ಹಳೆಯ ನೋಟುಗಳಿಗೆ 24 ಗಂಟೆಗಳ ಡೆಡ್ ಲೈನ್!
ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರು.ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡುವ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳುತ್ತಿದ್ದು, ನಾಳೆಯಿಂದ ಸರ್ಕಾರಿ ಕಚೇರಿಗಳಲ್ಲೂ ಹಳೆಯನೋಟುಗನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

ನವದೆಹಲಿ: ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರು.ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡುವ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳುತ್ತಿದ್ದು, ನಾಳೆಯಿಂದ ಸರ್ಕಾರಿ ಕಚೇರಿಗಳಲ್ಲೂ ಹಳೆಯನೋಟುಗನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರ ಸರ್ಕಾರ ಕಚೇರಿಗಳಾದ ಅಂಚೆಕಚೇರಿ, ಸರ್ಕಾರಿ ಆಸ್ಪತ್ರೆ, ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರಗಳು, ಹೆದ್ದಾರಿ ಟೋಲ್ ಕೇಂದ್ರ ಸೇರಿದಂತೆ ಇತರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕೇಂದ್ರಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅನುವು ಮಾಡಿಕೊಟ್ಟಿತ್ತು. ನೀರಿನ ಬಿಲ್ ಪಾವತಿ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಇತರೆ ಬಿಲ್ ಗಳನ್ನು ಸರ್ಕಾರಿ ಕಚೇರಿಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡಲಾಗಿತ್ತು. ಆದರೆ ಈ ಕಾಲಾವಧಿ ಇಂದಿಗೆ ಅಂತ್ಯವಾಗುತ್ತಿದ್ದು, ನಾಳೆಯಿಂದ ಎಲ್ಲ ಸರ್ಕಾರ ಕಚೇರಿಗಳಲ್ಲಿ ಹಳೆಯ ನೋಟು ಚಲಾವಣೆಯಾಗುವುದಿಲ್ಲ.
ಬ್ಯಾಂಕ್ ಗಳಲ್ಲಿ ಡಿ.30ರವೆರೆಗೂ ಹಳೆಯ ನೋಟು ಠೇವಣಿಗೆ ಅವಕಾಶ
ಹಳೆಯ ನೋಟುಗಳ ಚಲಾವಣೆ ಇಂದಿಗೆ ಕೊನೆಯಾಗುವುದರಿಂದ ಜನತೆ ಕಂಗಾಲಾಗಾವುದು ಬೇಡ. ಏಕೆಂದರೆ ಹಳೆಯ ನೋಟುಗಳ ಚಲಾವಣೆ ರದ್ದಾಗಿದೆಯಾದರೂ, ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ತಮ್ಮ ತಮ್ಮ ಖಾತೆಗಳಲ್ಲಿ ಠೇವಣಿ ಮಾಡಬಹುದಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಹಳೆಯ ನೋಟುಗಳನ್ನು ಠೇವಣಿ ಮಾಡುವ ಅವಧಿಯನ್ನು ಡಿಸೆಂಬರ್ 30ರವರೆಗೂ ವಿಸ್ತರಿಸಿದ್ದು, ಅಲ್ಲಿಯವರೆಗೂ ಜನರು ತಮ್ಮಲ್ಲಿರುವ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


