ಪ್ರಧಾನ ಸುದ್ದಿ

ಹನಿಮೂನ್ ಮುಗಿಸಿ ವಾಪಸ್ ಬರುವಾಗ ವಿಮಾನ ನಿಲ್ದಾಣದ ಶೌಚಾಲಯದಿಂದ ಮಹಿಳೆ ನಾಪತ್ತೆ

ಮಧುಚಂದ್ರ ಮುಗಿಸಿ ವಾಪಸ್ ಬರುವ ವೇಳೆ ಶೌಚಾಲಯಕ್ಕೆ ತೆರಳಿದ ಮಹಿಳೆ ಅಲ್ಲಿಂದ ನಾಪತ್ತೆಯಾಗಿರುವ ಘಟನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ..

ಹನಿಮೂನ್ ಮುಗಿಸಿ ವಾಪಸ್ ಬರುವಾಗ ವಿಮಾನ ನಿಲ್ದಾಣದ ಶೌಚಾಲಯದಿಂದ  ಮಹಿಳೆ ನಾಪತ್ತೆ
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Published On :

ನವದೆಹಲಿ: ಮಧುಚಂದ್ರ ಮುಗಿಸಿ ವಾಪಸ್ ಬರುವ ವೇಳೆ ಶೌಚಾಲಯಕ್ಕೆ ತೆರಳಿದ ಮಹಿಳೆ ಅಲ್ಲಿಂದ ನಾಪತ್ತೆಯಾಗಿರುವ ಘಟನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಬಾಗ್ದೋರಾ ದಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ದೆಹಲಿಗೆ ಆಗಮಿಸಿದ ನೂತನ ದಂಪತಿ, ಲಕ್ನೋಗೆ ತೆರಳಲು ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ  ಕಾಯುತ್ತಿದ್ದರು. ಈ ವೇಳೆ ತನ್ನ ಪರ್ಸ್ ಹಾಗೂ ಬ್ಯಾಗ್ ಅನ್ನು ಗಂಡನ ಕೈಗಿಟ್ಟು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆ ನಾಪತ್ತೆಯಾಗಿದ್ದಾಳೆ.

ಪತ್ನಿ ಹೋಗಿ ಅರ್ಧ ಗಂಟೆಯಾದರೂ ವಾಪಸ್ ಬರದಿದ್ದಾಗ ಶೌಚಾಲಯ ದ ಬಳಿ ಹೋದ ಪತಿ ತನ್ನ ಹೆಂಡತಿ ಫೋಟೋ ತೋರಿಸಿ ವಿಚಾರಿಸಿದ್ದಾನೆ. ಆದರೆ ಅಲ್ಲಿ ಆ ರೀತಿ ಹೋಲಿಕೆಯಾಗುವ ಯಾವುದೇ ಮಹಿಳೆ ಇಲ್ಲ ಎಂದು ಹೇಳಿದ ನಂತರ, ಆತ ಸಿಐಎಸ್ ಎಫ್ ಅಧಿಕಾರಿಗಳ ಸಹಾಯ ಪಡೆದು ಪತ್ನಿ ಹುಡುಕಲು ಮುಂದಾಗಿದ್ದಾನೆ.

ಈ ವೇಳೆ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಸಂಜೆ 6.14 ಕ್ಕೆ ಶೌಚಾಲಯಕ್ಕೆ ಮಹಿಳೆ ತೆರಳಿ ಮೂರು ನಿಮಿಷದಲ್ಲೇ ಬುರ್ಖಾ ಧರಿಸಿ ವಾಪಸ್ ಆಗಿದ್ದಾಳೆ. ನಂತರ ಅಲ್ಲಿಂದ ಹೊರಟು ಗಣ್ಯರು ಕಾರು ನಿಲ್ಲಿಸುವ ಸ್ಥಳದಿಂದ ತೆರಳಿ, ಅಲ್ಲಿ ಮತ್ತೊಬ್ಬ ಪುರುಷನ ಜೊತೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಸಿಐಎಸ್ ಎಫ್ ಅಧಿಕಾರಿಗಳು ಇದು ಮಾನವ ಕಳ್ಳಸಾಗಣಿಕೆ ಜಾಲದ ಕೃತ್ಯವಿರಬಹುದು ಎಂದು ಶಂಕಿಸಿದ್ದರು. ನಂತರ ಮಹಿಳೆಯ ಚಲನವಲನಗಳನ್ನು ನೋಡಿದ ಪತಿ ಬುರ್ಖಾ ಧರಿಸಿ ಹೊರಟ ಮಹಿಳೆ ತನ್ನ ಪತ್ನಿಯೆಂದು ಹೇಳಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.