ಮುಂಬಯಿ ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ: 60 ಮಹಿಳೆಯರು ವಶಕ್ಕೆ
: ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಡಾನ್ಸ್ ಬಾರ್ಗಳ ಮೇಲೆ ಸಾಮಾಜಿಕ ಸೇವಾದಳ ಪೊಲೀಸರು ದಾಳಿ ನಡೆಸಿ, 60 ...

ಮುಂಬೈ: ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಡಾನ್ಸ್ ಬಾರ್ಗಳ ಮೇಲೆ ಸಾಮಾಜಿಕ ಸೇವಾದಳ ಪೊಲೀಸರು ದಾಳಿ ನಡೆಸಿ, 60 ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.
ಎರಡು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 60 ಮಹಿಳೆಯರು ಹಾಗೂ 75 ಪುರುಷರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಬಾರ್ ಮಾಲೀಕರು ಹಾಗೂ ಗ್ರಾಹಕರು ಸೇರಿದ್ದಾರೆ.
ಮುಂಬಯಿನ ಗ್ರಾಂಟ್ ರಸ್ತೆಯಲ್ಲಿರುವ ತೇಜಾ ಬಾರ್, ಘಾಟ್ಕೋಪರ್ನಲ್ಲಿನ ಮೆಹ್ಪಿಲ್ ಬಾರ್, ಅಂದೇರಿ ನಗರದಲ್ಲಿರುವ ಫಿಂಕ್ ಪ್ಲಾಜಾ ಬಾರ್ ಹಾಗೂ ಮುಂಬೈನ ಕೇಂದ್ರ ಸ್ಥಾನದಲ್ಲಿರುವ ಸಮುಂದರ್ ಬಾರ್ಗಳು ಮಹಾರಾಷ್ಟ್ರದ ಬಾರ್ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದವು.
ಮಹಿಳಾ ಸಂರಕ್ಷಣ ಅಧಿನಿಯಮ 2016ರ ಅನ್ವಯ ಬಾರ್ ಪಾಲಿಸ ಬೇಕಾದ ಹಲವು ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಬಾರ್ಗಳನ್ನು ಪುನರಾರಂಭಿಸಲು ನಿಗದಿತ ಅವಧಿಯೊಳಗೆ ಪರವಾನಿಗೆ ಹಾಜರುಪಡಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ದಶಕಗಳ ಹಿಂದೆ ರಾಜ್ಯಸರ್ಕಾರ ಡಾನ್ಸ್ ಬಾರ್ಗಳಿಗೆ ಸೂಚಿಸಿದ್ದ ನಿಷೇಧವನ್ನು ವಜಾ ಮಾಡುವಂತೆ ಕಳೆದ ಮಾರ್ಚ್ 15ರಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ಇನ್ನೂ ಡ್ಯಾನ್ಸ್ ಬಾರ್ ಮಾಲೀಕನಿಗೆ ಐದು ವರ್ಷ ಜೈಲು ಮತ್ತು 25 ಸಾವಿರ ರು. ದಂಡ ವಿಧಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


