ಪ್ರಧಾನ ಸುದ್ದಿ

ಸಂಪುಟ ಪುನಾರಚನೆಗೆ ಸಹಕರಿಸುವಂತೆ ಎಲ್ಲಾ ಸಚಿವರನ್ನು ಕೇಳಿಕೊಂಡಿದ್ದೇನೆ: ಸಿಎಂ

ಕಡೆಗೂ ಸಂಪುಟ ಪುನಾರಚನೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಗೆ ಸಹಕರಿಸುವಂತೆ ಎಲ್ಲಾ ಸಚಿವರನ್ನು....

ಸಂಪುಟ ಪುನಾರಚನೆಗೆ ಸಹಕರಿಸುವಂತೆ ಎಲ್ಲಾ ಸಚಿವರನ್ನು ಕೇಳಿಕೊಂಡಿದ್ದೇನೆ: ಸಿಎಂ
ಸಿದ್ದರಾಮಯ್ಯ
Published On :
ಬೆಂಗಳೂರು: ಕಡೆಗೂ ಸಂಪುಟ ಪುನಾರಚನೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಗೆ ಸಹಕರಿಸುವಂತೆ ಎಲ್ಲಾ ಸಚಿವರನ್ನು ಕೇಳಿಕೊಂಡಿರುವುದಾಗಿ ಬುಧವಾರ ಹೇಳಿದ್ದಾರೆ.
ಇಂದು ನಡೆದ ಮಂತ್ರಿ ಪರಿಷತ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯ ಸಚಿವ ಸಂಪುಟ ಪುನಾರಚನೆ ಆಗುತ್ತೆ. ಸಂಪುಟ ಪುನಾರಚನೆಗೆ ಸಹಕಾರ ಕೊಡಿ ಎಂದು ಎಲ್ಲಾ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದರು.
ಯಾವಾಗ ಸಂಪುಟ ಪುನಾರಚನೆಯಾಗುತ್ತೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಸಂಪುಟ ಪುನಾರಚನೆಗೆ ಶೀಘ್ರ ದಿನಾಂಕ ನಿಗದಿ ಮಾಡುತ್ತೇವೆ ಮತ್ತು ಈ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸುವುದಕ್ಕಾಗಿ ನಾಳೆ ಅಥವಾ ನಾಡಿದ್ದು ದೆಹಲಿಗೆ ಹೋಗಬಹುದು ಎಂದರು.
ಮಂತ್ರಿ ಪರಿಷತ್ ಸಭೆಯಲ್ಲಿ ಮೂರು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಲವು ಸಚಿವರಿಗೆ ಸಿಎಂ ಧನ್ಯವಾದ ತಿಳಿಸಿದ್ದಾರೆ. ಆದರೆ ಸಚಿವ ಸಂಪುಟದಿಂದ ಯಾರನ್ನೆಲ್ಲ ಕೈಬಿಡಲಾಗುತ್ತದೆ ಎಂಬ ಪ್ರಶ್ನೆಗೆ ಸಿಎಂ ಯಾವುದೇ ಸ್ಪಷ್ಟ ಉತ್ತರ ನೀಡದೆ, ಸಂಪುಟ ಪುನಾರಚನೆ ಆಗುವಾಗ ಎಲ್ಲರಿಗೂ ಹೇಳುತ್ತೇನೆ ಎಂದು ಹೇಳಿದರು.
ಸಚಿವ ಸಂಪುಟ ಪುನರ್ರಚನೆಯ ಸುಳಿವು ಸಿಗುತ್ತಿದ್ದಂತೆ ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ರೋಷನ್ ಬೇಗ್ ಸೇರಿದಂತೆ ಅನೇಕ ಸಚಿವರು ದೆಹಲಿಯಲ್ಲಿ ತಂಗಿದ್ದಾರೆ. ಇನ್ನು ಸಚಿವಾಕಾಂಕ್ಷಿ ಶಾಸಕರು ತಮ್ಮ ನಾಯಕರ ಮನೆ ಮತ್ತು ಕಚೇರಿಗಳಿಗೆ ಎಡತಾಕುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.