ಭಾರತದಲ್ಲಿ ಪರಮಾಣು ಘಟಕ ಕಾಮಗಾರಿ ಆರಂಭ; ಅಮೆರಿಕ ಸ್ಪಷ್ಟನೆ
ಇಂಡೋ-ಅಮೆರಿಕ ನಡುವಿನ ದಶಕಗಳ ಹಳೆಯ ನಾಗರೀಕ ಪರಮಾಣ ಒಪ್ಪಂದದಂತೆ ಭಾರತದಲ್ಲಿ ಆರು ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ...

ವಾಷಿಂಗ್ಟನ್: ಇಂಡೋ-ಅಮೆರಿಕ ನಡುವಿನ ದಶಕಗಳ ಹಳೆಯ ನಾಗರೀಕ ಪರಮಾಣ ಒಪ್ಪಂದದಂತೆ ಭಾರತದಲ್ಲಿ ಆರು ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ವಿಶ್ವ ಸಮುದಾಯದ ಕಣ್ತಪ್ಪಿಸಿ ಭಾರತ ರಹಸ್ಯವಾಗಿ ಪರಮಾಣು ಘಟಕಗಳನ್ನು ಸ್ಥಾಪಿಸುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಭಾರತದಲ್ಲಿ 6 ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಭಾರತ ಮತ್ತು ಅಮೆರಿಕ ದೇಶಗಳ ನಡುವೆ ನಡೆದಿದ್ದ ನಾಗರೀಕ ಪರಮಾಣು ಒಪ್ಪಂದದ ಅನ್ವಯ ಈ ಘಟಕಗಳು ಸ್ಥಾಪನೆಯಾಗುತ್ತಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಅಧ್ಯಕ್ಷ ಬರಾಕ್ ಒಬಾಮರೊಂದಿಗಿನ ದ್ವಿಪಕ್ಷೀಯ ಶೃಂಗಸಭೆಯ ಬಳಿಕ ವೈಟ್ ಹೌಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ಅಮೆರಿಕ ಪಾಲಿಗೆ ಭಾರತ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದ್ದು, ನಾಗರೀಕ ಪರಮಾಣು ಒಪ್ಪಂದದ ಅನ್ವಯ ಭಾರತದಲ್ಲಿ 6 ಪರಮಾಣು ಸ್ಥಾವರಗಳ ಪ್ರಾಥಮಿಕ ಕಾಮಗಾರಿ ಆರಂಭವಾಗಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದೆ.
"ಭಾರತದ ವಿವಿಧ ಪ್ರದೇಶಗಳಲ್ಲಿ ಒಟ್ಟು 6 ಎಪಿ1000 ತಂತ್ರಜ್ಞಾನದ ಪರಮಾಣು ಸ್ಥಾವರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಬಗೆಯ ವಿನ್ಯಾಸದ ಪರಮಾಣು ಸ್ಥಾವರಗಳಲ್ಲಿ ಅತೀ ದೊಡ್ಡ ಪ್ರಮಾಣದ ಪರಮಾಣು ಸ್ಥಾವರಗಳಾಗಲಿವೆ. ಆ ಮೂಲಕ ಭಾರತದ ಇಂಧನ ಬೇಡಿಕೆಗೆ ಈ ಪರಮಾಣು ಸ್ಥಾವರಗಳು ಪರಿಣಾಮಕಾರಿ ಪರಿಹಾರವಾಗಲಿದ್ದು, ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಲಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
2005ರ ಜುಲೈ 18ರಂದು ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಅಂದಿನ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮ್ಮುಖದಲ್ಲಿ ಉಭಯ ದೇಶಗಳು 123 ಒಪ್ಪಂದಗಳ ನಾಗರೀಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


