ಪ್ರಧಾನ ಸುದ್ದಿ

ಬೆಂಗಳೂರಿನಲ್ಲಿ ತಮಿಳು ಯುವಕನಿಗೆ ಥಳಿತ ವಿರೋಧಿಸಿ ಕನ್ನಡ ಸಾಹಿತ್ಯ ಸಂಘದ ಸಭೆಯಲ್ಲಿ ದಾಂಧಲೆ

ಕಾವೇರಿ ವಿವಾದದ ಪ್ರಕರಣದಲ್ಲಿ ಕನ್ನಡಿಗರ ವಿರುದ್ಧ ಫೇಸ್ಬುಕ್ ನಲ್ಲಿ ಬರೆದ ಎಂದು ಶನಿವಾರ 22 ವರ್ಷದ ತಮಿಳು ಯುವಕನಿಗೆ ಕೆಲವು ಕನ್ನಡ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಆರೋಪಿಸಿ,

ಬೆಂಗಳೂರಿನಲ್ಲಿ ತಮಿಳು ಯುವಕನಿಗೆ ಥಳಿತ ವಿರೋಧಿಸಿ ಕನ್ನಡ ಸಾಹಿತ್ಯ ಸಂಘದ ಸಭೆಯಲ್ಲಿ ದಾಂಧಲೆ
ಸಾಂದರ್ಭಿಕ ಚಿತ್ರ
Published On :
ಕೊಯಂಬತ್ತೂರು: ಕಾವೇರಿ ವಿವಾದದ ಪ್ರಕರಣದಲ್ಲಿ ಕನ್ನಡಿಗರ ವಿರುದ್ಧ ಫೇಸ್ಬುಕ್ ನಲ್ಲಿ ಬರೆದ ಎಂದು ಶನಿವಾರ 22 ವರ್ಷದ ತಮಿಳು ಯುವಕನಿಗೆ ಕೆಲವು ಕನ್ನಡ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಆರೋಪಿಸಿ, ಅದನ್ನು ವಿರೋಧಿಸಿ ಕೊಯಂಬತ್ತೂರಿನ ಕನ್ನಡ ಸಾಹಿತ್ಯ ಸಂಘದ ಸಭೆಗೆ ತಮಿಳು ಸಂಘದ ಸದಸ್ಯರು ಅಡ್ಡಿಪಡಿಸಿದ್ದಾರೆ. 
ಸಮಕಾಲೀನ ಕಣ್ಣ ಇಲಕಿಯಮ್ (ಸಾಹಿತ್ಯ) ಎಂಬ ವಿಷಯದ ಮೇಲೆ ಸಭೆ ಹಮ್ಮಿಕೊಂಡಿದ್ದ ಜಾಗಕ್ಕೆ ಬಂದ ತಂತೈ ಪೆರಿಯಾರ್ ದ್ರಾವಿಡ ಕಜಾಕಮ್ ಸಂಘದ ಸದಸ್ಯರು ಘೋಷಣೆಗಳನ್ನು ಕೂಗಿ ಸಭೆಯನ್ನು ಮಾಡುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ. ಕಾವೇರಿ ವಿವಾದದಲ್ಲಿ ಫೇಸ್ಬುಕ್ ಬರಹಕ್ಕಾಗಿ ತಮಿಳು ಯುವಕನನ್ನು ಕನ್ನಡ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಅವರು ಸಭೆ ನಡೆಸುವುದಕ್ಕೆ ವಿರೋಧಿಸಿದ್ದಾರೆ.
ಸಾಹಿತ್ಯ ಸಂಘದ ಬ್ಯಾನರ್ ಹರಿದು ಹಾಕಿರುವ ಕಾರ್ಯಕರ್ತರು, ಪೊಲೀಸರು ಬಂದ ವೇಳೆಯಲ್ಲಿ ಚದುರಿ ಓಡಿಹೋಗಿದ್ದಾರೆ. ಈ ಘಟನೆಯ ನಂತರ ಸಭೆಯನ್ನು ಕೂಡ ರದ್ದುಪಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.