ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿದ ಬಡ ಮಹಿಳೆ
ವಿರಳ ಎನ್ನಬಹುದಾದ ಉದಾಹರಣೆಯೊಂದರಲ್ಲಿ ಬಿಹಾರದ ರೊಥಾಸ್ ಜಿಲ್ಲೆಯ ಗ್ರಾಮವೊಂದರ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ತನ್ನ ನಾಲ್ಕು ಮೇಕೆಗಳನ್ನು ಮಾರಿದ ಘಟನೆ ವರದಿಯಾಗಿದೆ.

Published On :
ಪಾಟ್ನಾ: ವಿರಳ ಎನ್ನಬಹುದಾದ ಉದಾಹರಣೆಯೊಂದರಲ್ಲಿ ಬಿಹಾರದ ರೊಥಾಸ್ ಜಿಲ್ಲೆಯ ಗ್ರಾಮವೊಂದರ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ತನ್ನ ನಾಲ್ಕು ಮೇಕೆಗಳನ್ನು ಮಾರಿದ ಘಟನೆ ವರದಿಯಾಗಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತನ್ನ ಪತಿಯ ಚಿಕಿತ್ಸೆಯನ್ನು ಬದಿಗಿಟ್ಟು ಈ ನಡೆಗೆ ಮುಂದಾಗಿರುವ ಮಹಿಳೆ ಬಯಲಿಯಲ್ಲಿ ಬಹಿರ್ದೆಸೆಗೆ ಹೋಗುವುದು ನಾಚಿಕೆ ಎಂದೇ ನಂಬುತ್ತಾರೆ.
ಒಂದೂ ವರೆ ವರ್ಶದ ಕೆಳಗೆ ಪಾರ್ಶ್ವವಾಯುವಿಗೆ ಬಲಿಯಾಗಿದ್ದ ತನ್ನ ಪತಿಯ ಚಿಕಿತ್ಸೆಗಾಗಿ ಹಣ ಕೂಡಿಡಲು 40 ರ ಆಸುಪಾಸಿನ ಶಾಂತಿ ದೇವಿ ನಾಲ್ಕು ಮೇಕೆಗಳನ್ನು ಸಾಕುತ್ತಿದ್ದರಂತೆ. "ಈಗ ಶೌಚಾಲಯ ನಿರ್ಮಿಸಲು ಹಣ ಬೇಕಿದ್ದರಿಂದ ನನ್ನ ನಾಲ್ಕು ಮೇಕೆಗಳನ್ನು ಮಾರಿದೆ" ಎಂದು ತಿಳಿಸುತ್ತಾರೆ ಖೈರಾ ಭೂತ ಗ್ರಾಮದ ನಿವಾಸಿ ಶಾಂತಿ.
ಮಹಿಳೆರಿಗೆ ಬಯಲಿಯಲ್ಲಿ ಬಹಿರ್ದೆಸೆಗೆ ಹೋಗುವುದು ನಾಚಿಕೆಯ ಸಂಗತಿ ಎಂದು ತಿಳಿಸುವ ಅವರು ಪ್ರತಿ ಮನೆಯೂ ಶೌಚಾಲಯ ಹೊಂದಿರಬೇಕು ಎನ್ನುತ್ತಾರೆ. "ನನ್ನ ಪತಿಯ ವೈದ್ಯಕೀಯ ಚಿಕಿತ್ಸೆಗಿಂತಲೂ ಶೌಚಾಲಯ ಕಟ್ಟಿಸುವುದು ಅತಿ ಮುಖ್ಯ ಎಂದೆನಿಸಿತು. ಈಗ ಮೇಕೆಗಳನ್ನು ಮಾರಲಾಗಿದ್ದು, ಶೌಚಾಲಯ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲೇ ಸಂಪೂರ್ಣಗೊಳ್ಳಲಿದೆ" ಎನ್ನುತ್ತಾರೆ.
ಮುಖ್ಯಮಂತ್ರಿಗಳ ವೈದ್ಯಕೀಯ ನಿಧಿಯಿಂದ ಶಾಂತಿ ಅವರ ಪತಿಯ ಚಿಕೆತ್ಸೆಗೆ ಧನಸಹಾಯ ನೀಡಲಾಗುವುದು ಎಂದು ರೊಥಾಸ್ ಜಿಲ್ಲೆಯ ಮೆಜೆಸ್ಟ್ರೇಟ್ ಅನಿಮೇಶ್ ಕುಮಾರ್ ಪರಾಶರ್ ಹೇಳಿದ್ದಾರೆ.
"ಶಾಂತಿ ಅವರಿಗೆ ಶೌಚಾಲಯ ಕಟ್ಟಿಸಲು 12,000 ರೂ ಮತ್ತು ಮುಖ್ಯಮಂತ್ರಿಗಳ ವೈದ್ಯಕೀಯ ನಿಧಿಯಿಂದ ಅವರ ಪತಿಯ ಚಿಕೆತ್ಸೆಗೆ ಧನಸಹಾಯ ನೀಡಲಾಗುವುದು" ಎಂದು ಅವರು ಹೇಳಿದ್ದಾರೆ.
ಇಂತಹುದೇ ಒಂದು ನಡೆಯಲ್ಲಿ ಕಳೆದ ವಾರ 20 ರ ಆಸುಪಾಸಿನಲ್ಲಿರುವ ರೊಥಾಸ್ ಜಿಲ್ಲೆಯ ಬರಹಖಾನ್ನ ಗ್ರಾಮದ ಫುಲಕುಮಾರಿ ದೇವಿ ಅವರು ಶೌಚಾಲಯ ಕಟ್ಟಿಸಲು ತಮ್ಮ ಚಿನ್ನ ಮತ್ತು ಬೆಳ್ಳಿಯನ್ನು ಅಡವಿಟ್ಟಿದ್ದರು.
ಬಿಹಾರದಲ್ಲಿ ಲಕ್ಷಾಂತರ ಜನಕ್ಕೆ ಶೌಚಾಲಯ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


