ತೆರಿಗೆ ಇಲಾಖೆ ಶಾಕ್: ನೋಟು ನಿಷೇಧ ಬಳಿಕ ಖಾತೆಗೆ ಹೆಚ್ಚು ಹಣ ಠೇವಣಿ, ಬ್ಯಾಂಕ್ ಗ್ರಾಹಕರಿಗೆ ನೋಟಿಸ್!
ನೋಟು ನಿಷೇಧದ ಬಳಿಕ ಕಾಳಧನಿಕರಿಗೆ ಮತ್ತೊಂದು ಶಾಕ್ ನೀಡಿರುವ ತೆರಿಗೆ ಇಲಾಖೆ ಬ್ಯಾಂಕ್ ಖಾತೆಯಲ್ಲಿ ಕಳೆದೊಂದು ವಾರದಿಂದ ಹೆಚ್ಚು ಹಣ ಠೇವಣಿ ಮಾಡಿದ ಗ್ರಾಹಕರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ: ನೋಟು ನಿಷೇಧದ ಬಳಿಕ ಕಾಳಧನಿಕರಿಗೆ ಮತ್ತೊಂದು ಶಾಕ್ ನೀಡಿರುವ ತೆರಿಗೆ ಇಲಾಖೆ ಬ್ಯಾಂಕ್ ಖಾತೆಯಲ್ಲಿ ಕಳೆದೊಂದು ವಾರದಿಂದ ಹೆಚ್ಚು ಹಣ ಠೇವಣಿ ಮಾಡಿದ ಗ್ರಾಹಕರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ಬಳಿಕ ಕಂಗಾಲಾಗಿರುವ ಕಾಳಧನಿಕರು ಹೇಗಾದರೂ ಸರಿ ತಮ್ಮಲ್ಲಿರುವ ಹಣವನ್ನು ಬಿಳಿ ಮಾಡಲು ಹಾಗೂ ಹಳೆಯ ನೋಟುಗಳನ್ನು ಬದಲಿಸಲು ಹವಣಿಸುತ್ತಿದ್ದಾರೆ. ದಲ್ಲಾಳಿಗಳಿಗೆ ಕಮಿಷನ್ ನೀಡುವ ಮೂಲಕ ಕಪ್ಪುಹಣವನ್ನು ಬಿಳಿಯಾಗುಸುವ ಹುನ್ನಾರ ನಡೆಯುತ್ತಿರುವ ಹಿನ್ನಲೆಯಲ್ಲಿ ತೆರಿಗೆ ಇಲಾಖೆ ನೋಟು ನಿಷೇಧದ ಬಳಿಕ ಖಾತೆಗಳಿಗೆ ಹೆಚ್ಚು ಹಣವನ್ನು ಠೇವಣಿ ಮಾಡಿದ ಮತ್ತು ಅತೀ ಹೆಚ್ಚು ಪ್ರಮಾಣದಲ್ಲಿ ಹಣ ಬದಲಾವಣೆ ಮಾಡಿದ ಬ್ಯಾಂಕ್ ಗ್ರಾಹಕರಿಗೆ ವಿವರ ಕೋರಿ ನೋಟಿಸ್ ಜಾರಿ ಮಾಡಲು ಮುಂದಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ಈ ಬಗ್ಗೆ ತೆರಿಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ತೆರಿಗೆ ಕಾಯ್ದೆ ಸೆಕ್ಷನ್ 133 (6) (ಮಾಹಿತಿ ಪಡೆಯುವ ಹಕ್ಕು)ರ ಅಡಿಯಲ್ಲಿ ಬ್ಯಾಂಕ್ ಖಾತೆ ಗ್ರಾಹಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಖಾತೆ ವಹಿವಾಟನ್ನು ಆಧರಿಸಿ ವಹಿವಾಟಿನಲ್ಲಿ ಶಂಕೆ ವ್ಯಕ್ತವಾದ ಮತ್ತು ಒಂದು ಖಾತೆಗೆ 2.5ಲಕ್ಷಕ್ಕೂ ಅಧಿಕ ಹಣ ಠೇವಣಿ ಮಾಡಿದ ಬ್ಯಾಂಕ್ ಖಾತೆದಾರರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ವಿವರ ಕೋರಿ ನೋಟಿಸ್ ಜಾರಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಕಾಳಧನಿಕರ ಮೇಲೆ ಕ್ರಮಕ್ಕೆ ಮುಂದಾಗಿರುವ ಕೇಂದ್ರ ತೆರಿಗೆ ಇಲಾಖೆ ಇದೀಗ ಸಂಪೂರ್ಣ ಕಾರ್ಯಪ್ರವೃತ್ತವಾಗಿದ್ದು, ಶಂಕಾಸ್ಪದ ಖಾತೆಗಳನ್ನು ಮುಲಾಜಿಲ್ಲದೇ ತನಿಖೆಗೊಳಪಡಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


