ಪ್ರಧಾನ ಸುದ್ದಿ

500 ಮತ್ತು 1000 ರೂ ನೋಟುಗಳ ಹಿಂಪಡೆತ ನಿರ್ಧಾರ ತುಘಲಕ್ ದರ್ಬಾರು: ಎಎಪಿ

500 ಮತ್ತು 1000 ರೂ ಮೌಲ್ಯದ ನೋಟುಗಳನ್ನು ಹಿಂಪಡೆಯುತ್ತಲಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತುಘಲಕ್ ಫರ್ಮಾನು (ಆದೇಶ) ಎಂದು ಆಮ್ ಆದ್ಮಿ ಪಕ್ಷ ಬುಧವಾರ ದೂಷಿಸಿದೆ.

500 ಮತ್ತು 1000 ರೂ ನೋಟುಗಳ ಹಿಂಪಡೆತ ನಿರ್ಧಾರ ತುಘಲಕ್ ದರ್ಬಾರು: ಎಎಪಿ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: 500 ಮತ್ತು 1000 ರೂ ಮೌಲ್ಯದ ನೋಟುಗಳನ್ನು ಹಿಂಪಡೆಯುತ್ತಲಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತುಘಲಕ್ ಫರ್ಮಾನು (ಆದೇಶ) ಎಂದು ಆಮ್ ಆದ್ಮಿ ಪಕ್ಷ ಬುಧವಾರ ದೂಷಿಸಿದೆ. ಇದು ಕಪ್ಪು ಹಣವನ್ನು ಹೊಂದಿರುವ ದೊಡ್ಡ ದೊಡ್ಡ ಉದ್ಯಮಿಗಳನ್ನು ರಕ್ಷಿಸುವ ತಂತ್ರ ಎಂದು ಕೂಡ ಪಕ್ಷ ದೂರಿದೆ. 
"500 ಮತ್ತು 1000 ರೂ ಮೌಲ್ಯದ ನೋಟುಗಳನ್ನು ಹಿಂಪಡೆಯುವ ಪ್ರಧಾನಿ ಮೋದಿ ಅವರ ತುಘಲಕ್ ನಿರ್ಧಾರ ರೈತರು ಮತ್ತು ಬಡವರಿಗೆ ದೊಡ್ಡ ಹೊಡೆತ ನೀಡಲಿದೆ" ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ. 
"ಇದು ಕಪ್ಪು ಹಣವನ್ನು ಹೊಂದಿರುವ ದೊಡ್ಡ ದೊಡ್ಡ ಉದ್ಯಮಿಗಳನ್ನು ರಕ್ಷಿಸುವ ಕ್ರಮ" ಎಂದು ಕೂಡ ಅವರು ಹೇಳಿದ್ದಾರೆ. 
ಮಧ್ಯಕಾಲಿಕ ಭಾರತದ ರಾಜ ತುಘಲಕ್ ಆತುರದ ನಿರ್ಧಾರಗಳಿಗೆ ಹೆಸರಾದವನು. ದೆಹಲಿಯಿಂದ ದಕ್ಷಿಣ ಭಾರತದ ದೌಲತಾಬಾದ್ ಗೆ ರಾಜಧಾನಿಯನ್ನು ವರ್ಗಾಯಿಸಿದ, ಮತ್ತು ನೋಟುಗಳ ಚಲಾವಣೆಯನ್ನು ಬದಲಾಯಿಸಿದ ಈ ರಾಜನ ನಿರ್ಧಾರಗಳನ್ನು ಹುಚ್ಚುತನದ ತುಘಲಕ್ ಫರ್ಮಾನುಗಳು ಎಂದು ಕರೆಯಲಾಗುತ್ತದೆ.
"ಮೋದಿ ಸರ್ಕಾರ ದೊಡ್ಡ ಉದ್ದಿಮೆದಾರರಾದ ಅದಾನಿ, ಅಂಬಾನಿ ಮತ್ತು ರಾಜಕಾರಣಿಗಳಾದ ಶರದ್ ಪವಾರ್, ಯಡಿಯೂರಪ್ಪ, ಸುಖಬೀರ್ ಸಿಂಗ್ ಬಾದಲ್ ಮತ್ತಿತರ ಉತ್ತರ ಪ್ರದೇಶದ ಬಿಜೆಪಿ ಮುಖಂಡರಿಗೆ ಕಪ್ಪು ಹಣವನ್ನು ಸುರಕ್ಷಿತಗೊಳಿಸಿಕೊಳ್ಳಲು ನರೇಂದ್ರ ಮೋದಿ ಸರಕಾರ ಮೊದಲೇ ತಿಳಿಸಿತ್ತು ಎಂದು ಜನ ನಂಬಿದ್ದಾರೆ" ಎಂದು ಕೂಡ ಅವರು ದೂಷಿಸಿದ್ದಾರೆ. 
ಸಾಮಾನ್ಯ ಮನುಷ್ಯನಿಗೆ ಸಂಕಟ ತರಲು ಮಾತ್ರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. 
"ಈ ನಿರ್ಧಾರದಿಂದ ಇಡೀ ದೇಶ ಕಂಗಾಲಾಗಿದೆ. ಈ ಸರ್ಕಾರ ದೊಡ್ಡ ಸಾಲಗಾರರನ್ನು ಮತ್ತು ಸ್ವಿಸ್ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಇಟ್ಟಿರುವವರನ್ನು ಹಿಡಿಯಲು ಬಯಸುವುದಿಲ್ಲ ಬದಲಾಗಿ ಸಾಮಾನ್ಯರಿಗೆ ತೊಂದರೆ ಕೊಡುವುದುವುದಕ್ಕೆ ನಿಂತಿದೆ" ಎಂದು ಸಿಂಗ್ ಹೇಳಿದ್ದಾರೆ. 
"ಯಾವುದೇ ಬ್ಯಾಂಕ್ ಖಾತೆ ಹೊಂದದ ಮತ್ತು ಈ ನೋಟುಗಳನ್ನು ಹೊಂದಿದ್ದು ಸಣ್ಣ ಉಳಿತಾಯ ಇರುವ ಜನ ಏನು ಮಾಡಬೇಕು ಹೇಳಿ ಮೋದಿ ಅವರೇ" ಎಂದು ಕೂಡ ಸಿಂಗ್ ಪ್ರಶ್ನಿಸಿದ್ದಾರೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.