ಮೋದಿ ಟೀಕೆ; ಶತ್ರುಘನ್ ಸಿನ್ಹಾ ಕಾಂಗ್ರೆಸ್ ಸೇರುವಂತೆ ಬಿಜೆಪಿ ಮುಖಂಡ ಸಲಹೆ
ನಟ ಮತ್ತು ಲೋಕಸಭಾ ಬಿಜೆಪಿ ಸದಸ್ಯ ಶತ್ರುಘನ್ ಸಿನ್ಹಾ ಅವರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಬಿಹಾರ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಗುರುವಾರ ಸಲಹೆ ನೀಡಿದ್ದಾರೆ.

Published On :
ಪಾಟ್ನಾ: ನಟ ಮತ್ತು ಬಿಜೆಪಿ ಲೋಕಸಭಾ ಸದಸ್ಯ ಶತ್ರುಘನ್ ಸಿನ್ಹಾ ಅವರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಬಿಹಾರ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಗುರುವಾರ ಸಲಹೆ ನೀಡಿದ್ದಾರೆ.
"ಪ್ರಧಾನಿ ಅವರ ಎಲ್ಲ ನಡೆಗಳಲ್ಲೂ ತಪ್ಪು ಕಾಣುವ ಸಿನ್ಹಾ ಕಾಂಗ್ರೆಸ್ ಸೇರುವುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು" ಎಂದು ಮೋದಿಯವರನ್ನು ಖಂಡಿಸಿ ಸಿನ್ಹಾ ಟ್ವೀಟ್ ಮಾಡಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ಮೋದಿ ಆಪ್ ಮೂಲಕ ನೋಟು ಹಿಂಪಡೆತ ನಿರ್ಧಾರವನ್ನು ೯೦% ಸ್ವಾಗತಿಸಿದ್ದಾರೆ ಎಂಬುದನ್ನು ಪ್ರಧಾನಿ ಹಂಚಿಕೊಂಡ ನಡೆಯನ್ನು ಸಿನ್ಹಾ ಟೀಕಿಸಿದ್ದರು.
"ಮೂರ್ಖರ ಅರಮನೆಯಲ್ಲಿ ವಾಸಿಸುವುದನ್ನು ಮೊದಲು ನಿಲ್ಲಿಸಬೇಕು ಮತ್ತು ಪಟ್ಟಭಧ್ರ ಹಿತಾಸಕ್ತಿಗಳು ನಡೆಸುವ ಸಮೀಕ್ಷೆಗಳು ಮತ್ತು ಸ್ವಹಿತಾಸಕ್ತಿಯ ಕಥೆಗಳಿಗೆ ಮರುಳಾಗಬಾರದು" ಎಂದು ಸಿನ್ಹಾ ಟ್ವೀಟ್ ಮಾಡಿದ್ದರು.
ಸಿನ್ಹಾ ಅವರ ಟ್ವೀಟ್ ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಬಹುತೇಕ ಬಿಜೆಪಿ ಮುಖಂಡರ ಆಂಬೋಣ. 'ಬಿಹಾರಿ ಬಾಬು ' ಎಂದೇ ಹೆಸರಾಗಿರುವ ಶತ್ರುಘನ್ ಸಿನ್ಹಾ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಸದಸ್ಯರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿCongressಕಾಂಗ್ರೆಸ್Shatrughan SinhaDemonetisationMangal Pandeyಶತ್ರುಘನ್ ಸಿನ್ಹಾಮಂಗಲ್ ಪಾಂಡೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


