ಉಪವಾಸ ನಿರಶನ ಕಾನೂನುಬಾಹಿರ ಚಟುವಟಿಕೆ: ಜೆ ಎನ್ ಯು ಉಪಕುಲಪತಿ
ಉಪವಾಸ ನಿರಶನ ನಿರತ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ತಮ್ಮ ಬೇಡಿಕೆಗಳನ್ನು ಚರ್ಚಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಲಿಯ ಮೊರೆ ಹೋಗಬೇಕೆಂದು ಬುಧವಾರ ಜವಾಹಾರ್ ನೆಹರು

ನವದೆಹಲಿ: ಉಪವಾಸ ನಿರಶನ ನಿರತ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ತಮ್ಮ ಬೇಡಿಕೆಗಳನ್ನು ಚರ್ಚಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಲಿಯ ಮೊರೆ ಹೋಗಬೇಕೆಂದು ಬುಧವಾರ ಜವಾಹಾರ್ ನೆಹರು ವಿಶ್ವವಿದ್ಯಾಲಯದ ಉಪಕುಲಪತಿ ಎಂ ಜಗದೀಶ್ ಕುಮಾರ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ಹದಗೆಡುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ನೋಟಿಸ್ ಕಳುಹಿಸಿರುವ ಕುಮಾರ್ "ಉಪವಾಸ ನಿರಶನ ಕಾನೂನುಬಾಹಿರ ಚಟುವಟಿಕೆ ಮತ್ತು ಪ್ರತಿಭಟಿಸಲು ಅಪಾಯಕಾರಿ ಮಾರ್ಗ. ಇದು ವಿದ್ಯಾರ್ಥಿಗಳ ಆರೋಗ್ಯ ಮತ್ತು ಜೀವನವನ್ನು ಹಾಳುಮಾಡುತ್ತದೆ"
"ನಿಮ್ಮ ಬೇದಿಕೆಗಳೇನಾದರೂ ಇದ್ದರೆ ಅವನ್ನು ಸಾಂವಿಧಾನಿಕವಾಗಿ ಮುಂದಿಡಬೇಕೆಂದು ಆಡಳಿತ ಮಂಡಲಿ ಆಗ್ರಹಿಸುತ್ತದೆ" ಏಂದು ಕೂಡ ನೋಟಿಸ್ ತಿಳಿಸಿದೆ.
ಫೆಬ್ರವರಿ ೯ ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಕೆಲವು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿರುವುದನ್ನು ವಿರೋಧಿಸಿ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ೧೯ ವಿದ್ಯಾರ್ಥಿಗಳು ಏಪ್ರಿಲ್ ೨೮ ರಿಂದ ಅನಿರ್ಧಿಷ್ಟಾವಧಿ ಕಾಲದವರೆಗೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಈ ಮಧ್ಯೆ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ನ ನಿಯೋಗ ಉಪಕುಲಪತಿಯವರನ್ನು ಭೇಟಿ ಮಾಡಿ ಜೆ ಎನ್ ಎಸ್ ಸಿ ಯು ನ ಜಂಟಿ ಕಾರ್ಯದರ್ಶಿ ಸೌರಭ್ ಶರ್ಮಾ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಹಿಂಪಡೆಯುವಂತೆ ಕೋರಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕೆ ಶರ್ಮಾ ಅವರಿಗೆ ೧೦೦೦೦ ರೂ ದಂಡ ವಿಧಿಸಲಾಗಿತ್ತು. ಇದನ್ನು ವಿರೋಧಿಸಿ ಎ ಬಿ ವಿ ಪಿ ಸದಸ್ಯರು ಕೂಡ ಉಪವಾಸ ನಿರಶನ ನಡೆಸಿದ್ದಾರೆ.
"ಮಾತುಕತೆ ಮತ್ತು ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದರಲ್ಲಿ ಆಡಳಿತ ಮಂಡಲಿ ನಂಬಿಕೆಯಿಟ್ಟಿದೆ. ಆದುದರಿಂದ ಕೂಡಲೆ ಉಪವಾಸ ನಿರಶನ ಅಂತ್ಯ ಮಾಡಿ ಮಾತುಕತೆಗೆ ಬರಬೇಕು" ಎಂದು ನೋಟಿಸ್ ನಲ್ಲಿ ಉಪಕುಲಪತಿ ಆಗ್ರಹಿಸಿದ್ದಾರೆ.
ಅಫ್ಜಲ್ ಗುರು ಅವರ ಪರವಾಗಿ ಕಾರ್ಯಕ್ರಮ ಏರ್ಪಡಿಸಿದ್ದಕ್ಕಾಗಿ ಹಾಗು ದೇಶ ವಿರೋಧಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಪ್ರಕರಣ ಹೊರಿಸಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ ಇವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಕೋರ್ಟ್ ಇವರೆಲ್ಲರಿಗೂ ಜಾಮೀನು ನೀಡಿತ್ತು.
ವಿಶ್ವವಿದ್ಯಾಲಯದ ಆಂತರಿಕ ಸಮಿತಿ ಇದರ ಬಗ್ಗೆ ತನಿಖೆ ನಡೆಸಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಕನ್ಹಯ್ಯ ಕುಮಾರ್ ಅವರಿಗೆ ೧೦೦೦೦ ರೂ ದಂಡ, ಖಲೀದ್ ಮತ್ತು ಭಟ್ಟಾಚಾರ್ಯ ಅವರನ್ನು ಒಂದು ಸೆಮಿಸ್ಟರ್ ವರೆಗೆ ವಜಾ ಮತ್ತೊಬ್ಬ ಸಂಶೋಧನಾ ಪಂಡಿತ ಮುಜೀಬ್ ಗಟ್ಟೊ ಅವರಿಗೆ ಎರಡು ಸೆಮಿಸ್ಟರ್ ವಜಾ ಶಿಕ್ಷೆ ನೀಡೀದ್ದಲ್ಲದೆ ಖಲೀದ್ ಅವರಿಗೆ ಮೇ ೧೩ರೊಳಗೆ ೨೦೦೦೦ ರೂ ದಂಡ ಕಟ್ಟುವಂತೆ ಆಗ್ರಹಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


