ಬಿಜೆಪಿ ಸರ್ಕಾರ ಬಡಜನರ ಸದ್ದಡಗಿಸುತ್ತಿದೆ: ರಾಹುಲ್ ಗಾಂಧಿ
ಬಡ ಜನರ, ಬುಡಕಟ್ಟು ಸಮುದಾಯದ ಮತ್ತು ಕೆಳ ವರ್ಗದ ಜನರ ಧ್ವನಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಬಡ ಜನರ, ಬುಡಕಟ್ಟು ಸಮುದಾಯದ ಮತ್ತು ಕೆಳ ವರ್ಗದ ಜನರ ಧ್ವನಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
"ಬಸ್ತರ್ ನ ಮತ್ತು ಚತ್ತೀಸ್ ಘರ್ ನ ಬುಡಕಟ್ಟು ಸಮುದಾಯದವರು ನನ್ನನ್ನು ಕಾಣಲು ಬಂದಿದ್ದರು. ಅವರನ್ನು ತುಳಿಯಲಾಗುತ್ತಿದೆ ಮತ್ತು ಬಿಜೆಪಿ ಸರ್ಕಾರ ಅವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಅವರು ನನಗೆ ತಿಳಿಸಿದರು" ಎಂದು ಚತ್ತೀಸ್ ಘರ್ ನ ಬಸ್ತರ್ ನಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಬುಡಕಟ್ಟು ಸಮುದಾಯದ ಸಮಿತಿಯನ್ನು ಭೇಟಿ ಮಾಡಿದ ಮೇಲೆ ವರದಿಗಾರರಿಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ.
"ಸಂಸತ್ತಿನಲ್ಲಿ ಮೋದಿಯವರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಿದರು. ಪ್ರತಿದಿನ ಅವರ ಪಕ್ಷದವರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಾರೆ, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ದಯವಿಟ್ಟು ಬಡ ಜನ ಮತ್ತು ಅವಕಾಶವಂಚಿತರ ಮೇಲೆ ದಾಳಿ ಮಾಡಬೇಡಿ" ಎಂದು ಕೂಡ ಅವರು ಹೇಳಿದ್ದಾರೆ.
ಬಡ ಜನರನ್ನು ಮತ್ತು ಸಾಧಾರಣ ವ್ಯಾಪಾರಸ್ಥರ ಮೇಲೆ ಕೂಡ ದಾಳಿ ನಡೆಸದಂತೆ ಬಿಜೆಪಿ ಪಕ್ಷಕ್ಕೆ ಗಾಂಧಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

