ಪ್ರಧಾನ ಸುದ್ದಿ

ದೆಹಲಿ ಪಾದಚಾರಿಗಳ ಮೇಲೆ ಹರಿದ ಕಾರು; ಇಬ್ಬರ ಸಾವು; ಒಬ್ಬರಿಗೆ ಗಂಭೀರ ಗಾಯ

ಯುವಕನೊಬ್ಬ ಸೋಮವಾರ ಬೆಳಗ್ಗೆ ಮದ್ಯಪಾನ ಮಾಡಿ, ಹೊಂಡ ಸಿಟಿ ಕಾರು ಚಲಾಯಿಸುತ್ತಿದ್ದಾಗ, ಪಾದಚಾರಿಗಳ ಮೇಲೆ ಹರಿದು ಕನಿಷ್ಠ ಇಬ್ಬರು ಮೃತಪಟ್ಟು ಒಬ್ಬರಿಗೆ ಗಂಭೀರ ಗಾಯವಾಗಿದೆ

ದೆಹಲಿ ಪಾದಚಾರಿಗಳ ಮೇಲೆ ಹರಿದ ಕಾರು; ಇಬ್ಬರ ಸಾವು; ಒಬ್ಬರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಯುವಕನೊಬ್ಬ ಸೋಮವಾರ ಬೆಳಗ್ಗೆ ಮದ್ಯಪಾನ ಮಾಡಿ, ಹೊಂಡ ಸಿಟಿ ಕಾರು ಚಲಾಯಿಸುತ್ತಿದ್ದಾಗ, ಪಾದಚಾರಿಗಳ ಮೇಲೆ ಹರಿದು ಕನಿಷ್ಠ ಇಬ್ಬರು ಮೃತಪಟ್ಟು ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"೨೧ ವರ್ಷದ ರಿಶಬ್ ಬೆಳಗ್ಗೆ ಸುಮಾರು ೬:೩೦ ರ ಹೊತ್ತಿಗೆ ಮೂರು ವಿವಿಧ ಸ್ಥಳಗಳಲ್ಲಿ ಮೂವರು ಪಾದಚಾರಿಗಳ ಮೇಲೆ ಕಾರು ಓಡಿಸಿದ್ದಾನೆ" ಎಂದು ಉಪ ಪೊಲೀಸ್ ಕಮಿಷನರ್ ಪುಶ್ಪೇಂದ್ರ ಕುಮಾರ್ ಹೇಳಿದ್ದಾರೆ.

"೪೦ ವರ್ಷದ ಕಾಮೇಶ್ವರ್ ಪ್ರಸಾದ್, ೬೭ ವರ್ಷದ ಅಶ್ವಿನಿ ಪ್ರಸಾದ್ ಈ ಅಪಘಾತದಲ್ಲಿ ಮೃತಪಟ್ಟಿದ್ದರೆ, ೪೦ ವರ್ಷದ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಸಂತೋಷ್ ಇಲ್ಲ ಎಂದು ಕೂಡ ಆವರು ಹೇಳಿದ್ದಾರೆ.

ದೆಹಲಿಯ ಜನಕ್ ಪುರಿಯ ನಿವಾಸಿ ರಿಶಬ್ ಹೊಂಡ ಸಿಟಿ ಚಲಾಯಿಸುವಾಗ ಮದ್ಯ ಸೇವಿಸಿದ್ದ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ಹೇಳಿದ್ದು ಕಾರನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಿಶಬ್ ಬ್ಯಾಚಲರ್ ಆಫ್ ಬ್ಯುಸಿನೆಸ್ಸ್ ಅಡ್ಮಿನಿಸ್ಟ್ರೇಶನ್ ನ ವಿದ್ಯಾರ್ಥಿಯಾಗಿದ್ದು ಅವರ ತಂದೆ ಹಾರ್ಡ್ ವೇರ್ ಅಂಗಡಿ ನಡೆಸುತ್ತಾರೆ. ರಿಶಬ್ ನನ್ನು ಬಂಧಿಸಲಾಗಿದ್ದು ಅವನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.