ಪ್ರಧಾನ ಸುದ್ದಿ

ಹಳಿ ತಪ್ಪಿದ ದೆಹಲಿ-ಫೈಜಾಬಾದ್ ಎಕ್ಸ್​ಪ್ರೆಸ್, 70 ಜನರಿಗೆ ಗಾಯ

ದೆಹಲಿಯಿಂದ ಫೈಜಾಬಾದ್​ಗೆ ಹೊರಟ್ಟಿದ್ದ ದೆಹಲಿ-ಫೈಜಾಬಾದ್ ಎಕ್ಸ್​ಪ್ರೆಸ್ (14206) ರೈಲಿನ 8 ಬೋಗಿಗಳು ಉತ್ತರ ಪ್ರದೇಶದ ಹಾಪುರದ ಗುರುಮುಖುಟೇಶ್ವರ...

ಹಳಿ ತಪ್ಪಿದ ದೆಹಲಿ-ಫೈಜಾಬಾದ್ ಎಕ್ಸ್​ಪ್ರೆಸ್, 70 ಜನರಿಗೆ ಗಾಯ
ದೆಹಲಿ-ಫೈಜಾಬಾದ್ ಎಕ್ಸ್​ಪ್ರೆಸ್ (ಕೃಪೆ: ಎಎನ್ ಐ)
Published On :
ಹಾಪುರ: ದೆಹಲಿಯಿಂದ ಫೈಜಾಬಾದ್​ಗೆ ಹೊರಟ್ಟಿದ್ದ ದೆಹಲಿ-ಫೈಜಾಬಾದ್ ಎಕ್ಸ್​ಪ್ರೆಸ್ (14206) ರೈಲಿನ 8 ಬೋಗಿಗಳು ಉತ್ತರ ಪ್ರದೇಶದ ಹಾಪುರದ ಗುರುಮುಖುಟೇಶ್ವರದ ಬಳಿ ಭಾನುವಾರ  ರಾತ್ರಿ 9 ಗಂಟೆಗೆ ಹಳಿ ತಪ್ಪಿದ್ದು, ಈ ಘಟನೆಯಲ್ಲಿ 70 ಜನರಿಗೆ ಗಾಯಗಳಾಗಿವೆ.
ಮೊರದಾಬಾದ್ ವಿಭಾಗದ ಗುರುಮುಖುಟೇಶ್ವರ ಮತ್ತು ಖಂದಾದರ್  ಸ್ಟೇಷನ್ಗಳ ನಡುವೆ ರೈಲು ಹಾದುಹೋಗುವಾಗ ಈ ಘಟನೆ ಸಂಭವಿಸಿದೆ ಎಂದು ಬಲ್ಲಮೂಲಗಳು ಹೇಳಿವೆ. 
ಗಾಯಗೊಂಡವರನ್ನು ಮೀರತ್, ಗಾಜಿಯಾಬಾದ್ ಮತ್ತು ಹಾಪುರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಯಿಂದ ಈ ಭಾಗದ ರೈಲು ಸಂಚಾರ ಅಸ್ತವ್ಯಸ್ಥಗೊಂಡಿದ್ದು, 29 ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು.  8 ರೈಲುಗಳನ್ನು ರದ್ದು ಮಾಡಲಾಗಿದೆ.
ಹಾನಿಯಾಗದೇ ಇದ್ದ ರೈಲು ಬೋಗಿಗಳನ್ನು ಹೊತ್ತು  ರಾತ್ರಿ 10.20ರ ವೇಳೆಗೆ ಪ್ರಸ್ತುತ ರೈಲು ಗಮ್ಯ ತಲುಪಿದೆ.
ಮೀರತ್ ಜಿಲ್ಲಾ ಆಸ್ಪತ್ರೆ ತುರ್ತು ಸಹಾಯವಾಣಿ ಸಂಖ್ಯೆ -09410609434.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.