ಹಿಂದೂ ಧರ್ಮಕ್ಕೆ ಮತಾಂತರ ಸುದ್ದಿಯನ್ನು ತಳ್ಳಿಹಾಕಿದ ಯೇಸುದಾಸ್ ಕುಟುಂಬ
ತಮ್ಮ ಪತಿ ಹಿಂದೂ ಧರ್ಮಕ್ಕೆ ಹಿಂದಿರುಗಳಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದಿದ್ದಾರೆ ಖ್ಯಾತ ಗಾಯಕ ಕೆ ಜೆ ಯೇಸುದಾಸ್ ಅವರ ಪತ್ನಿ ಪ್ರಭಾ ಯೇಸುದಾಸ್.

Published On :
ತಿರುವನಂತಪುರಂ: ತಮ್ಮ ಪತಿ ಹಿಂದೂ ಧರ್ಮಕ್ಕೆ ಹಿಂದಿರುಗಳಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದಿದ್ದಾರೆ ಖ್ಯಾತ ಗಾಯಕ ಕೆ ಜೆ ಯೇಸುದಾಸ್ ಅವರ ಪತ್ನಿ ಪ್ರಭಾ ಯೇಸುದಾಸ್.
"ಈ ಸುದ್ದಿ ಹೇಗೆ ಪ್ರಚಾರವಾಯಿತೋ ನನಗೆ ತಿಳಿಯದು ಆದರೆ ಇದು ಸುಳ್ಳು" ಎಂದು ಪ್ರಭಾ ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಬುಧವಾರ ಟ್ವೀಟ್ ಮಾಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಸ್ವಾಮಿ ಟ್ವೀಟ್ ಮಾಡಿ "ಟ್ವಿಟ್ಟರ್ ಸುದ್ದಿಯ ಪ್ರಕಾರ ಯೇಸುದಾಸ್ ತಮ್ಮ ಪೂರ್ವಿಕರ ಹಿಂದೂ ಧರ್ಮಕ್ಕೆ ಹಿಂದಿರುಗುತ್ತಿರುವುದನ್ನು ಎಲ್ಲರೂ ಸ್ವಾಗತಿಸೋಣ" ಎಂದಿದ್ದರು.
ಜನವರಿಯಲ್ಲಿ ತಮ್ಮ ಹುಟ್ಟು ಹಬ್ಬದ ದಿನದಂದು 76 ವರ್ಷದ ಯೇಸುದಾಸ್ ಕುಟುಂಬದೊಂದಿಗೆ ಮಂಗಳೂರಿನ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಸಂಗೀತ ಗೌರವ ಸಲ್ಲಿಸಿದ್ದರು.
ಸ್ವಾಮಿ ಗುರುವಾಯೂರಪ್ಪನ್ ಮೇಲೆ ಹಲವಾರು ಗೀತೆಗಳನ್ನು ಹಾಡಿದ್ದರು ಶಾಸ್ತ್ರೀಯ ಸಂಗೀತಕಾರ ಯೇಸುದಾಸ್ ಹಿಂದೂ ಧರ್ಮೀಯರಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಗುರುವಾಯೂರ್ ನ ಶ್ರೀ ಕೃಷ್ಣ ದೇವಾಲಯಕ್ಕೆ ಪ್ರವೇಶ ನಿರಾಕರಿಸಿದ್ದ ಸಂಗತಿ ಈ ಹಿಂದೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
14 ವಿವಿಧ ಭಾಷೆಗಳಲ್ಲಿ 45000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಯೇಸುದಾಸ್, ಪದ್ಮಶ್ರೀ, ಪದ್ಮ ಭೂಷಣ ಅಲ್ಲದೆ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


