ಡೀಸೆಲ್ ಟ್ಯಾಕ್ಸಿ ನಿಷೇಧದಿಂದ ವಿನಾಯಿತಿ ಕೇಳಿದ ದೆಹಲಿ ಸರ್ಕಾರ
ಸುಪ್ರೀಂ ಕೋರ್ಟ್ ನವದೆಹಲಿಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಟ್ಯಾಕ್ಸಿಗಳಿಗೆ ನಿಷೇಧ ಹೇರಿರುವುದನ್ನು ವಿರೋಧಿಸಿ ಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆದಿದ್ದರ ಪರಿಣಾಮವಾಗಿ ದೆಹಲಿ

ನವದೆಹಲಿ: ಸುಪ್ರೀಂ ಕೋರ್ಟ್ ನವದೆಹಲಿಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಟ್ಯಾಕ್ಸಿಗಳಿಗೆ ನಿಷೇಧ ಹೇರಿರುವುದನ್ನು ವಿರೋಧಿಸಿ ಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆದಿದ್ದರ ಪರಿಣಾಮವಾಗಿ ದೆಹಲಿ ವಾಹನ ಸಂಚಾರ ಹಲವೆಡೆ ಎರಡನೆ ದಿನವೂ ಸ್ಥಗಿತಗೊಂಡಿದ್ದು, ಈ ನಿಷೇಧದಿಂದ ವಿನಾಯಿತಿ ಕೋರಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕೂರ್ ನಾಯಕತ್ವದ ಅಪೆಕ್ಸ್ ನ್ಯಾಯಾಲಯದ ವಿಭಾಗೀಯ ಪೀಠ, ದೆಹಲಿಯಲ್ಲಿ ಹೇಗೆ ಹಂತಹಂತವಾಗಿ ಡೀಸೆಲ್ ಟ್ಯಾಕ್ಸಿಗಳ ಚಾಲನೆಯನ್ನು ಕೊನೆಗಾಣಿಸುತ್ತೀರಾ ಮತ್ತದನ್ನು ಸಿ ಎನ್ ಜಿ ಗೆ ಹೇಗೆ ಪರಿವರ್ತನೆ ಮಾಡುತ್ತಿರಾ ಎಂಬುದರ ನೀಲಿನಕ್ಷೆ ನೀಡುವಂತೆ ದೆಹಲಿ ಸರ್ಕಾರಕ್ಕೆ ಕೇಳಿದೆ.
ಬುಧವಾರ ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದ್ದು, ಮಂಗಳವಾರ ಸಂಜೆಯೊಳಗೆ ನೀಲಿನಕ್ಷೆ ಸಲ್ಲಿಸುವುದಾಗಿ ಸರ್ಕಾರ ತಿಳಿಸಿದೆ.
ಡೀಸೆಲ್ ಮತ್ತು ಪೆಟ್ರೋಲ್ ಟ್ಯಾಕ್ಸಿಗಳನ್ನಿ ನಿಷೇಧಿಸಿರುವುದು ಜನರಿಗೆ ತೊಂದರೆಯಾಗಲೆಂದಲ್ಲ ಬದಲಾಗಿ ವಿಶ್ವದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯದ ನಗರಗಳಲ್ಲಿ ಒಂದಾಗಿರುವ ದೆಹಲಿಯಲ್ಲಿ ಮಾಲಿನ್ಯವನ್ನು ತಗ್ಗಿಸುವ ಕ್ರಮವಾಗಿ ನಿರ್ಭಂಧ ಹೇರಲಾಗಿದೆ ಎಂದು ಕೋರ್ಟ್ ತಿಳಿಸಿದೆ.
"ಸಾರ್ವಜನಿಕರಿಗೆ ತೊಂದರೆಯನ್ನು ಸೃಷ್ಟಿಸುವ ಯಾವುದೇ ಇರಾದೆ ನಮಗಿಲ್ಲ, ಆದರೆ ಇಂತಹ ಕ್ರಮಗಳನ್ನು ಕೈಗೊಂಡಾಗ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ" ಎಂದು ಪೀಠ ತಿಳಿಸಿದೆ.
"ಮಾಲಿನ್ಯವನ್ನು ತಗ್ಗಿಸಲು ಸರ್ಕಾರ ಬದ್ಧವಾಗಿದೆ" ಎಂದಿರುವ ಸರ್ಕಾರ "ಆದರೆ ಈ ಕ್ರಮದಿಂದ ನಾಗರಿಕರಿಗೆ ತೊಂದರೆಯಾಗಿದೆ" ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


