ಪ್ರಧಾನ ಸುದ್ದಿ

ನೀರಿನ ಟ್ಯಾಂಕರ್ ಹಗರಣ; ದೆಹಲಿ ಸಚಿವನನ್ನು ಪ್ರಶ್ನಿಸಿದ ಎಸಿಬಿ

400 ಕೋಟಿ ನೀರಿನ ಟ್ಯಾಂಕರ್ ಹಗರಣದಲ್ಲಿ ಭ್ರಷ್ಟಾಚಾರ ವಿರೋಧಿ ಬ್ಯೂರೊ (ಎಸಿಬಿ) ದೆಹಲಿ ನೀರು ಸರಬರಾಜು ಮಂತ್ರಿ ಕಪಿಲ್ ಮಿಶ್ರಾ ಅವರನ್ನು 2 ಘಂಟೆಗಳ ಕಾಲ ಪ್ರಶ್ನಿಸಿದೆ.

ನೀರಿನ ಟ್ಯಾಂಕರ್ ಹಗರಣ; ದೆಹಲಿ ಸಚಿವನನ್ನು ಪ್ರಶ್ನಿಸಿದ ಎಸಿಬಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Published On :
ನವದೆಹಲಿ: 400 ಕೋಟಿ ನೀರಿನ ಟ್ಯಾಂಕರ್ ಹಗರಣದಲ್ಲಿ ಭ್ರಷ್ಟಾಚಾರ ವಿರೋಧಿ ಬ್ಯೂರೊ (ಎಸಿಬಿ) ದೆಹಲಿ ನೀರು ಸರಬರಾಜು ಮಂತ್ರಿ ಕಪಿಲ್ ಮಿಶ್ರಾ ಅವರನ್ನು 2 ಘಂಟೆಗಳ ಕಾಲ ಪ್ರಶ್ನಿಸಿದೆ. ಈ ವಿಷಯದಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆ ನನ್ನನ್ನು ಒಮ್ಮೆಯೂ ಪ್ರಶ್ನಿಸಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ. 
ಎಸಿಬಿ ಗಮನ ಸಂಪೂರ್ಣವಾಗಿ ನನ್ನನ್ನು ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಕ್ಕಿಸುವತ್ತ ಹರಿದಿತ್ತು ಎಂದು ಮಿಶ್ರಾ ಹೇಳಿದ್ದಾರೆ. 
ಜೂನ್ ನಲ್ಲಿ ಎಸಿಬಿ ನೀಡಿದ್ದ ನೋಟಿಸ್ ಗೆ ಉತ್ತರಿಸಲು ಆಮ್ ಆದ್ಮಿ ಪಕ್ಷದ ನಾಯಕ ಬೆಂಬಲಿಗರೊಂದಿಗೆ ಎಸಿಬಿ ಮುಖ್ಯ ಕಚೇರಿಗೆ ಇಂದು ಬೆಳಗ್ಗೆ ಆಗಮಿಸಿದ್ದರು. 
ಟ್ವೀಟ್ ಮಾಡುವ ಮೂಲಕ ತಮ್ಮನ್ನು ಆರು ಎಸಿಬಿ ಅಧಿಕಾರಿಗಳು ಪ್ರಶ್ನಿಸಿದರು ಎಂದು ತಿಳಿಸಿರುವ ಮಿಶ್ರಾ "ಇಡೀ ವರದಿಯಲ್ಲಿ ಈ ಹಗರಣ ನಡೆದಿದ್ದು ಶೀಲಾ ದೀಕ್ಷಿತ್ ಸಮಯದಲ್ಲಿ ಎಂದಿದ್ದರು ಅದರ ಬಗ್ಗೆ ಒಂದು ಪ್ರಶ್ನೆಯನ್ನು ಕೇಳಲಿಲ್ಲ. ಬದಲಾಗಿ ನನ್ನನ್ನು ಮತ್ತು ಕೇಜ್ರಿವಾಲ್ ಅವರನ್ನು ಸಿಕ್ಕಿಸುವತ್ತ ಎಸಿಬಿ ಅಧಿಕಾರಿಗಳು ಗಮನ ಹರಿಸಿದ್ದರು" ಎಂದು ಬರೆದಿದ್ದಾರೆ. 
ತಮ್ಮ ಅಧಿಕಾರದ ಅವಧಿಯ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ 2012 ರಲ್ಲಿ ದೆಹಲಿ ಜಲ ಮಂಡಳಿಗೆ 385 ಸ್ಟೀಲ್ ನೀರಿನ ಟ್ಯಾಂಕರ್ ಗಳನ್ನು ಕೊಳ್ಳುವಾಗ ನಿಯಮಗಳನ್ನು ಪಾಲಿಸಿಲ್ಲ ಎಂದು ಜೂನ್ 13 ರಂದು ಮಿಶ್ರಾ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. 
"ಶೀಲಾ ದೀಕ್ಷಿತ್ ವಿರುದ್ಧ ಆರೋಪವನ್ನು ತಳ್ಳಿ ಹಾಕುವತ್ತ ಎಸಿಬಿ ಚಿತ್ತ ಹರಿಸಿದೆ. ಶೀಲಾ  ಅವರನ್ನು ಸಂರಕ್ಷಿಸಿ ಕೇಜ್ರಿವಾಲ್ ಅವರನ್ನು ಸಿಕ್ಕಿಸಲು ಅವರಿಗೆ ಆದೇಶ ಬಂದಂತಿದೆ" ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ. 
ಇದಕ್ಕೂ ಮುಂಚಿತವಾಗಿ ಮಾಡಿದ ಟ್ವೀಟ್ ಗಳಲ್ಲಿ "ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಈ ಹಗರಣದಲ್ಲಿ ಎಲ್ಲ ಸಾಕ್ಷ್ಯಾಧಾರಗಳನ್ನು ಕಡೆಗಣಿಸಿದೆ.
"ಮೋದಿ ಅವರೇ, ನಾವು ಶೀಲಾ ದೀಕ್ಷಿತ್ ವಿರುದ್ಧ ಎಲ್ಲ ಸಾಕ್ಷ್ಯಗಳನ್ನು ನೀಡಿದ್ದರು, ನೀವು ಅವರನ್ನು ರಕ್ಷಿಸುತ್ತಿರುವುದೇಕೆ" ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. 
"ನೀವು ಸಿಬಿಐ ಮತ್ತು ಎಸಿಬಿ ಯನ್ನು ನಿಯಂತ್ರಿಸುತ್ತೀರಿ. ನಮ್ಮ ವಿರುದ್ಧ ಸಾಕ್ಷ್ಯಾಧಾರಗಳಲಿದ್ದಾರೆ ನಮ್ಮನ್ನು ಜೈಲಿಗೆ ಹಾಕಿ. ಆದರೆ ಶೀಲಾ ದೀಕ್ಷಿತ್ ವಿರುದ್ಧ ನೀಡಿರುವ ಸಾಕ್ಷ್ಯಾಧಾರಗಳನ್ನು ಮುಚ್ಚಿಹಾಕುತ್ತಿರುವುದೇಕೆ?" ಎಂದು ಕೂಡ ಪ್ರಶ್ನಿಸಿದ್ದರು. 
ಈ ಪ್ರಕರಣದ ಸತ್ಯಾಸತ್ಯಗಳನ್ನು ಹೊರಹಾಕಲು ಎಎಪಿ ಸರ್ಕಾರ ಜೂನ್ 2015 ರಲ್ಲಿ ಐದು ಸದಸ್ಯರ ತಂಡದ ರೂಪಿಸಿತ್ತು. ಈ ಸಮಿತಿ ಕೇಜ್ರಿವಾಲ್ ಅವರಿಗೆ ಆಗಸ್ಟ್ 2015 ರಲ್ಲಿ ವರದಿ ಸಲ್ಲಿಸಿ ಟೆಂಡರ್ ನೀಡುವಲ್ಲಿ ನಡೆದಿರುವ ಕಾನೂನುಬಾಹಿರ ಚಟುವಟಿಗಳ ಬಗ್ಗೆ ತಿಳಿಸಿತ್ತು. ಆಗ ಸರ್ಕಾರ ಎಫ್ ಐ ಆರ್ ದಾಖಲಿಸಿ ದೀಕ್ಷಿತ್ ವಿರುದ್ಧ ತನಿಖೆ ನಡೆಸಲು ಸಿಬಿಐ ಮತ್ತು ಎಸಿಬಿಗೆ ತಿಳಿಸಿತ್ತು. 
ಜೂನ್ 20 ರಂದು ಎಸಿಬಿ ದೀಕ್ಷಿತ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಷ್ಟೇ ಅಲ್ಲದೆ ಕೇಜ್ರಿವಾಲ್ ಅವರ ವಿರುದ್ಧವೂ ಪ್ರಕರಣ ದಾಖಲಿಸಿತ್ತು. 
"ತನಿಖೆಯಲ್ಲಿ ವಿಳಂಬ ಮಾಡಿರುವುದು ಮತ್ತು ನೀರಿನ ಟ್ಯಾಂಕರ್ ಟೆಂಡರ್ ವಜಾ ಮಾಡದೆ ಇರುವುದಕ್ಕೆ" ಬಿಜೆಪಿ ಪಕ್ಷದ ವಿಜೇಂದರ್ ಗುಪ್ತಾ ನೀಡಿದ ದೂರಿಗೆ ಕೇಜ್ರಿವಾಲ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.