ಕಾಶ್ಮೀರಕ್ಕೆ ಬಿಜೆಪಿ ಯೋಗ್ಯವಲ್ಲ; ಹಿಂಸೆಗೆ ನೆರವಾಗಿದ್ದಾರೆ: ಕಾಂಗ್ರೆಸ್
ಹಿಜಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆ ಹತ್ಯೆಗೈದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಗೆ 40 ಕ್ಕೂ ಹೆಚ್ಚು ಜನ ಬಲಿಯಾಗಿರುವುದರ ಬಗ್ಗೆ
Published On :
ನವದೆಹಲಿ: ಹಿಜಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆ ಹತ್ಯೆಗೈದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಗೆ 40 ಕ್ಕೂ ಹೆಚ್ಚು ಜನ ಬಲಿಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಗುಲಾಂ ನಬಿ ಆಜಾದ್ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ನಡೆಸಲು ಯೋಗ್ಯವಲ್ಲದ ಪಕ್ಷ ಎಂದಿದ್ದಾರೆ.
"ಕಾಶ್ಮೀರದ ಸದ್ಯದ ಸ್ಥಿತಿಗೆ ಈಗಿನ ಪಿಡಿಪಿ-ಬಿಜೆಪಿ ಮೈತ್ರಿ ಪಕ್ಷ ಕೊಡುಗೆ ನೀಡಿದೆ. ಬಿಜೆಪಿ ಅಲ್ಲಿ ಆಡಳಿತ ನಡೆಸಲು ಯೋಗ್ಯವಲ್ಲದ ಪಕ್ಷ. ನಮ್ಮ (ಕಾಂಗ್ರೆಸ್ ಸರ್ಕಾರ ) ಮತ್ತು ಇತರ ಸರ್ಕಾರಗಳಿಗೆ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು 70 ವರ್ಷ ಹಿಡಿಯಿತು. ನಾವು ಅಲ್ಲಿನ ಜನಗಳ ಜೊತೆಗೆ ಗುಣಪಡಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದವು. ಆದರೆ ಈ ಸರ್ಕಾರ ಭಯೋತ್ಪಾದಕರು ಮತ್ತು ಅಲ್ಲಿನ ನಾಗರಿಕರ ಜೊತೆಗೆ ಒಂದೇ ವರ್ತನೆಯನ್ನು ತೋರುತ್ತಿದೆ" ಎಂದು ಅವರು ಹೇಳಿದ್ದಾರೆ.
"ನಾವು ಭಯೋತ್ಪಾದಕರ ಮತ್ತು ನಾಗರಿಕರ ನಡುವೆ ವ್ಯತ್ಯಾಸ ತಿಳಿದಿದ್ದೆವು. ನಮ್ಮ ಆಡಳಿತ ಕಾಲದಲ್ಲಿಯೂ ಕೆಟ್ಟ ಪರಿಸ್ಥಿತಿಗಳು ಉಂಟಾಗಿದ್ದವು ಆದರೆ ಸೂಕ್ಷ್ಮತೆಯಿಂದ ಅದನ್ನು ನಿಭಾಯಿಸಿದೆವು" ಎಂದು ಅವರು ಹೇಳಿದ್ದಾರೆ.
ಅನಗತ್ಯವಾಗಿ ಹೆಚ್ಚುವರಿ ಸೇನಾಪಡೆ ಬಳಸಿರುವುದಕ್ಕೆ ಬಿಜೆಪಿ-ಪಿಡಿಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಾಜಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಆಜಾದ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೆ ಹಲವಾರು ನಾಗರಿಕರ ಪ್ರಾಣಹಾನಿಗೆ ಮತ್ತು ಗಾಯಗೊಳ್ಳುವುದಕ್ಕೆ ಕಾರಣವಾಗಿದೆ ಎಂದಿದ್ದಾರೆ.
"ತಮ್ಮ ಮಕ್ಕಳನ್ನು ನೋಡುವಂತೆಯೇ ಸರ್ಕಾರ ಜನರನ್ನು ನೋಡಬೇಕಾಗುತ್ತದೆ... ಆದರೆ ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಗಾಯಗೊಂಡವರ ಬಗ್ಗೆ ಬೇರೆಯದೇ ಕಥೆ ಹೇಳುತ್ತದೆ" ಎಂದು ಆಜಾದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

