ಮುಲಾಯಂ ಆಪ್ತನಿಗೆ ಕಪಾಳಮೋಕ್ಷ ಆರೋಪ; ಸಚಿವ ವಜಾ
ಸಮಾಜವಾದಿ ಪಕ್ಷದ ಅಧಿನಾಯಕ ಮುಲಾಯಂ ಸಿಂಗ್ ಯಾದವ್ ಅವರ ಆಪ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪದ ಮೇಲೆ ವನ್ಯ ರಾಜ್ಯ ಸಚಿವ ಪವನ್ ಪಾಂಡೆ ಅವರನ್ನು ಪಕ್ಷ ಉಚ್ಛಾಟಿಸಿದೆ.

Published On :
ಲಖನೌ: ಸಮಾಜವಾದಿ ಪಕ್ಷದ ಅಧಿನಾಯಕ ಮುಲಾಯಂ ಸಿಂಗ್ ಯಾದವ್ ಅವರ ಆಪ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪದ ಮೇಲೆ ವನ್ಯ ರಾಜ್ಯ ಸಚಿವ ಪವನ್ ಪಾಂಡೆ ಅವರನ್ನು ಪಕ್ಷ ಉಚ್ಛಾಟಿಸಿದೆ.
ಈ ಶಿಸ್ತುಕ್ರಮವನ್ನು ತೆಗೆದುಕೊಂಡಿರುವುದಾಗಿ ಪಕ್ಷದ ರಾಜ್ಯಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಘೋಷಿಸಿದ್ದಾರೆ. ಶಿವಪಾಲ್ ಸಿಂಗ್ ಯಾದವ್ ತಮ್ಮ ಸಹೋದರನ ಮಗ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೊಂದಿಗೆ ಹಲವು ದಿನಗಳಿಂದ ಅಧಿಕಾರ ಜಗ್ಗಾಟದಲ್ಲಿದ್ದಾರೆ.
ಮುಖಮಂತ್ರಿಯವರ ಗೃಹದಲ್ಲಿ ಪಾಂಡೆ ತಮಗೆ ಕಪಾಳಮೋಕ್ಷ ಮಾಡಿದ್ದರು ಎಂದು ವಿಧಾನಪರಿಷತ್ತಿನ ಸದಸ್ಯ ಆಶು ಮಲಿಕ್ ಆರೋಪಿಸಿದ್ದರು.
ಯಾವುದೇ ರೀತಿಯ ಅಶಿಸ್ತನ್ನು ಪಕ್ಷ ಸಹಿಸಿಕೊಳ್ಳುವುದಿಲ್ಲ ಎಂದು ಶಿವಪಾಲ್ ಬುಧವಾರ ಹೇಳಿದ್ದಾರೆ. ಪಕ್ಷದಲ್ಲಿ ಯಾದವ ಕುಟುಂಬದ ಯಾವುದೇ ಕಲಹ ಇಲ್ಲ ಎಂದು ಕೂಡ ಶಿವಪಾಲ್ ಹೇಳಿದ್ದಾರೆ.
"ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಮತ್ತು ಪಕ್ಷದ ಬೆಳ್ಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದೇವೆ. ನವೆಂಬರ್ 5 ರಂದು ಈ ಸಂಭ್ರಮಾಚರಣೆಗಳು ನಡೆಯಲಿದ್ದು ನಂತರ ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗಲಿದ್ದೇವೆ" ಎಂದು ಕೂಡ ಶಿವಪಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


