ಪ್ರಧಾನ ಸುದ್ದಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕರಾಳ ದಿನಗಳನ್ನು ಕಳೆಯುತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಅವರಿಗೆ ಅಧಿಕಾರದ ಗೀಳು ಎಂದಿದ್ದು, ಈ ಸದರಿ ಸರ್ಕಾರದಡಿ ಪ್ರಜಾಪ್ರಭುತ್ವ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕರಾಳ ದಿನಗಳನ್ನು ಕಳೆಯುತ್ತಿದೆ: ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಅವರಿಗೆ ಅಧಿಕಾರದ ಗೀಳು ಎಂದಿದ್ದು, ಈ ಸದರಿ ಸರ್ಕಾರದಡಿ ಪ್ರಜಾಪ್ರಭುತ್ವ ಕರಾಳ ದಿನಗಳನ್ನು ಕಳೆಯುತ್ತಿದೆ ಎಂದು ಸೋಮವಾರ ಹೇಳಿದ್ದಾರೆ. 
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಟಿ ವಿ ವಾಹಿನಿಗಳಿಗೆ ಶಿಕ್ಷೆ ಕೊಡಲಾಗುತ್ತಿದೆ ಎಂದಿದ್ದಾರೆ. ಹಾಗೆಯೇ ಪಾಕಿಸ್ತಾನದೊಂದಿಗೆ ಸರ್ಕಾರ ನಡೆಸುತ್ತಿರುವ ರಾಜತಾಂತ್ರಿಕ ನೀತಿಯನ್ನು ಕೂಡ ಅವರು ಪ್ರಶ್ನಿಸಿದ್ದು ಇಸ್ಲಮಾಬಾದ್ ಜೊತೆ ವ್ಯವಹರಿಸುವಾಗ ಸರ್ಕಾರ ಒಂದು ವಿಪರೀತದಿಂದ ಮತ್ತೊಂದು ವಿಪರೀತಕ್ಕೆ ವಾಲುತ್ತಿದೆ ಎಂದು ದೂರಿದ್ದಾರೆ. 
"ಮೋದಿ ಸರ್ಕಾರಕ್ಕೆ ಅಧಿಕಾರದ ಗೀಳು. ಅವರ ಜೊತೆಗೆ ಭಿನ್ನಾಭಿಪ್ರಾಯ ಹೊಂದಿರುವವರನ್ನು ಹತ್ತಿಕ್ಕಲು ಹವಣಿಸುತ್ತದೆ. ಪ್ರಶ್ನೆಗಳನ್ನು ಕೇಳಿದರೆ ಬೆದರಿ ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕ ಸಮಾಜವನ್ನು ಎದುರು ಮಾಡಿ ಅಡಗಿಕೊಳ್ಳುತ್ತದೆ, ಸುದ್ದಿ ವಾಹಿನಿಗಳಿಗೆ ಬೆದರಿಕೆ ಹಾಕಿ ಅವರಿಗೆ ನಿಷೇಧ ಹಾಕಲಾಗುತ್ತಿದೆ" ಎಂದು ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 
"ಸರ್ಕಾರಕ್ಕೆ ಉತ್ತರಿಸಿ ಎಂದರೆ ವಿಪಕ್ಷ ನಾಯಕರನ್ನು ಬಂಧಿಸಲಾಗುತ್ತಿದೆ" ಎಂದು ಕೂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಸಮಯದಲ್ಲಿ ಹೇಳಿದ್ದಾರೆ. 
"ಪ್ರಸಕ್ತ ಸರ್ಕಾರದ ಸಮಯದಲ್ಲಿ ಪ್ರಜಾಪ್ರಭುತ್ವ ಕರಾಳ ದಿನಗಳನ್ನು ದೂಕುತ್ತಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಇದು ಈ ಭಯಂಕರ ಸನ್ನಿವೇಶವನ್ನು ಸೋಲಿಸುವ ನಮ್ಮ ಆತ್ಮಬಲವನ್ನು ವೃದ್ಧಿಸಲಿದೆ" ಎಂದು ಕೂಡ ಅವರು ಹೇಳಿದ್ದಾರೆ. 
ಪಾಕಿಸ್ತಾನ ಮತ್ತು ಜಮ್ಮು ಕಾಶ್ಮೀರದೆಡೆಗೆ ಮೋದಿ ಸರ್ಕಾರದ ನೀತಿಯನ್ನು ಖಂಡಿಸಿರುವ ಅವರು, ದಶಕಗಳಲ್ಲಿ ಅತಿ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.
ಈ ಸರ್ಕಾರದ ಆಡಳಿತದಲ್ಲಿ ದಲಿತರ ವಿರುದ್ಧ ದೌರ್ಜನ್ಯವನ್ನು ಕೂಡ ಹೆಚ್ಚುತ್ತಿದ್ದು ಆದಿವಾಸಿಗಳ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದಿದ್ದಾರೆ ಗಾಂಧಿ. 
ಕಳೆದ 20 ತಿಂಗಳುಗಳಲ್ಲಿ ರಫ್ತು ಋಣಾತ್ಮಕ ಅಭಿವೃದ್ಧಿ ಕಂಡಿದ್ದರೆ, ರೈತರ ಆತ್ಮಹತ್ಯೆಗಳು ಹೆಚ್ಚುತ್ತಿರುವುದು ಕಳವಳಕಾರಿ ಎಂದು ಕೂಡ ರಾಹು ಗಾಂಧಿ ದೂರಿದ್ದು "ಮೋದಿ ಸರ್ಕಾರದ ಕೆಟ್ಟ ಆಡಳಿತವನ್ನು ಎಲ್ಲ ಸಮಯದಲ್ಲಿ ನಾವು ಬಯಲಿಗೆಳೆಯಬೇಕು" ಎಂದು ಗಾಂಧಿ ಕರೆಕೊಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.