ನ್ಯಾಷನಲ್ ಹೆರಾಲ್ಡ್ ಅಂತರ್ಜಾಲ ಸುದ್ದಿ ತಾಣ ಅನಾವರಣ
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮೊದಲ ಅಂತರ್ಜಾಲ ಆವೃತ್ತಿಯನ್ನು ಸೋಮವಾರ ಅನಾವರಣಗೊಳಿಸಿದೆ.
Published On :
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮೊದಲ ಅಂತರ್ಜಾಲ ಆವೃತ್ತಿಯನ್ನು ಸೋಮವಾರ ಅನಾವರಣಗೊಳಿಸಿದೆ.
"ಪಂಡಿತ್ ಜವಹಾರ್ ಲಾಲ್ ನೆಹರು ಸಂಸ್ಥಾಪಿಸಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆ www.nationalheraldindia.com ನ ಮೊದಲ ಇಂಗ್ಲಿಷ್ ಆವೃತ್ತಿಯನ್ನು ಇಂದು ಅನಾವರಣಗೊಳಿಸಿದೆ" ಎಂದು ಕಾಂಗ್ರೆಸ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ನ್ಯಾಷನಲ್ ಹೆರಾಲ್ಡ್ (ಇಂಗ್ಲಿಷ್) ಮತ್ತು ನವಜೀವನ (ಹಿಂದಿ) ಪತ್ರಿಕೆಗಳು ಮತ್ತೆ ಪ್ರಕಟಣೆ ಆರಂಭಿಸಲಿವೆ ಎಂದು ಕಾಂಗ್ರೆಸ್ ಪಕ್ಷ ಆಗಸ್ಟ್ ನಲ್ಲಿ ಘೋಷಿಸಿತ್ತು. ೨೦೦೮ ರಿಂದ ಈ ಪತ್ರಿಕೆಗಳು ನಿಂತುಹೋಗಿದ್ದವು.
"ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ಮೊದಲು ಅಂತರ್ಜಾಲ ಆವೃತ್ತಿಯನ್ನು ಹೊರತಂದು ನಂತರ ಹಂತಹಂತಗಳಲ್ಲಿ ಪ್ರಕಟಣೆಯನ್ನು ಹೊರಡಿಸಲಿದೆ.
"ಸಂಸ್ಥಾಪಕ ಪಂಡಿತ್ ಜವಾಹಲ್ ಲಾಲ್ ನೆಹರು ಅವರು ಹಾಕಿಕೊಟ್ಟ ಗುರಿ ಮತ್ತು ಮೌಲ್ಯಗಳೊಂದಿಗೆ ಡಿಜಿಟಲ್ ಆವೃತ್ತಿ ಕೂಡ ಕೆಲಸ ನಿರ್ವಹಿಸಲಿದೆ" ಎಂದು ಹೇಳಿಕೆ ತಿಳಿಸಿದೆ.
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ನೀಡಿದ್ದ ದೂರಿನ ಮೇರೆಗೆ ಈ ಪತ್ರಿಕೆಗಳ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ದೆಹಲಿ ಕೋರ್ಟ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿತ್ತು. ಈಗ ಸದ್ಯಕ್ಕೆ ಈ ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sonia Gandhiಸೋನಿಯಾ ಗಾಂಧಿSubramanian Swamyಸುಬ್ರಮಣಿಯನ್ ಸ್ವಾಮಿwebsiteರಾಹುಲ್ ಗಾಂಧಿನ್ಯಾಷನಲ್ ಹೆರಾಲ್ಡ್National Herald
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

