಮ ವೈಶಿಷ್ಟ್ಯ ಬರವಣಿಗೆ - ಸಿಜೆ ಚಿವರ್ಸ್ (ನ್ಯೂಯಾರ್ಕ್ ಟೈಮ್ಸ್)
ಅತ್ಯುತ್ತಮ ವಿವರಣೆ -ಪೆಗ್ಗಿ ನೂನನ್ (ದಿ ವಾಲ್ ಸ್ಟ್ರೀಟ್ ಜರ್ನಲ್)
ಅತ್ಯುತ್ತಮ ವಿಮರ್ಶೆ-ಹಿಲ್ಟನ್ ಅಲ್ಸ್ (ದಿ ನ್ಯೂಯಾರ್ಕರ್)
ಅತ್ಯುತ್ತಮ ಸಂಪಾದಕೀಯ ಬರವಣಿಗೆ -ಆರ್ಟ್ ಕಲೆನ್ (ದಿ ಸ್ಟಾರ್ಮ್ ಲೇಕ್ ಟೈಮ್ಸ್)
ಅತ್ಯುತ್ತಮ ಸಂಪಾದಕೀಯ ಕಾರ್ಟೂನ್ - ಜಿಮ್ ಮಾರಿನ್ (ಮಿಯಾಮಿ ಹೆರಾಲ್ಡ್)
ಅತ್ಯುತ್ತಮ ಬ್ರೇಕಿಂಗ್ ನ್ಯೂಸ್ ಫೋಟೋಗ್ರಫಿ- ಡೇನಿಯಲ್ ಬೆರೆಹುಲಕ್ (ಸ್ವತಂತ್ರ ಛಾಯಾಗ್ರಾಹಕ)
ಅತ್ಯುತ್ತಮ ಫೀಚರ್ ಫೋಟೋಗ್ರಫಿ - ಇ ಜೇಸನ್ ವಾಂಬ್ಸಗನ್ಸ್ (ಚಿಕಾಗೋ ಟ್ರಿಬ್ಯೂನ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


