ಬ್ರಿಕ್ಸ್ ಶೃಂಗಸಭೆಯಲ್ಲಿ ‘ಗೋವಾ ಘೋಷಣೆ’ ಅಂಗೀಕಾರ
ಇತ್ತೀಚಿಗೆ ಭಾರತ ಸೇರಿದಂತೆ ಕೆಲವು ಬ್ರಿಕ್ಸ್ ರಾಷ್ಟ್ರಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಗೋವಾದ ಪಣಿಜಿಯಲ್ಲಿ ಭಾನುವಾರ ಮುಕ್ತಾಯಗೊಂಡ...

Published On :
ಪಣಜಿ: ಇತ್ತೀಚಿಗೆ ಭಾರತ ಸೇರಿದಂತೆ ಕೆಲವು ಬ್ರಿಕ್ಸ್ ರಾಷ್ಟ್ರಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಗೋವಾದ ಪಣಿಜಿಯಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆ ಖಂಡಿಸಿದ್ದು, ಬ್ರಿಕ್ಸ್ ಮಹಾ ಅಧಿವೇಶನದ ಬಳಿಕ ಹೊರಡಿಸಲಾದ ‘ಗೋವಾ ಘೋಷಣೆ’ಯಲ್ಲಿ ಈ ಖಂಡನೆಯನ್ನು ಪ್ರಕಟಿಸಲಾಯಿತು.
ಉಗ್ರ ಸಂಘಟನೆಗಳು ಮತ್ತು ಅವುಗಳೊಂದಿಗೆ ಸೇರಿದ ವ್ಯಕ್ತಿಗಳಿಂದ ನಡೆಯುವ ಅಂತಾರಾಷ್ಟ್ರೀಯ ಭಯೋತ್ಪಾದನೆ, ವಿಶೇಷವಾಗಿ ಭದ್ರತೆ, ಸಮಗ್ರತೆಗೆ ಧಕ್ಕೆ ಉಂಟು ಮಾಡುವ ಭಯೋತ್ಪಾದನೆಯು ಶಾಂತಿ ಮತ್ತು ಭದ್ರತೆಗೆ ಜಾಗತಿಕ ಬೆದರಿಕೆ ಎಂಬದನ್ನು ನಾವು ಮಾನ್ಯ ಮಾಡುತ್ತೇವೆ ಎಂದು ಬ್ರಿಕ್ಸ್ ನಾಯಕರು ಗೋವಾ ಘೋಷಣೆಯಲ್ಲಿ ತಿಳಿಸಿದ್ದಾರೆ.
‘ಹಲವಾರು ರಾಷ್ಟ್ರಗಳಲ್ಲಿ ಇರುವ ರಾಜಕೀಯ ಮತ್ತು ಭದ್ರತಾ ಅಸ್ಥಿರತೆಯು ಭಯೋತ್ಪಾದನೆ ಮತ್ತು ಉಗ್ರವಾದದ ಪರಿಣಾಮವಾಗಿ ಇನ್ನಷ್ಟು ತೀವ್ರಗೊಂಡಿರುವ ಬಗ್ಗೆ ನಾವು ಕಳವಳ ವ್ಯಕ್ತ ಪಡಿಸುತ್ತೇವೆ’ ಎಂದಿರುವ ಗೋವಾ ಘೋಷಣೆೆ, ತಮ್ಮ ನೆಲದಿಂದ ನಡೆಯುವ ಭಯೋತ್ಪಾದನೆ ಚಟುವಟಿಕೆ ತಡೆಯುವುದು ಆಯಾ ರಾಷ್ಟ್ರದ ಹೊಣೆಗಾರಿಕೆ ಎಂದೂ ಹೇಳಿದೆ.
ಶೃಂಗಸಭೆಯಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳೂ ಒಪ್ಪಂದಗಳಿಗೆ ಸಹಿಮಾಡಿ ಅವುಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬ್ರಿಕ್ಸ್ ಸಮೂಹದ ಮುಂದಿನ ಅಧ್ಯಕ್ಷನಾಗಿರುವ ಚೀನಾಕ್ಕೆ ನಾವು ಸಕಲ ಬೆಂಬಲವನ್ನೂ ನೀಡುತ್ತೇವೆ ಎಂದು ಪ್ರಕಟಿಸಿದರು.
ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ವಿಚಾರಲ್ಲಿ ನಮ್ಮ ಸಮಾಲೋಚನೆ ಮತ್ತು ಸಹಕಾರವನ್ನು ಇನ್ನಷ್ಟು ಬಲಪಡಿಸಲು ಬ್ರಿಕ್ಸ್ ಬದ್ಧವಾಗಿದೆ ಎಂದು ನುಡಿದ ಮೋದಿ, ಭಯೋತ್ಪಾದಕರ ಹಣಕಾಸು ಮೂಲ ಪತ್ತೆ ಹಚ್ಚುವಿಕೆ, ಶಸ್ತ್ರಾಸ್ತ್ರ, ಮದ್ದುಗುಂಡು, ಉಪಕರಣ ಸರಬರಾಜು ಮತ್ತು ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಗೆ ನೆರವಾಗುವುದನ್ನು ಗುರಿಯಾಗಿಸಿ ದಾಳಿ ನಡೆಸಲು ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


