ಪ್ರಧಾನ ಸುದ್ದಿ

ಕೇರಳ ಬ್ಯಾಂಕ್ ನಲ್ಲಿ ೫.೫ ಲಕ್ಷ ಜಮಾ ಮಾಡಲು ಬಂದಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವು

ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್ (ಎಸ್ ಬಿ ಟಿ) ನಲ್ಲಿ ಹಣ ಜಮಾ ಮಾಡಲು ಬಂದಿದ್ದ ಕೇರಳ ವಿದ್ಯುಚ್ಛಕ್ತಿ ಮಂಡಳಿಯ ಸಿಬ್ಬಂದಿಯೊಬ್ಬರು ಆ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಪ್ರಾಣ

ಕೇರಳ ಬ್ಯಾಂಕ್ ನಲ್ಲಿ ೫.೫ ಲಕ್ಷ ಜಮಾ ಮಾಡಲು ಬಂದಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವು
ಸಾಂದರ್ಭಿಕ ಚಿತ್ರ
Published On :
ಕಣ್ಣೂರು: ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್ (ಎಸ್ ಬಿ ಟಿ) ನಲ್ಲಿ ಹಣ ಜಮಾ ಮಾಡಲು ಬಂದಿದ್ದ ಕೇರಳ ವಿದ್ಯುಚ್ಛಕ್ತಿ ಮಂಡಳಿಯ ಸಿಬ್ಬಂದಿಯೊಬ್ಬರು ಆ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 
ಮೃತಪಟ್ಟವರನ್ನು ೪೮ ವರ್ಷದ ಉನ್ನಿ ಎಂದು ಗುರುತಿಸಲಾಗಿದ್ದು, ಪಿಣರಾಯಿಯ ನಿವಾಸಿ ಎಂದು ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ಥಾಲಸ್ಸೇರಿ ಪೊಲೀಸರು ಹೇಳಿದ್ದಾರೆ. 
ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರಿಗೆ ಇನ್ನು ತಿಳಿದುಬಂದಿಲ್ಲ. 
"ಅವರ ಚೀಲದಿಂದ ೫.೫ ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಗುರುತು ಹೇಳಿಕೊಳ್ಳಲು ಇಚ್ಛಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಎಸ್ ಬಿ ಟಿ ಆ ಕಟ್ಟಡದ ಎರಡನೇ ಮಹಡಿಯಲ್ಲಿ ಕಚೇರಿ ಹೊಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.