ಕಾಶ್ಮೀರದಲ್ಲಿ ಕರ್ಫ್ಯೂ ಸಡಿಲ; ನಾಲ್ಕು ಜಿಲ್ಲೆಗಳಲ್ಲಿ ಶಾಲೆಗಳು ಮರುಪ್ರಾರಂಭ
ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಅಧಿಕಾರಿಗಳು ಕರ್ಫ್ಯೂ ಸಡಿಲಿಸಿದ್ದು ಇಂದಿನಿಂದ ಶಾಲೆಗಳು ಮತ್ತೆ ಪಾರ್ರಾಂಭವಾಗಲಿವೆ ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಉಳಿದ 6 ಜಿಲ್ಲೆಗಳಲ್ಲಿ ಜನರ ಓಡಾಟಕ್ಕೆ

Published On :
ಶ್ರೀನಗರ: ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಅಧಿಕಾರಿಗಳು ಕರ್ಫ್ಯೂ ಸಡಿಲಿಸಿದ್ದು ಇಂದಿನಿಂದ ಶಾಲೆಗಳು ಮತ್ತೆ ಪಾರ್ರಾಂಭವಾಗಲಿವೆ ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಉಳಿದ 6 ಜಿಲ್ಲೆಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.
ಬಂಡೀಪೋರಾ, ಬಾರಾಮುಲ್ಲಾ, ಬುಡಗಾಂ ಮತ್ತು ಗಂದೇರ್ಬಲ್ಲಿ ಜಿಲ್ಲೆಗಳಲ್ಲಿ ಕರ್ಫ್ಯೂ ನಿರ್ಬಂಧ ತೆಗೆದು ಹಾಕಿ ಜನರು ಗುಂಪುಗಟ್ಟುವುದನ್ನು ನಿಷೇಧಿಸಿ ಸಕ್ಷನ್ 144 ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆನ್ನೆ ಸರ್ಕಾರ ಕೈಗೊಂಡ ನಿರ್ಣಯದ ಪ್ರಕಾರ ಈ ಜಿಲ್ಲೆಗಳಲ್ಲಿ ಶಾಲೆಗಳನ್ನು ಮತ್ತೆ ಪ್ರಾರಂಭಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೂ ಮೊದಲಿನ ಆದೇಶದಂತೆ ಶಾಲೆಗಳು ಜುಲೈ 18 ಕ್ಕೆ ಮತ್ತೆ ಪ್ರಾರಂಭವಾಗಬೇಕಿತ್ತು ಆದರೆ 43 ಜನರನ್ನು ಬಲಿ ತೆಗೆದುಕೊಂಡು 3400 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಗಲಭೆ ಮುಂದುವರೆದಿದ್ದರಿಂದ ಬೇಸಿಗೆ ರಜೆಯನ್ನು ಜುಲೈ 25 ರವರೆಗೆ ವಿಸ್ತರಿಸಲಾಗಿತ್ತು.
ಸರ್ಕಾರ ಹೇರಿರುವ ನಿರ್ಬಂಧ 13 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತು ಪ್ರತ್ಯೇಕವಾದಿಗಳು ಕರೆದಿರುವ ಪ್ರತಿಭಟನೆಯು ಸೇರಿ ಸಾಮನ್ಯ ನಾಗರಿಕರ ಜೀವನಕ್ಕೆ ಭಾರಿ ತೊಂದರೆಯಾಗಿದೆ. ಮೊಬೈಲ್ ಇಂಟರ್ ನೆಟ್ ಕೂಡ ನಿರ್ಬಂಧ ಹೇರಲಾಗಿದ್ದು, ದಿನಪತ್ರಿಕೆಗಳ ಮುದ್ರಣ ಮತ್ತು ಪ್ರಸಾರವನ್ನು ಕೂಡ ಸರ್ಕಾರ ತಡೆದಿದೆ.
ಇಂದಿನಿಂದ ದಿನಪತ್ರಿಕೆಗಳ ಪ್ರಸಾರ ಕೂಡ ಮತ್ತೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಕೂಡ ತಿಳಿದುಬಂದಿದೆ.
ಹಿಜಬುಲ್ ಕಮ್ಯಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆಗೈದ ಪರಿಣಾಮವಾಗಿ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


