ನೇತಾಜಿ ಮೃತಪಟ್ಟಿಲ್ಲವೆ೦ದು ನೆಹರುಗೆ ತಿಳಿದಿತ್ತೇ?
ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎ೦ಬುದು ಆಗಿನ ಪ್ರಧಾನಿ ಜವಾಹರ ಲಾಲ ನೆಹರುಗೆ ತಿಳಿದಿತ್ತೇ ಎ೦ಬ ಪ್ರಶ್ನೆಯನ್ನು ಇತ್ತೀಚೆಗಷ್ಟೇ ಕೇ೦ದ್ರ ಸರ್ಕಾರ ಬಹಿರ೦ಗಗೊಳಿಸಿದ ಕಡತಗಳು ಹುಟ್ಟಹಾಕಿವೆ...

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎ೦ಬುದು ಆಗಿನ ಪ್ರಧಾನಿ ಜವಾಹರ ಲಾಲ ನೆಹರುಗೆ ತಿಳಿದಿತ್ತೇ ಎ೦ಬ ಪ್ರಶ್ನೆಯನ್ನು ಇತ್ತೀಚೆಗಷ್ಟೇ ಕೇ೦ದ್ರ ಸರ್ಕಾರ ಬಹಿರ೦ಗಗೊಳಿಸಿದ ಕಡತಗಳು ಹುಟ್ಟಹಾಕಿವೆ.
ಕಳೆದ ವಾರ ಕೇಂದ್ರ ಸರ್ಕಾರ ಬಹಿರಂಗಗೊಳಿಸಿದ್ದ ಕಡತಗಳ ಪೈಕಿ ಒಂದರಲ್ಲಿದ್ದ ಪತ್ರವೊ೦ದು ಈ ಬಗ್ಗೆ ತೀವ್ರ ಶಂಕೆ ಹುಟ್ಟುಹಾಕಿದ್ದು, ಅಮೆರಿಕದ ಆಗಿನ ಅಧ್ಯಕ್ಷರ ಆಪ್ತ ಲೂಯಿಸ್ ಫಿಶರ್‍ಗೆ ಮಹಾತ್ಮ ಗಾ೦ಧಿ ಕಾರ್ಯದರ್ಶಿ ಖುಷಿ೯ದ್ ನೌರೋಜಿ ಅವರು ಪತ್ರವೊ೦ದನ್ನು ಬರೆದಿದ್ದರು. ಅದರಲ್ಲಿ, "1946ರಲ್ಲಿ ನೆಹರುಗೆ ಬೋಸ್ ಪತ್ರ ಬರೆದು, ನಾನು ರಷ್ಯಾದಲ್ಲಿ ಇದ್ದೇನೆ ಎ೦ದಿದ್ದರು. ಈ ವಿಚಾರವನ್ನು ಗೌಪ್ಯವಾಗಿಡುವುದಕ್ಕೆ ಸೇನಾ ಮುಖ್ಯಸ್ಥರು ಸಭೆ ಸೇರಿ ನಿಧ೯ರಿಸಿದ್ದರು' ಎ೦ಬುದಾಗಿ ನೌರೋಜಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


