ಪ್ರಧಾನ ಸುದ್ದಿ

ಯುಪಿಎಸ್ ಸಿ ಫಲಿತಾಂಶ ಪ್ರಕಟ: ದೆಹಲಿ ಯುವತಿ 1, ಕಾಶ್ಮೀರಿ ಯುವಕನಿಗೆ 2ನೇ ರ್ಯಾಂಕ್

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಮಂಗಳವಾರ 2015ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ದೆಹಲಿ ಯುವತಿ ಟೀನಾ ಡಾಬಿ...

ಯುಪಿಎಸ್ ಸಿ ಫಲಿತಾಂಶ ಪ್ರಕಟ: ದೆಹಲಿ ಯುವತಿ 1, ಕಾಶ್ಮೀರಿ ಯುವಕನಿಗೆ 2ನೇ ರ್ಯಾಂಕ್
ಟೀನಾ ಡಾಬಿ
Published On :
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಮಂಗಳವಾರ 2015ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ದೆಹಲಿ ಯುವತಿ ಟೀನಾ ಡಾಬಿ ಮೊದಲ ಪ್ರಯತ್ನದಲ್ಲೇ ಮೊದಲ ರ್ಯಾಂಕ್ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ರೇಲ್ವೆ ಅಧಿಕಾರಿ ಅತಾರ್ ಅಮಿರ್ ಉಲ್ ಶಫಿ ಖಾನ್ ಅವರು ಎರಡನೇ ರ್ಯಾಂಕ್ ಪಡೆದಿದ್ದಾರೆ.
ಟೀನಾ ಡಬಿ(0256747) ಪ್ರಥಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಅತಾರ್ ಉಲ್ ಶಫಿ ಖಾನ್(ರೋಲ್ ನಂಬರ್ 0058239), ಜಸ್ಮೀರ್ ಸಿಂಗ್ ಸಂಧು (0010512), ಆರ್ತಿಕಾ ಶುಕ್ಲಾ(0000123), ಶಶಾಂಕ್ ತ್ರಿಪಾಠಿ(0015876) ಮೊದಲ 5 ಸ್ಥಾನ ಗಳಿಸಿದ್ದಾರೆ. ಕರ್ನಾಟಕದ ದರ್ಶನ್ 48ನೇ ಹಾಗೂ ಶ್ರೀನಿವಾಸ್ ಗೌಡ ಎ. ಆರ್ (0535527) ಅವರು 105ನೇ ಸ್ಥಾನ ಗಳಿಸಿದ್ದಾರೆ
ಫಲಿತಾಂಶದನ ನಂತರ ಮಾಧ್ಯಮ ಪ್ರತಿಕ್ರಿಯಿಸಿರುವ 22 ವರ್ಷದ ಟೀನಾ, ದೇಶಕ್ಕಾಗಿ ಏನನ್ನಾದರೂ ಮಾಡುವ ಆಸೆ ಹೊಂದಿದ್ದೇನೆ. ನನ್ನ ಈ ಸಾಧನೆಯ ಹಿಂದೆ ನನ್ನ ತಾಯಿಯ ಪಾತ್ರವೂ ಇದೆ ಎಂದು ಹೇಳಿದ್ದಾರೆ.
ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ
ದರ್ಶನ್ 48 ರ್ಯಾಂಕ್
ಶ್ರೀನಿವಾಸಗೌಡ 105
ನಿವ್ಯಾ ಶೆಟ್ಟಿ 274
ಪವನ್ ಕುಮಾರ್ ಗಿರಿಯಪ್ಪ 420
ಪ್ರಮೋದ್ ನಾಯಕ್ 779 
ಡಿಎಲ್ ನಾಗೇಶ್ 782 
ಆಕಾಶ್ ಎಸ್ 959 
ಭೈರಪ್ಪ 1035
ವಿದ್ಯಾವತಿ ಎಸ್. 600

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.