ಇರಿತಕ್ಕೊಳಗಾಗಿ ಮೃತಪಟ್ಟ ದೆಹಲಿ ಶಿಕ್ಷಕ ಕುಟುಂಬಕ್ಕೆ 1 ಕೋಟಿ ಪರಿಹಾರ: ಎಎಪಿ ಸರ್ಕಾರ
ಇಬ್ಬರು ವಿದ್ಯಾರ್ಥಿಗಳಿಂದ ಇರಿತಕ್ಕೆ ಒಳಗಾಗಿ ಇಂದು ಮೃತಪಟ್ಟ ಶಾಲಾ ಶಿಕ್ಷಕರೊಬ್ಬರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಮಂಗಳವಾರ ಘೋಷಿಸಿದೆ.

Published On :
ನವದೆಹಲಿ: ಇಬ್ಬರು ವಿದ್ಯಾರ್ಥಿಗಳಿಂದ ಇರಿತಕ್ಕೆ ಒಳಗಾಗಿ ಇಂದು ಮೃತಪಟ್ಟ ಶಾಲಾ ಶಿಕ್ಷಕರೊಬ್ಬರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಮಂಗಳವಾರ ಘೋಷಿಸಿದೆ.
ಶಾಲೆಯ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ 12 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ವಜಾ ಮಾಡಿದ್ದಕ್ಕೆ, ಉಳಿದ ಸಹ ವಿದ್ಯಾರ್ಥಿಗಳ ಎದುರಿಗೆ ಮುಖೇಶ್ ಕುಮಾರ್ ಎಂಬ ಸರ್ಕಾರಿ ಶಿಕ್ಷಕರನ್ನು ಈ ಇಬ್ಬರು ವಿದ್ಯಾರ್ಥಿಗಳು ಇರಿದಿದ್ದರು.
ಈ ದಾಳಿಯಾದ ಒಂದು ದಿನದ ನಂತರ ಮಂಗಳವಾರ ಆಸ್ಪತ್ರೆಯಲ್ಲಿ ಗಾಯಗೊಂಡ ಶಿಕ್ಷಕ ಕೊನೆಯುಸಿರೆಳೆದಿದ್ದರು.
ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬನು ಅಪ್ರಾಪ್ತನಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ರಾಜ್ಯ ಸರ್ಕಾರ ಕೂಡ ಈ ಪ್ರಕರಣದ ಬಗ್ಗೆ ಮೆಜೆಸ್ಟ್ರೇಟ್ ತನಿಖೆ ನಡೆಸಲು ಆದೇಶಿಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಹೇಳಿದ್ದಾರೆ.
"ಕುಟುಂಬದ ದುಃಖಕ್ಕೆ ಯಾವುದೇ ಪರಿಹಾರ ಸಾಧ್ಯವಿಲ್ಲ... ಅವರ ಆರ್ಥಿಕ ನೆರವಿಗಾಗಿ ಶೀಘ್ರವೇ ಸರ್ಕಾರ 1 ಕೋಟಿ ನೀಡಲಿದೆ" ಎಂದು ಸಿಸೋಧಿಯಾ ಹೇಳಿದ್ದಾರೆ.
"ಶಿಕ್ಷಕರಿಗೆ ಗೌರವ ನೀಡುವುದನ್ನು ಎಲ್ಲ ಪೋಷಕರು ಮಕ್ಕಳಿಗೆ ಬೆಳೆಸಬೇಕು" ಎಂದು ಕೂಡ ಅವರು ಕರೆ ಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


