ಪ್ರಧಾನ ಸುದ್ದಿ

ಕೊಲೆ ಆಪಾದಿತರ ಜೊತೆ ಬಿಹಾರ ಸಚಿವನ ಫೋಟೋ; ವರದಿ ಕೇಳಿದ ಸುಪ್ರೀಂ ಕೋರ್ಟ್

ಬಿಹಾರ ಸಚಿವ ತೇಜ್ ಪ್ರತಾಪ್ ಸಿಂಗ್ ಅವರೊಂದಿಗೆ ಕ್ರಿಮಿನಲ್ ಆಪಾದಿತರು ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ದೂರಿನ ಮೇರೆಗೆ, ಆ ಫೋಟೋ ತೆಗೆದಿರುವ ದಿನ ಅವರು ಆಪಾದಿತರಾಗಿದ್ದರೆ

ಕೊಲೆ ಆಪಾದಿತರ ಜೊತೆ ಬಿಹಾರ ಸಚಿವನ ಫೋಟೋ; ವರದಿ ಕೇಳಿದ ಸುಪ್ರೀಂ ಕೋರ್ಟ್
ಬಿಹಾರ ಸಚಿವ ತೇಜ್ ಪ್ರತಾಪ್ ಸಿಂಗ್
Published On :
ನವದೆಹಲಿ: ಬಿಹಾರ ಸಚಿವ ತೇಜ್ ಪ್ರತಾಪ್ ಸಿಂಗ್ ಅವರೊಂದಿಗೆ ಕ್ರಿಮಿನಲ್ ಆಪಾದಿತರು ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ದೂರಿನ ಮೇರೆಗೆ, ಆ ಫೋಟೋ ತೆಗೆದಿರುವ ದಿನ ಅವರು ಆಪಾದಿತರಾಗಿದ್ದರೆ ಎಂಬುದನ್ನು ಧೃಢೀಕರಿಸಲು ವರದಿ ಸಲ್ಲಿಸುವಂತೆ ಸಿವಾನ್ ಸೆಷನ್ಸ್ ನ್ಯಾಯಾಧೀಶರಿಗೆ ಸೋಮವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ. 
ಲಾಲು ಪ್ರಸಾದ್ ಪುತ್ರ ಬಿಹಾರ ಆರೋಗ್ಯ ಸಚಿವರೊಂದಿಗೆ ಕ್ರಿಮಿನಲ್ ಆರೋಪಿಗಳಾದ ಮೊಹಮದ್ ಕೈಫ್ ಮತ್ತು ಮೊಹಮದ್ ಜಾವೇದ್ ಇರುವ ಫೋಟೋಗಳ ಬಗ್ಗೆ ಸುಪ್ರೀಂ ಕೋರ್ಟ್ ವರದಿ ಕೇಳಿದೆ. 
ಈ ಆಪಾದಿತರ ಬಗ್ಗೆ ವರದಿ ಕೇಳಿ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ಅಮಿತಾವ್ ರಾಯ್ ಒಳಗೊಂಡ ನ್ಯಾಯಪೀಠ ಆದೇಶಿಸಿದೆ. 
ಆ ಫೋಟೋ ತೆಗೆದ ದಿನ ಅವರ ವಿರುದ್ಧ ಆರೋಪಗಳಿರಲಿಲ್ಲ ಮತ್ತು ಅವರನ್ನು ಭೇಟಿ ಮಾಡಿದ್ದು ಒಂದು ಆಕಸ್ಮಿಕ ಎಂದು ತೇಜ್ ಪ್ರತಾಪ್ ಸಿಂಗ್ ಹಾಗು ಬಿಹಾರ ಸರ್ಕಾರ ಹೇಳಿವೆ. 
ಮುಂದಿನ ವಿಚಾರಣೆಯಾದ ನವೆಂಬರ್ 28 ರೊಳಗೆ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.  ಈ ಇಬ್ಬರು ಆಪಾದಿತರಲ್ಲಿ ಕೈಫ್ ಶರಣಾಗಿದ್ದು, ಜಾವೇದ್ ಇನ್ನು ತಲೆಮರೆಸಿಕೊಂಡಿದ್ದಾನೆ. 
ಈ ಮಧ್ಯೆ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಪ್ರಕರಣದ ಪ್ರಗತಿಯ ಬಗ್ಗೆಯೂ ಸಿಬಿಐ ನಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ಈ ಪ್ರಕರಣದಲ್ಲಿ ಕೈಫ್ ಮತ್ತು ಜಾವೇದ್ ಆಪಾದಿತರು.  
ಸಂತ್ರಸ್ತನ ಪತ್ನಿ ಆಶಾ ರಂಜಾನ್, ಕೈಫ್, ಜಾವೇದ್, ತೇಜ್ ಪ್ರತಾಪ್ ಮತ್ತು ರಾಷ್ಟ್ರೀಯ ಜನತಾದಳದ ಮಾಜಿ ಸಂಸದ ಮತೊಬ್ಬ ಕೊಲೆ ಆಪಾದಿತ ಮೊಹಮದ್ ಶೋರಾಬುದ್ದೀನ್ ನಡುವೆ ನಿಕಟ ಸಂಪರ್ಕ ಇರುವುದನ್ನು ಕೋರ್ಟ್ ಗಮನಕ್ಕೆ ತರಲು ಹಾಕಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು. ಈ ಪ್ರಕರಣದ ತನಿಖೆಯನ್ನು ಬಿಹಾರದ ಹೊರಗೆ ನಡೆಸುವುದಕ್ಕೆ ಕೂಡ ಅವರು ಮನವಿ ಮಾಡಿದ್ದಾರೆ. 
ಈ ತನಿಖೆ ಪೂರ್ಣಗೊಳಿಸುವುದಕ್ಕೆ ಸಿಬಿಐಗೆ ಮೂರು ತಿಂಗಳ ಅವಕಾಶವನ್ನು ಕೋರ್ಟ್ ನೀಡಿತ್ತು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.