ವಿವಾದಾತ್ಮಕ ಗುರು ಜಾಕಿರ್ ನಾಯಕ್ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ: ರಿಜಿಜು
ಜುಲೈ 1 ರಂದು ನಡೆದ ಢಾಕಾ ಭಯೋತ್ಪಾದಕ ದಾಳಿಯ ದಾಳಿಕೋರರು ವಿವಾದಾತ್ಮಕ ಇಸ್ಲಾಮಿಕ್ ಗುರು ಜಾಕಿರ್ ನಾಯಕ್ ಅವರನ್ನು ಅನುಸರಿಸುತ್ತಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಸರ್ಕಾರ
Published On :
ನವದೆಹಲಿ: ಜುಲೈ 1 ರಂದು ನಡೆದ ಢಾಕಾ ಭಯೋತ್ಪಾದಕ ದಾಳಿಯ ದಾಳಿಕೋರರು ವಿವಾದಾತ್ಮಕ ಇಸ್ಲಾಮಿಕ್ ಗುರು ಜಾಕಿರ್ ನಾಯಕ್ ಅವರನ್ನು ಅನುಸರಿಸುತ್ತಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಸರ್ಕಾರ ಜಾಕಿರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಸೂಚನೆ ಬುಧವಾರ ನೀಡಿದೆ.
ಇದು ಕಾನೂನಿನ ಪ್ರಶ್ನೆ ಮತ್ತು ಇದಕ್ಕೆ ಸಂಬಂಧಿಸಿದ ಏಜೆನ್ಸಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲಿವೆ ಎಂದು ಗೃಹ ಖಾತೆಯ ರಾಜ್ಯ ಸಚಿವೆ ಕಿರಣ್ ರಿಜಿಜು ವರದಿಗಾರರಿಗೆ ತಿಳಿಸಿದ್ದಾರೆ.
"ಭಯೋತ್ಪಾದನಾ ನಿರ್ಮೂಲನೆಗೆ ನಾವು ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹಲವಾರು ರಾಷ್ಟ್ರಗಳು ಮಾಡಿರುವಂತೆ ವಿವಾದಾತ್ಮಕ ಇಸ್ಲಾಮಿಕ್ ಗುರುವನ್ನು ಸರ್ಕಾರ ನಿಷೇಧಿಸಲಿದೆಯೇ ಎಂಬ ಪ್ರಶ್ನೆಗೆ "ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ಸಚಿವ ಘೋಷಣೆ ಮಾಡುವುದು ಬುದ್ಧಿವಂತಿಕೆಯಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
ಇತರ ಧರ್ಮಗಳ ವಿರುದ್ಧ ದ್ವೇಷದ ಬೋಧನೆ ನೀಡುವ ಆರೋಪದ ಮೇಲೆ ಮುಂಬೈ ಮೂಲದ ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಜಾಕಿರ್ ನಾಯಕ್ ಅವರನ್ನು ಬ್ರಿಟನ್ ಮತ್ತು ಕೆನಡಾ ದೇಶಗಳು ನಿಷೇಧಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
IslamKiren Rijijuಕಿರಣ್ ರಿಜಿಜುDhaka terrorist attackZakir Naikಜಾಕಿರ್ ನಾಯಕ್ಇಸ್ಲಾಮಿಕ್ ಗುರುಢಾಕಾ ಭಯೋತ್ಪಾದಕ ದಾಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

