ಪ್ರಧಾನ ಸುದ್ದಿ

6 ವರ್ಷಗಳಲ್ಲಿ 2016 ರಲ್ಲೇ ಅತಿ ಹೆಚ್ಚು ಸೈನಿಕರ ಸಾವು; 31 ಭಯೋತ್ಪಾದಕರ ಹತ್ಯೆ

ಉತ್ತರ ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 18 ಭಾರತೀಯ ಸೈನಿಕರು ಮೃತಪಟ್ಟ ನಂತರ, ಈ ವರ್ಷ (ಸೆಪ್ಟೆಂಬರ್ 18 ರವರೆಗೆ) ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯಲ್ಲಿ

6 ವರ್ಷಗಳಲ್ಲಿ 2016 ರಲ್ಲೇ ಅತಿ ಹೆಚ್ಚು ಸೈನಿಕರ ಸಾವು; 31 ಭಯೋತ್ಪಾದಕರ ಹತ್ಯೆ
ಸಾಂದರ್ಭಿಕ ಚಿತ್ರ
Published On :
ಉತ್ತರ ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 18 ಭಾರತೀಯ ಸೈನಿಕರು ಮೃತಪಟ್ಟ ನಂತರ, ಈ ವರ್ಷ (ಸೆಪ್ಟೆಂಬರ್ 18 ರವರೆಗೆ) ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 64 ಕ್ಕೆ ಏರಿದ್ದು, ಆರು ವರ್ಶಗಳ ನಂತರ ಈ ಮಟ್ಟದ ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೌತ್ ಏಷ್ಯಾ ಟೆರರಿಸಂ ಪೋರ್ಟಲ್ (ಎಸ್ ಎ ಟಿ ಪಿ) ತಿಳಿಸಿದೆ. 2010 ರಲ್ಲಿ 64 ಸೈನಿಕರು ಹುತಾತ್ಮರಾಗಿದ್ದರು. 
ಇದಕ್ಕೆ ತದ್ವಿರುದ್ಧವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಮೃತ ಪಟ್ಟ ನಾಗರಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ. 2016 ರಲ್ಲಿ ಈ ಸಂಖ್ಯೆ ಮೂರು ದಶಕಗಳಲ್ಲೇ ಅತಿ ಕಡಿಮೆ ಎಂದು ಎಸ್ ಎ ಟಿ ಪಿ ಮಾಹಿತಿ ತಿಳಿಸಿದೆ. 1990 ರಿಂದ 2007 ರ ನಡುವೆ ಸರಾಸರಿ ವರ್ಷಕ್ಕೆ ಈ ಪ್ರದೇಶದಲ್ಲಿ 800 ನಾಗರಿಕರು ಮೃತಪಟ್ಟಿದ್ದಾರೆ. 
ಕಳೆದ ಮೂರೂ ದಶಕಗಳಲ್ಲಿ 1990 ರಿಂದ 2010 ರವರೆಗಿನ 20 ವರ್ಷಗಳು ಅತಿ ಹೆಚ್ಚು ಹಿಂಸೆಯಿಂದ ಕೂಡಿದ್ದರೆ, 2011 ರ ನಂತರ ತುಸು ಶಾಂತಮಯವಾಗಿತ್ತು ಎಂದು ಕೂಡ ಈ ಮಾಹಿತಿ ತಿಳಿಸಿದೆ. 
2012 ರಲ್ಲಿ 16 ನಾಗರಿಕರು ಮತ್ತು 17 ಸೈನಿಕರು ಮೃತಪಟ್ಟಿದ್ದು ಇದು ಅತಿ ಹೆಚ್ಚು ಶಾಂತಿಯುತ ವರ್ಷ ಎಂದು ತಿಳಿಸಿರುವ ಮಾಹಿತಿ ನಂತರ ಹಿಂಸೆ ಹೆಚ್ಚಾಗಿದೆ ಎಂದಿದೆ. 
ಆ ವರ್ಷ ಗಡಿಯಲ್ಲಿ ಹಲವು ಸರಣಿ ನುಸುಳಿವಿಕೆ ಪ್ರಯತ್ನಗಳನ್ನು ತಡೆಯಲಾಗಿತ್ತು ಎಂದು ಸೇನಾ ಹೇಳಿಕೆ ತಿಳಿಸಿದೆ. ಈ ವರ್ಷ 31 ಭಯೋತ್ಪಾದಕರನ್ನು ಗಡಿ ರೇಖೆಯಲ್ಲಿ ಹತ್ಯೆ ಮಾಡಲಾಗಿದ್ದು, 17 ನುಸುಳುವ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ ಎಂದು ಹೇಳಿಕೆ ತಿಳಿಸಿದೆ. 
ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ 2014 ಮತ್ತು 2015 ನೇ ಇಸವಿಯಲ್ಲಿ ಕದನವಿರಾಮ ಉಲ್ಲಂಘನೆ ಪ್ರಕರಣಗಳು ತೀವ್ರಗೊಂಡವು ಎಂದು ಆಗಸ್ಟ್ 2015 ಮತ್ತು ಏಪ್ರಿಲ್ 2016 ರಲ್ಲಿ ಇಂಡಿಯಾಸ್ಪೆಂಡ್ ವರದಿ ಮಾಡಿತ್ತು. 
ಭಾರತೀಯರು, ಅಮೆರಿಕಾ, ರಷ್ಯಾ ಮತ್ತು ಚೈನಾ ಜೊತೆಗೆ ನರೇಂದ್ರ ಮೋದಿಯವರ ವಿದೇಶಿ ನೀತಿಯ ಬಗೆಗೆ ಸಂತಸದಿಂದಿದ್ದರು, ಪಾಕಿಸ್ತಾನದೊಂದಿಗಿನ ವಿದೇಶಿ ನೀತಿಯೊಂದಿಗೆ ಅಸಮಾಧಾನಗೊಂಡಿದ್ದಾರೆ ಎಂದು ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಪ್ಯು ಗ್ಲೋಬಲ್  ರಿಸರ್ಚ್ ಸೆಪ್ಟೆಂಬರ್ 19 ರಂದು ವರದಿ ಬಿಡುಗಡೆ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.