ಪ್ರಧಾನ ಸುದ್ದಿ

ದೆಹಲಿಯ ಕಾಣೆಯಾದ ಬಾಲಕಿಯ ಕೊಲೆ; ಮೃತದೇಹ ಪತ್ತೆ

ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ನಾಲ್ಕು ವರ್ಷದ ಬಾಲಕಿ ಕೊಲೆಯಾಗಿದ್ದು, ಸೋಮವಾರ ರೈಲ್ವೆ ವಸತಿ ಸಮುಚ್ಚಯದ ಬಳಿ ಮೃತದೇಶ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿಯ ಕಾಣೆಯಾದ ಬಾಲಕಿಯ ಕೊಲೆ; ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ನಾಲ್ಕು ವರ್ಷದ ಬಾಲಕಿ ಕೊಲೆಯಾಗಿದ್ದು, ಸೋಮವಾರ ರೈಲ್ವೆ ವಸತಿ ಸಮುಚ್ಚಯದ ಬಳಿ ಮೃತದೇಶ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ನಾರ್ತ್ ವೆಸ್ಟ್ ಜಿಲ್ಲೆಯ ಸ್ಲಮ್ ಬಳಿಯಿದ್ದ ಬ್ರಿಟಾನಿಯಾ ಕಾರ್ಖಾನೆಯ ಬಳಿ ಆಟವಾಡುತ್ತಿದ್ದ ಬಾಲಕಿ ಸುಮಾರು ರಾತ್ರಿ ೮:೩೦ ಕ್ಕೆ ಕಾಣೆಯಾಗಿದ್ದಾಳೆ. ಕೇಶವಪುರಂ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ೬ ಘಂಟೆಗೆ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಉಪ ಆಯುಕ್ತ ವಿಜಯ್ ಸಿಂಗ್ ಹೇಳಿದ್ದಾರೆ. 
ಭಾನುವಾರದಿಂದ ಕಾಣೆಯಾಗಿರುವ ಟೆಂಪೋ ಚಾಲಕ ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಅಪ್ರಾಪ್ತ ಬಾಲಕಿಯ ಚಿಕ್ಕಪ್ಪ ಕಮಲೇಶ್ ಕುಮಾರ್ ಆರೋಪಿಸಿದ್ದಾರೆ. 
ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಲಾಗಿದೆ ಎಂದು ಕೂಡ ಅವರು ಆರೋಪಿಸಿದ್ದು, ವ್ಯಕ್ತಿಯೊಬ್ಬ ಬಾಲಕಿಯ ಕೈಹಿಡಿದು ನಡೆಯುತ್ತಿರುವ ದೃಶ್ಯವನ್ನು ಹತ್ತಿರದ ಸಂಸ್ಥೆಯೊಂದರಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನೋಡಿರುವುದಾಗಿ ಅವರು ಆರೋಪಿಸಿದ್ದಾರೆ. 
"ನಾವು ಸಿಸಿಟಿವಿ ದೃಶ್ಯಾವಳಿಯನ್ನು ಪಡೆದಿದ್ದೇವೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಿದ್ದೇವೆ. ಲೈಂಗಿಕ ದೌರ್ಜನ್ಯವನ್ನು ಅಲ್ಲಗೆಳೆಯುವಂತಿಲ್ಲ. ಇದು ಶವಪರೀಕ್ಷೆಯ ನಂತರವಷ್ಟೇ ತಿಳಿಯುತ್ತದೆ" ಎಂದು ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.