ರಾಜಸ್ಥಾನದ ಸಿರೋಹಿಯಲ್ಲಿ ಭೀಕರ ಅಪಘಾತ; 13 ಜನ ಸಾವು
ದಕ್ಷಿಣ ರಾಜಸ್ಥಾನದ ಸಿರೋಹಿ ಬಳಿ ಟ್ರಕ್ ಒಂದು ಬಸ್ಸಿಗೆ ಗುದ್ದಿದ್ದಕ್ಕೆ ಗುರುವಾರ ಬೆಳಗ್ಗೆ 13 ಜನ ಮೃತಪಟ್ಟು ಕನಿಷ್ಠ ನಾಲ್ವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

Published On :
ಜೈಪುರ: ದಕ್ಷಿಣ ರಾಜಸ್ಥಾನದ ಸಿರೋಹಿ ಬಳಿ ಟ್ರಕ್ ಒಂದು ಬಸ್ಸಿಗೆ ಗುದ್ದಿದ್ದಕ್ಕೆ ಗುರುವಾರ ಬೆಳಗ್ಗೆ 13 ಜನ ಮೃತಪಟ್ಟು ಕನಿಷ್ಠ ನಾಲ್ವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
"ಸಿರೋಹಿ ಜಿಲ್ಲೆಯ ಪಾಲ್ಡಿ ಎಂ ಗ್ರಾಮದಲ್ಲಿ ಇಂದು (ಗುರುವಾರ) ಬೆಳಗ್ಗೆ ಈ ಭೀಕರ ಅಪಘಾತ ಜರುಗಿದೆ. ನಿಂತಿದ್ದ ಬಸ್ಸಿಗೆ ವೇಗವಾಗಿ ನುಗ್ಗಿದ ಟ್ರಕ್ ಗುದ್ದಿದ್ದರಿಂದ ಬಸ್ ಪಲ್ಟಿ ಹೊಡೆದು ಹತ್ತಿರ ನಿಂತಿದ್ದ ಪ್ರಯಾಣಿಕ ಮೇಲೆ ಬಿದ್ದಿದೆ. ಸ್ಥಳದಲ್ಲೇ ಕನಿಷ್ಠ 9 ಜನ ಮೃತ ಪಟ್ಟಿದ್ದು, ನಂತರ ನಾಲ್ವರು ನಿಧನರಾಗಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇನ್ನು ನಾಲ್ಕು ಜನಕ್ಕೆ ಗಂಭೀರ ಗಾಯಗಳಾಗಿದ್ದು, ಉದಯಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.
"ಮೇಲ್ನೋಟಕ್ಕೆ ಇದು ವೇಗದ ಮತ್ತು ಬೇಜವಾಬ್ದಾರಿ ಚಾಲನೆಯಂತೆ ಕಾಣುತ್ತದೆ. ಆದರೆ ಪೂರ್ಣ ತನಿಖೆಯ ನಂತರವಷ್ಟೇ ನಾವು ನಿಖರವಾಗಿ ಕಾರಣ ತಿಳಿಯಲು ಸಾಧ್ಯ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೃತ ಪಟ್ಟವರ ಕುಟುಂಬಕ್ಕೆ ಸರ್ಕಾರ 50 ಸಾವಿರ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ 5000-10000 ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


