ಪ್ರಧಾನ ಸುದ್ದಿ

ಲಾಲು ಪ್ರಸಾದ್ ಕೃಪೆಯಿಂದ ನಿತೀಶ್ ಮುಖ್ಯಮಂತ್ರಿಯಾಗಿದ್ದಾರೆ: ಅಮರ್ ಸಿಂಗ್

ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಕೃಪೆಯಿಂದ ಜೆ ಡಿ ಯು ಮುಖಂಡ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ, ಲಾಲು ಅವರಿಗೆ ಧನ್ಯವಾದಗಳು ಎಂದು ಸಮಾಜವಾದಿ ಪಕ್ಷದ

ಲಾಲು ಪ್ರಸಾದ್ ಕೃಪೆಯಿಂದ ನಿತೀಶ್ ಮುಖ್ಯಮಂತ್ರಿಯಾಗಿದ್ದಾರೆ: ಅಮರ್ ಸಿಂಗ್
ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್
Published On :
ಪಾಟ್ನಾ: ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಕೃಪೆಯಿಂದ ಜೆ ಡಿ ಯು ಮುಖಂಡ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ, ಲಾಲು ಅವರಿಗೆ ಧನ್ಯವಾದಗಳು ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಶನಿವಾರ ಹೇಳಿದ್ದಾರೆ. 
"ಇದು ಲಾಲು ಪ್ರಸಾದ್ ಅವರ ದೊಡ್ಡ ಗುಣ, ತಮ್ಮನ್ನು ಜೈಲಿಗೆ ಕಳುಹಿಸಿದ ನಿತೀಶ್ ಕುಮಾರ್ ಅವರನ್ನೇ ಬಿಹಾರದ ಮುಖ್ಯಮಂತ್ರಿಯಾಗಿಸಿದ್ದಾರೆ" ಎಂದು ಬಿಹಾರಕ್ಕೆ ಬಂದಿಳಿದ ಸಿಂಗ್ ಮಾಧ್ಯಮಕ್ಕೆ ಹೇಳಿದ್ದಾರೆ. 
"ನಿತೀಶ್ ಕುಮಾರ್ ಅವರ ಮುಖ್ಯಮಂತ್ರಿ ಖುರ್ಚಿ ಸಂಪೂರ್ಣವಾಗಿ ಲಾಲು ಪ್ರಸಾದ್ ಅವರ ಬೆಂಬಲದ ಮೇಲೆ ನಿಂತಿದೆ" ಎಂದು ಕೂಡ ಅವರು ಹೇಳಿದ್ದಾರೆ. 
ಹಾಗೆಯೇ ಈ ಸಮಯದಲ್ಲಿ ತಮ್ಮ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಉತ್ತರ ಪ್ರದೇಶದ ಸಿಂಹ ಎಂದು ಕೂಡ ಬಣ್ಣಿಸಿದ್ದಾರೆ. "ಉತ್ತರ ಪ್ರದೇಶದಲ್ಲಿ ಲಾಲು ಪ್ರಸಾದ್ ಅವರಿಗಾಗಲಿ ನಿತೀಶ್ ಕುಮಾರ್ ಅವರಿಗಾಗಲಿ ಸಾಮಾಜಿಕ ಬೆಂಬಲ ಇಲ್ಲ. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರೇ ಸಿಂಹ" ಎಂದಿದ್ದಾರೆ. 
ಮುಂದಿನ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗಳ್ಲಲಿ ನಿತೀಶ್ ಕುಮಾರ್, ಮುಲಾಯಂ ಸಿಂಗ್ ಅವರನ್ನು ವಿರೋಧಿಸಬಹದು ಆದರೆ ಲಾಲು ಬೆಂಬಲಿಸಲಿದ್ದಾರೆ ಎಂದು ಕೂಡ ಅಮರ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.