ಇನ್ಮುಂದೆ ಬಿಗ್ ಬಜಾರ್ ನಲ್ಲೂ ಹಣ ಡ್ರಾ ಮಾಡಬಹುದು
ಪೆಟ್ರೋಲ್ ಬಂಕ್ ನಂತರ ಬಿಗ್ ಬಜಾರಲ್ಲೂ ಹಣ ಡ್ರಾ ಮಾಡಬಹುದಾಗಿದೆ.ಹಣದ ಅಗತ್ಯವಿದ್ದರೆ ಬಿಗ್ ಬಜಾರ್ ಮಳಿಗೆಗೆ ತೆರಳಿ ನಿಮ್ಮ ಕಾರ್ಡ್ ...

ನವದೆಹಲಿ: ಪೆಟ್ರೋಲ್ ಬಂಕ್ ನಂತರ ಬಿಗ್ ಬಜಾರಲ್ಲೂ ಹಣ ಡ್ರಾ ಮಾಡಬಹುದಾಗಿದೆ.ಹಣದ ಅಗತ್ಯವಿದ್ದರೆ ಬಿಗ್ ಬಜಾರ್ ಮಳಿಗೆಗೆ ತೆರಳಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿದ್ರೆ 2000 ರೂ. ಹಣವನ್ನು ಪಡೆಯಬಹುದಾಗಿದೆ.
ಎಟಿಎಂ ಗಳಲ್ಲಿ ಹೆಚ್ಚುತ್ತಿರುವ ಕ್ಯೂ, ಹಣ ಬೇಗ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ಬಜಾರ್ ಜೊತೆ ಟೈ ಅಪ್ ಮಾಡಿಕೊಂಡಿದ್ದು, ದೇಶದ 258 ಬಿಗ್ ಬಜಾರ್ ಮಳಿಗೆಗಳಲ್ಲಿ ಜನರಿಗೆ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಒದಗಿಸಿದೆ.
ಗುರುವಾರದಿಂದ ಬಿಗ್ ಬಜಾರ್ ಮಳಿಗೆಯಲ್ಲಿ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಸ್ವೈಪ್ ಮಾಡಿ ಹಣ ಪಡೆಯಬಹುದು. ಬಿಗ್ ಬಜಾರ್ ಮಳಿಗೆಯ ಕ್ಯಾಷ್ ಕೌಂಟರ್‍ಗೆ ತೆರಳಿ ನೀವು ಈ ಸೌಲಭ್ಯ ಪಡೆಯಬಹುದು ಎಂದು ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಈ ಬಗ್ಗೆ ಟ್ವೀಟ್ ಮಾಡಿದ್ದು ಹೇಳಿದ್ದಾರೆ.
ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರು ಬಿಗ್ ಬಜಾರ್‍ನಲ್ಲಿ 2 ಸಾವಿರ ರೂ. ನಗದು ಹಣ ಪಡೆಯಲು ಏನು ಮಾಡಬೇಕು ಎಂದೂ ಇದರಲ್ಲಿ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


