ಪ್ರಧಾನ ಸುದ್ದಿ

ಪ್ರಧಾನಿ ಮೋದಿ ಸಂಪುಟದಿಂದ ಕೈಬಿಡಲಾದ 5 ಸಚಿವರು

ಬಹು ನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆಗೆ ಪ್ರಧಾನಿ ಮೋದಿ ಅಂಕಿತ ಹಾಕಿದ್ದು, ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ ಒಟ್ಟು 19 ನೂತನ ಸಚಿವರು ಕೇಂದ್ರ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪ್ರಧಾನಿ ಮೋದಿ ಸಂಪುಟದಿಂದ ಕೈಬಿಡಲಾದ 5 ಸಚಿವರು
ಸಂಪುಟದಿಂದ ಕೈ ಬಿಟ್ಟ ಸಚಿವರು (ಸಂಗ್ರಹ ಚಿತ್ರ)
Published On :

ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆಗೆ ಪ್ರಧಾನಿ ಮೋದಿ ಅಂಕಿತ ಹಾಕಿದ್ದು, ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ ಒಟ್ಟು 19 ನೂತನ ಸಚಿವರು ಕೇಂದ್ರ  ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಂತೆಯೇ 5 ಹಾಲಿ ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಾಗಿದ್ದು, ಹಾಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜವಡೇಕರ್ ಅವರಿಗೆ ಭಡ್ತಿ ನೀಡಿ, ಸಂಪುಟ ದರ್ಜೆ ಸಚಿವರಾಗಿ  ನೇಮಕ ಮಾಡಲಾಗಿದೆ. ಉಳಿದಂತೆ 5 ಸಚಿವರನ್ನು ಸಂಪುಟದಿಂದ ಕೈ ಬಿಡಲಾಗಿದ್ದು, ಕೈಬಿಟ್ಟ ಸಚಿವರ ಪಟ್ಟಿ ಇಂತಿದೆ.

1. ಸನ್ವರ್ ಲಾಲ್ ಜತ್, ಕೇಂದ್ರ ನೀರಾವರಿ ಸಚಿವ
2. ನಿಹಾಲ್ ಚಂದ್, ಪಂಚಾಯಕ್ ರಾಜ್ ಸಚಿವ
3. ರಾಮ ಶಂಕರ್ ಕಠಾರಿಯಾ, ಮಾನವ ಸಂಪನ್ಮೂಲ ರಾಜ್ಯ ಖಾತೆ ಸಚಿವ
4. ಮನ್ಸುಖ್ ಭಾಯ್ ವಸವ, ಬುಡಕಟ್ಟು ವ್ಯವಹಾರ ಖಾತೆ ಸಚಿವ
5. ಮೋಹನ್ ಭಾಯ್ ಕುಂದಾರಿಯಾ, ಕೃಷಿ ಸಚಿವ

ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ  ಸಂಪುಟ ದರ್ಜೆ ಸಚಿವರಾಗಿ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು  ನೂತ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು. ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಎಲ್ಲ 19 ಸಚಿವರು  ಪ್ರಮಾಣ ವಚನ ಸ್ವೀಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.