ನಮ್ಮನ್ನು ಗುರಿಯಾಗಿಸಿಕೊಂಡರೆ ತಕ್ಕ ಶಾಸ್ತಿ: ಪಾಕಿಸ್ತಾನಕ್ಕೆ ಬಿಎಸ್ ಎಫ್ ಎಚ್ಚರಿಕೆ
ಪಾಕಿಸ್ತಾನ ಸೇನೆ ನಮ್ಮನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದರೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಪಾಕಿಸ್ತಾನ ಸೇನೆ ನಮ್ಮನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದರೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರ ಪುಂಡಾಟ ಮುಂದುವರೆದಿರುವಂತೆಯೇ ಇತ್ತ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಪಾಕಿಸ್ತಾನ ನಮ್ಮ ಗುರಿಯಾಗಿಸಿಕೊಂಡರೆ ಅವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಬಿಎಸ್ ಎಫ್ ಹೇಳಿದೆ. ಈ ಬಗ್ಗೆ ಮಾತನಾಡಿರುವ ಬಿಎಸ್ ಎಫ್ ಹೆಚ್ಚುವರಿ ನಿರ್ದೇಶಕ ಅರುಣ್ ಕುಮಾರ್ ಅವರು, ಗಡಿಯಲ್ಲಿ ಶಾಂತಿಕದಡಲು ಪಾಕ್ ಸೈನಿಕರು ಯತ್ನಿಸಿದರೆ ಅವರು ಅದಕ್ಕೆ ತಕ್ಕ ಫಲ ಎದುರಿಸಬೇಕಾಗುತ್ತದೆ. ಪಾಕಿಸ್ತಾನ ಸೈನಿಕರ ಯಾವುದೇ ರೀತಿಯ ಕ್ರಿಯೆಗಳಿಗೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಲು ಭಾರತೀಯ ಸೈನಿಕರು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಕಥುವಾದಲ್ಲಿ ಪಾಕಿಸ್ತಾನ ಸೈನಿಕರ ನೆರವಿನೊಂದಿಗೆ ಉಗ್ರರು ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾಗ ನಿನ್ನೆ ಹುತಾತ್ಮರಾದ ಯೋಧ ಗುರ್ನಾಮ್ ಸಿಂಗ್ ಹಾಗೂ ಅವರ ತಂಡ ಅದನ್ನು ವಿಫಲಗೊಳಿಸಿತ್ತು. ಪಾಕಿಸ್ತಾನ ಸೈನಿಕರಿಗೆ ದಿಟ್ಟ ಉತ್ತರ ನೀಡುವ ಮೂಲಕ ಅಲ್ಲಿ ಸಾವುನೋವುಗಳನ್ನು ಮಾಡಿತ್ತು. ಹೀಗಾಗಿ ಅಕ್ರಮ ಒಳ ನುಸುಳುವಿಕೆಯನ್ನು ಭಾರತೀಯ ಸೇನೆ ತಡೆದಿತ್ತು. ಆದರೆ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಗುರ್ನಾಮ್ ಸಿಂಗ್ ಹುತಾತ್ಮರಾದರು ಎಂದು ಅರುಣ್ ಕುಮಾರ್ ಅವರು ಗುರ್ನಾಮ್ ಸಿಂಗ್ ಅವರ ಸಾಧನೆಯನ್ನು ಕೊಂಡಾಡಿದರು.
ಇದೇ ವೇಳೆ ಪಾಕಿಸ್ತಾನದ ಗಡಿಯಲ್ಲಿ ಸಂಭವಿಸಿದ ಸಾವಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರುಣ್ ಕುಮಾರ್ ಅವರು, ಪಾಕಿಸ್ತಾನ ಸೇನೆ ಸೈನಿಕರ ಸಾವಿನ ಸಂಖ್ಯೆಯ ಕುರಿತು ಏನೇ ಹೇಳಿದರೂ ಕೂಡ ನಮ್ಮ ಎದುರಿಗಿನ ಗಡಿಯಲ್ಲಿ ಏನಾಗುತ್ತಿದೆ ಎಂದು ನೋಡಬಹುದಾದ ಪರಿಕರಗಳು ನಮ್ಮ ಬಳಿ ಇದೆ. ಬೈನಾಕ್ಯುಲರ್ ಮೂಲಕ ನಾವು ಕೂಡ ಅದನ್ನು ವೀಕ್ಷಣೆ ಮಾಡಿದ್ದೇವೆ. ನಾವು ನಡೆಸಿದ ಪ್ರತಿದಾಳಿ ವೇಳೆ ಹಲವು ಪಾಕಿಸ್ತಾನ ಯೋಧರಿಗೆ ಗುಂಡೇಟು ಬಿದ್ದಿತ್ತು ಎಂದು ಅರುಣ್ ಕುಮಾರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


