ಪ್ರಧಾನ ಸುದ್ದಿ

ಸಾಲಬಾಧೆಯಿಂದ ದೇಶ ತೊರೆದಿರುವ ವಿಜಯ್ ಮಲ್ಯ ಪರ ದೇವೇಗೌಡ ಬ್ಯಾಟಿಂಗ್

ಸಾಲಬಾಧೆಯಿಂದ ದೇಶ ತೊರೆದಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರ ಪರ ಬ್ಯಾಟಿಂಗ್ ಮಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ...

ಸಾಲಬಾಧೆಯಿಂದ ದೇಶ ತೊರೆದಿರುವ ವಿಜಯ್ ಮಲ್ಯ ಪರ ದೇವೇಗೌಡ ಬ್ಯಾಟಿಂಗ್
ಮಾಜಿ ಪ್ರಧಾನಿ ದೇವೇಗೌಡ
Published On :
ಬೆಂಗಳೂರು: ಸಾಲಬಾಧೆಯಿಂದ ದೇಶ ತೊರೆದಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರ ಪರ ಬ್ಯಾಟಿಂಗ್ ಮಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಮಲ್ಯ ಅವರು ಕನ್ನಡ ನೆಲದ ಮಣ್ಣಿಮ ಮಗನಾಗಿದ್ದು, ದೇಶ ತೊರೆದಿಲ್ಲ ಎಂದು ಹೇಳಿದ್ದಾರೆ.
ವಿಜಯ್ ಮಲ್ಯ ಅವರು ಸಾಲಬಾಧೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ವರದಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಅವರು ಈಗಗಾಲೇ ತಾವು ತಲೆಮರೆಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಆದರೂ ಜಾಗತಿಕ ಮಟ್ಟದ ಒಬ್ಬ ಉದ್ಯಮಿಯನ್ನು ಗುರಿಯಾಗಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ಮಲ್ಯ ಅವರ ವ್ಯವಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಆದರೂ ಕಾನೂನಿಗೆ ಬದ್ಧನಾಗುತ್ತೇನೆಂದು ಹೇಳಿದ್ದಾರೆ. ವ್ಯವಹಾರ ಇರುವುದರಿಂದ ಅವರು ವಿದೇಶಕ್ಕೆ ಹೋಗಿದ್ದಾರೆ. 9 ಸಾವಿರ ಕೋಟಿ ಆಸ್ತಿ ಮಲ್ಯ ಬಳಿ ಇಲ್ಲ ಅಂತ ಹೇಳಲಿಕ್ಕಾಗಲ್ಲ. ಬೆಂಗಳೂರು ಹಾಗೂ ಮುಂಬೈ ಸೇರಿ ಹಲವು ಕಡೆ ಮಲ್ಯ ಅವರ ಆಸ್ತಿ ಇದೆ. ಅವರ ತಂದೆ ವಿಠಲ್ ಮಲ್ಯ ಅವರು ದೊಡ್ಡ ಉದ್ಯಮಿಯಾಗಿದ್ದರು ಎಂದು ದೇವೇಗೌಡರು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ಈಗಾಗಲೇ ವಿಜಯ್ ಮಲ್ಯ ಮತ್ತು ಕೆಲ ಕಿಂಗ್‌ಫಿಶರ್ ಉದ್ಯೋಗಿಗಳನ್ನು ಪ್ರಶ್ನಿಸಿದೆ. ಆದರೆ, ಮಲ್ಯ ದೇಶ ತೊರೆದು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ವರದಿಗಳು ಸಂಸತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದವು.
ಈ ಮಧ್ಯೆ, ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿದ್ದು, ವಿದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ಭಾರತವನ್ನು ತೊರೆದಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.