ಪ್ರಧಾನ ಸುದ್ದಿ

ಇಸ್ರೋ ಸಾಧನೆಗೆ ಮತ್ತೊಂದು ಗರಿ: ಇನ್ಸಾಟ್‌-3ಡಿಆರ್‌ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸ೦ಸ್ಥೆ ಇಸ್ರೋ ಸ್ವದೇಶಿ ತಂತ್ರಜ್ಞಾನ ಬಳಸಿ ಇಸ್ರೋ ನಿರ್ಮಿಸಿದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್‌-3ಡಿಆರ್‌....

ಇಸ್ರೋ ಸಾಧನೆಗೆ ಮತ್ತೊಂದು ಗರಿ: ಇನ್ಸಾಟ್‌-3ಡಿಆರ್‌ ಯಶಸ್ವಿ ಉಡಾವಣೆ
ಇನ್ಸಾಟ್‌-3ಡಿಆರ್‌
Published On :
ಚೆನ್ನೈ: ಭಾರತೀಯ ಬಾಹ್ಯಾಕಾಶ ಸ೦ಸ್ಥೆ ಇಸ್ರೋ ಸ್ವದೇಶಿ ತಂತ್ರಜ್ಞಾನ ಬಳಸಿ ಇಸ್ರೋ ನಿರ್ಮಿಸಿದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್‌-3ಡಿಆರ್‌ ಅನ್ನು ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಂದು ಸಂಜೆ ನಿಗದಿತ ವೇಳೆಗಿಂತ(4.10) ಸುಮಾರು 40 ನಿಮಿಷಗಳ ವಿಳಂಬವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್‌-3ಡಿಆರ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಸ್ವದೇಶಿ ಕ್ರಯೋಜೆನಿಕ್‌ ಎಂಜಿನ್‌ನಿಂದ ಚಾಲನೆಗೊಳ್ಳುವ ಜಿಎಸ್‌ಎಲ್‌ವಿ- ಎಫ್05 ರಾಕೆಟ್‌, ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ನೆಲೆಯಿಂದ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ. ಕ್ರಯೋಜೆನಿಕ್‌ ಎಂಜಿನನ್ನು 4ನೇ ಬಾರಿಗೆ ಜಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಬಳಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಎಸ್‌ಎಲ್‌ವಿ-ಎಫ್05ಯಲ್ಲಿ ಈ ಎಂಜಿನ್‌ ಪರೀಕ್ಷೆಗೆ ಒಳಪಡುತ್ತಿರುವುದು ಇದೇ ಮೊದಲು.
ಜಿಎಸ್‌ಎಲ್‌ವಿ-ಎಫ್ 5 ರಾಕೆಟ್‌ ಮೂಲಕ ನಭೋಮಂಡಲ ತಲುಪುವ 2211 ಕೆ.ಜಿ. ತೂಕದ ಇನ್ಸಾಟ್‌ -3ಡಿಆರ್‌ ಉಪಗ್ರಹ ನಂತರ ತನ್ನದೇ ಮುನ್ನೂಕುವ ಶಕ್ತಿ ಬಳಸಿಕೊಂಡು ತನ್ನ ಅಂತಿಮ ಗುರಿಯಾದ ಭೂಸ್ಥಿರ ಕಕ್ಷೆಯನ್ನು ಸೇರಿಸಿಕೊಳ್ಳಲಿದೆ.
ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ  ಮಾಡಲಾಗಿತ್ತು. ಇದಾದ ಬಳಿಕ 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಇದೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಇಸ್ರೋ ಯಶಸ್ಸು ಸಾಧಿಸಿತ್ತು. ಇದರ ಮುಂದುವರೆದ ಭಾಗವಾಗಿ ಇಂದು ಇನ್ಸಾಟ್ 3ಡಿಆರ್ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿದೆ. 
ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವಾಗಿದೆ. ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತಗಳನ್ನು ವೀಕ್ಷಿಸುವ ಮೂಲಕ  ಚಂಡಮಾರುತವನ್ನು ಮೊದಲೇ ಗ್ರಹಿಸಿ ಎಚ್ಚರಿಕೆ ನೀಡುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.