ಪ್ರಧಾನ ಸುದ್ದಿ

ನೋಟ್ ಬ್ಯಾನ್ ವಿರುದ್ಧ "ಆಕ್ರೋಶ್ ದಿವಸ್"; ಕೇಂದ್ರದ ವಿರುದ್ಧ ಸಂಸತ್ ಕಲಾಪದಲ್ಲೂ ವಿಪಕ್ಷಗಳ "ಆಕ್ರೋಶ"

ಕೇಂದ್ರ ಸರ್ಕಾರದ ನೋಟು ನಿಷೇಧದ ವಿರುದ್ಧ ವಿಪಕ್ಷಗಳ ಆಕ್ರೋಶ ಮುಂದುವರೆದಿದ್ದು, ನೋಟ್ ಬ್ಯಾನ್ ವಿರುದ್ಧ ಆಕ್ರೋಶ ದಿವಸ್ ಚಾಲ್ತಿಯಲ್ಲಿರುವಂತೆಯೇ ಸಂಸತ್ ಕಲಾಪದಲ್ಲೂ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರೆಸಿವೆ.

ನೋಟ್ ಬ್ಯಾನ್ ವಿರುದ್ಧ "ಆಕ್ರೋಶ್ ದಿವಸ್"; ಕೇಂದ್ರದ ವಿರುದ್ಧ ಸಂಸತ್ ಕಲಾಪದಲ್ಲೂ ವಿಪಕ್ಷಗಳ "ಆಕ್ರೋಶ"
ಲೋಕಸಭೆ (ಸಂಗ್ರಹ ಚಿತ್ರ)
Published On :

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ವಿರುದ್ಧ ವಿಪಕ್ಷಗಳ ಆಕ್ರೋಶ ಮುಂದುವರೆದಿದ್ದು, ನೋಟ್ ಬ್ಯಾನ್ ವಿರುದ್ಧ ಆಕ್ರೋಶ ದಿವಸ್ ಚಾಲ್ತಿಯಲ್ಲಿರುವಂತೆಯೇ ಸಂಸತ್ ಕಲಾಪದಲ್ಲೂ ವಿಪಕ್ಷಗಳು ಕೇಂದ್ರ ಸರ್ಕಾರದ  ವಿರುದ್ಧ ತಮ್ಮ ಪ್ರತಿಭಟನೆ ಮುಂದುವರೆಸಿವೆ.

ಸಂಸತ್ ಕಲಾಪಕ್ಕೂ ಮೊದಲು ಸಂಸತ್ ಭವನದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ತಂತ್ರಗಾರಿಕೆ ಸಭೆ ನಡೆಸಿದ ವಿಪಕ್ಷಗಳು, ಕಲಾಪದಲ್ಲಿ ಕೇಂದ್ರ ಸರ್ಕಾರದ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವ ಕುರಿತು ನಿರ್ಧರಿಸಿವೆ.  ಅಂತೆಯೇ ಕೇಂದ್ರ ಸರ್ಕಾರವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಚರ್ಚೆ ನಡೆಸಿವೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ ನೋಟು ನಿಷೇಧ ವಿಚಾರ ಮೊದಲೇ ಕೆಲವು ಪ್ರಭಾವಿ ರಾಜಕಾರಣಿಗಳಿಗೆ ಹಾಗೂ ಪ್ರಭಾವಿ  ಉದ್ಯಮಿಗಳಿಗೆ ತಿಳಿದಿತ್ತು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು  ಹೇಳಲಾಗುತ್ತಿದೆ. ಜೆಡಿಎಯು ಹೊರತು ಪಡಿಸಿ ಪ್ರಮುಖ ವಿಪಕ್ಷಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.

ಲೋಕಸಭೆಯಲ್ಲಿ ಕೋಲಾಹಲ; ಕಲಾಪ ಮುಂದೂಡಿಕೆ
ಇನ್ನು ಕಲಾಪ ಆರಂಭವಾಗುತ್ತಿದ್ದಂತೆಯೇ ಟಿಎಂಸಿ ಹಾಗೂ ಕಾಂಗ್ರೆಸ್ ಪಕ್ಷಗಳು ನೋಟು ನಿಷೇಧ ಕುರಿತಂತೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಸ್ಪೀಕರ್ ಸಮಿತ್ರಾ ಮಹಾಜನ್ ಅವರನ್ನು ಒತ್ತಾಯಿಸಿದವು. ಆದರೆ ಇದಕ್ಕೆ  ಒಪ್ಪದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪ್ರಶ್ನೋತ್ತರ ಅವದಿಯ ಬಳಿಕೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು. ಇದಕ್ಕೊಪ್ಪದ ಪ್ರತಿಪಕ್ಷಗಳು ಈಗಲೇ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದವು.  ಅಲದೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದವು. ಟಿಎಂಸಿ ಮತ್ತು ಕಾಂಗ್ರೆಸ್ ಪಕ್ಷದ ಸುಮಾರು 30 ಅಧಿಕ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಸ್ಪೀಕರ್  ಸದಸ್ಯರನ್ನು ಶಾಂತಿವಾಗಿಸಲು ಯತ್ನಿಸಿದರಾದರೂ ಸದಸ್ಯ ಶಾಂತವಾಗದ ಹಿನ್ನಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.