ಪ್ರಧಾನ ಸುದ್ದಿ

ಕರ್ನಾಟಕದಲ್ಲಿ ತಯಾರಾಗಲಿದೆ ರಷ್ಯಾದ ಕಮೋವ್ 226ಟಿ ಹೆಲಿಕಾಪ್ಟರ್?

ಇಂಡೋ-ರಷ್ಯಾ ಒಪ್ಪಂದದ ಮೇರೆಗೆ ಭಾರತದಲ್ಲಿ ತಯಾರಾಗಲಿರುವ ಸುಮಾರು 200 ಕಮೋವ್ 226ಟಿ ಯುದ್ಧ ಹೆಲಿಕಾಪ್ಟರ್ ಗಳು ಕರ್ನಾಟಕದ ಹೆಚ್ ಎಎಲ್ ಘಟಕದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ತಯಾರಾಗಲಿದೆ ರಷ್ಯಾದ ಕಮೋವ್ 226ಟಿ ಹೆಲಿಕಾಪ್ಟರ್?
ರಷ್ಯಾದ ಕಮೋವ್ 226 ಟಿ ಹೆಲಿಕಾಪ್ಟರ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಇಂಡೋ-ರಷ್ಯಾ ಒಪ್ಪಂದದ ಮೇರೆಗೆ ಭಾರತದಲ್ಲಿ ತಯಾರಾಗಲಿರುವ ಸುಮಾರು 200 ಕಮೋವ್ 226ಟಿ ಯುದ್ಧ ಹೆಲಿಕಾಪ್ಟರ್ ಗಳು ಕರ್ನಾಟಕದ ಹೆಚ್ ಎಎಲ್ ಘಟಕದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ನಿನ್ನೆಯಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 16 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಅದರನ್ವಯ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿಸುವ ಒಪ್ಪಂದದೊಂದಿಗೆ ರಷ್ಯಾ ಸೇನೆಯ ಕಮೋವ್ 226ಟಿ ಹೆಲಿಕಾಪ್ಟರ್ ಅನ್ನು ಭಾರತದಲ್ಲಿ ತಯಾರಿಸುವ ಒಪ್ಪಂದ ಕೂಡ ಸೇರಿದ್ದವು. ಇದೀಗ ಈ ಕಮೋವ್ 226 ಟಿ ಹೆಲಿಕಾಪ್ಟರ್ ಅನ್ನು ಕರ್ನಾಟಕದಲ್ಲಿ ತಯಾರು ಮಾಡುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

ಪ್ರಸ್ತುತ ಯುದ್ಧದಂತಹ ಸಂದರ್ಭಗಳಲ್ಲಿ ಗಾಯಗೊಳ್ಳುವ ಸೈನಿಕರನ್ನು ಈ ಹೆಲಿಕಾಪ್ಚರ್ ಮೂಲಕ ಸಾಗಿಸುವ ಕಾರ್ಯ ಮಾಡಲಾಗುತ್ತಿದೆ. ಈ ಹೆಲಿಕಾಪ್ಟರ್ ಅನ್ನು ರಷ್ಯಾ ಸೇನೆ ಆ್ಯಂಬುಲೆನ್ಸ್ ರೀತಿಯಲ್ಲೂ ಬಳಕೆ ಮಾಡುತ್ತಿದೆ. ಡಬಲ್ ಎಂಜಿನ್ ಹೊಂದಿರುವ ಅತ್ಯಾಧುನಿಕ ಹೆಲಿಕಾಪ್ಟರ್, 4 ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಒಮ್ಮೆಲೆ 6ರಿಂದ 7 ಮಂದಿಯನ್ನು ಸಾಗಿಸಬಹುದಾಗಿದೆ. ಅಂತೆಯೇ ಇದು ಸಮುದ್ರ ಮಟ್ಟದಿಂದ ಸುಮಾರು 18000 ಅಡಿಗಳ ಮೇಲೂ ಹಾರುವ ಸಾಮರ್ಥ್ಯವನ್ನು ಹೊಂದಿದೆ.

ಮೂಲಗಳ ಪ್ರಕಾರ ಕರ್ನಾಟಕದ ತುಮಕೂರು ಎಚ್ ಎಎಲ್ ಘಟಕದಲ್ಲಿ ಕಮೋವ್ 226ಟಿ ಹೆಲಿಕಾಪ್ಟರ್ ಅನ್ನು ತಯಾರು ಮಾಡುವ ಸಾಧ್ಯತೆಗಳಿದ್ದು, ಹಳತಾಗಿರುವ ಚೀತಾ ಹಾಗೂ ಚೇತಕ್ ಹೆಲಿಕಾಪ್ಟರ್ ಗಳ ಬದಲಿಗೆ ಈ ಘಟಕದಲ್ಲಿ ಕಮೋವ್ 226ಟಿ ಹೆಲಿಕಾಪ್ಟರ್ ಅನ್ನು  ತಯಾರು ಮಾಡಬಹುದು ಎಂದು ಹೇಳಲಾಗುತ್ತಿದೆ.

ಸುಮಾರು 600 ಕೋಟಿ ರು. ವೆಚ್ಚದಲ್ಲಿ ಭಾರತದಲ್ಲಿ ಕಮೋವ್ 226ಟಿ ಸರಣಿಯ 200 ಹೆಲಿಕಾಪ್ಟರ್ ಗಳನ್ನು ನಿರ್ಮಾಣ ಮಾಡುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.