ಪ್ರಧಾನ ಸುದ್ದಿ

ಕಾಶ್ಮೀರ ಉದ್ವಿಘ್ನ; ಅಮರನಾಥ ಯಾತ್ರೆ ರದ್ದು

ಕಾಶ್ಮೀರ ಕಣಿವೆಯಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿರುವುದರಿಂದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿದ್ದು ಶನಿವಾರ ಜಮ್ಮು ನಗರದಿಂದ ಯಾತ್ರೆ ಕೈಗೊಳ್ಳಲು ಯಾವ ಯಾತ್ರಿಕರಿಗೂ

ಕಾಶ್ಮೀರ ಉದ್ವಿಘ್ನ; ಅಮರನಾಥ ಯಾತ್ರೆ ರದ್ದು
ಸಾಂದರ್ಭಿಕ ಚಿತ್ರ
Published On :
ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿರುವುದರಿಂದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿದ್ದು ಶನಿವಾರ ಜಮ್ಮು ನಗರದಿಂದ ಯಾತ್ರೆ ಕೈಗೊಳ್ಳಲು ಯಾವ ಯಾತ್ರಿಕರಿಗೂ ಅವಕಾಶ ನೀಡಲಾಗಿಲ್ಲ. 
"ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಬುರ್ಹಾನ್ ವಾನಿ ಅವರ ಹತ್ಯೆಯ ಹಿನ್ನಲೆಯಲ್ಲಿ ಕಣಿವೆಯಲ್ಲಿ ಭುಗಿಲೆದ್ದಿರುವ ಉದ್ವಿಘ್ನತೆಯಿಂದ ಜಮ್ಮು ನಗರದ ಭಗವತಿ ನಗರ ಯಾತ್ರಿ ನಿವಾಸದ ಶಿಬಿರದಿಂದ ಯಾವ ಯಾತ್ರಿಕರಿಗೂ ಅಮರನಾಥ ಯಾತ್ರೆಗೆ ತೆರಳಲು ಅವಕಾಶ ನೀಡಲಾಗಿಲ್ಲ" ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. 
"ಪರಿಸ್ಥಿತಿಯನ್ನು ನಂತರ ಪರಿಶೀಲಿಸಲಾಗುವುದು. ಅಲ್ಲಿಯವರೆಗೂ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ" ಎಂದು ಅವರು ಹೇಳಿದ್ದಾರೆ. 
ಈ ಕಾಲದಲ್ಲಿ ರೂಪಗೊಳ್ಳುವ ಈ ಹಿಮಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸುವ ಈ ಯಾತ್ರೆ ಹಿಂದುಗಳಿಗೆ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೂ ಈ ವರ್ಷ 80 ಸಾವಿರಕ್ಕೂ ಹೆಚ್ಚು ಜನ ಹಿಮಲಿಂಗದ ದರ್ಶನ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.