ಮತ್ತೆ ಕಾಲು ಕೆರೆದ ಚೀನಾ; ಅರುಣಾಚಲ ಪ್ರದೇಶದಲ್ಲಿ ನುಸುಳಿದ ಡ್ರ್ಯಾಗನ್ ಸೇನೆ
ಭಾರತದ ವಿರುದ್ಧ ಕಾಲುಕೆರೆಯುತ್ತಿರುವ ಚೀನಾ ಸೇನೆ ಇದೀಗ ಮತ್ತೆ ಭಾರತ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದು, ಸುಮಾರು 3 ಗಂಟೆಗಳ ಕಾಲ ಬೀಡುಬಿಟ್ಟು ಹೋಗಿದೆ..

ನವದೆಹಲಿ: ಭಾರತದ ವಿರುದ್ಧ ಕಾಲುಕೆರೆಯುತ್ತಿರುವ ಚೀನಾ ಸೇನೆ ಇದೀಗ ಮತ್ತೆ ಭಾರತ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದು, ಸುಮಾರು 3 ಗಂಟೆಗಳ ಕಾಲ ಬೀಡುಬಿಟ್ಟು ಹೋಗಿದೆ.
ಮೂಲಗಳ ಪ್ರಕಾರ ಪರಮಾಣು ಪೂರೈಕೆದಾರರ ಸಮೂಹಕ್ಕೆ (ಎನ್‍ಎಸ್‍ಜಿ) ಭಾರತ ಸೇಪ೯ಡೆಯಾಗುವುದಕ್ಕೆ ಚೀನಾ ತಡೆಯೊಡ್ಡಿದ್ದ ದಿನವೇ ಪೀಪಲ್ಸ್ ಲಿಬರೇಷನ್ ಆಮಿ೯ ಯೋಧರು ಅತಿಕ್ರಮಣ ಮಾಡಿದ್ದರು ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ. ಅರುಣಾಚಲಪ್ರದೇಶದ ಪೂವ೯ ಕಮೆ೦ಗ್ ಜಿಲ್ಲೆಯ ಅ೦ತಾರಾಷ್ಟ್ರೀಯ ಗಡಿ ಬಳಿ ಚೀನಾದ ಪೀಪಲ್ಸ್ ಲಿಬರೇಷನ್ ಆಮಿ೯ ಯೋಧರು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳಿದ್ದ ವಿಚಾರ ತಡವಾಗಿ ಬೆಳಕಿಗೆ ಬ೦ದಿದೆ.
ಜೂನ್ 9ರ೦ದು 250 ಚೀನಿ ಯೋಧರನ್ನೊಳಗೊ೦ಡ ನಾಲ್ಕು ತ೦ಡಗಳು ಭಾರತದ ಗಡಿಯೊಳಕ್ಕೆ ನುಸುಳಿದ್ದು, ಸುಮಾರು 3 ಗ೦ಟೆಗಳ ಕಾಲ ಅಲ್ಲಿ ಬೀಡುಬಿಟ್ಟಿದ್ದ ಚೀನಿ ಯೋಧರು ಬಳಿಕ ತಮ್ಮ ಗಡಿಯೊಳಕ್ಕೆ ವಾಪಸಾಗಿದ್ದರು ಎ೦ದು ರಕ್ಷಣಾ ಸಚಿವಾಲಯ ಮತ್ತು ಗುಪ್ತಚರ ಇಲಾಖೆಯ ಮಾಹಿತಿ ಉಲ್ಲೇಖಿಸಿ ವೆ ಬ್‍ಸೈಟೊ೦ದು ವರದಿ ಮಾಡಿದೆ. ಚೀನಿ ಸೇನೆಯ ಅಕ್ರಮ ಪ್ರವೇಶವನ್ನು ವಿರೋಧಿಸಿರುವ ಭಾರತ ಈ ಕುರಿತು ಚೀನಾ ಸಕಾ೯ರಕ್ಕೆ ದೂರು ಸಲ್ಲಿಸಲು ಭಾರತೀಯ ಸೇನೆ ನಿಧ೯ರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


