ನೆಹರು ನಕಲಿ ಪತ್ರಕ್ಕೆ ಭಾರಿ ಲೇವಡಿ
ಶನಿವಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನೆಹರು ಹೆಸರಿನ ಪತ್ರವು ನಕಲಿ ಎಂಬ ವಿಷಯ ಕೆಲವೇ ...

Published On :
ಬೆಂಗಳೂರು: ಶನಿವಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನೆಹರು ಹೆಸರಿನ ಪತ್ರವು ನಕಲಿ ಎಂಬ ವಿಷಯ ಕೆಲವೇ ಗಂಟೆಗಳಲ್ಲಿ ಹೊರಬಿತ್ತು. ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಣಕ ಹಾಗೂ ವ್ಯಂಗ್ಯ ಪ್ರತಿಕ್ರಿಯೆ ವ್ಯಕ್ತವಾಯಿತು.
ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲೆ ಅವರಿಗೆ ಬರೆದ ಪತ್ರದಲ್ಲಿ ಸುಭಾಷ್ ಅವರನ್ನು ಯುದ್ಧಾಪರಾಧಿ ಎಂದು ಉಲ್ಲೇಖಿಸಿ 1945 ರಲ್ಲಿ ಬರೆದ ಪತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತ್ತು. ನೆಹರೂ ವಿರೋಧಿಗಳ ಬಣ ಇದನ್ನು ಮುಂದಿಟ್ಟುಕೊಂಡು ದಾಳಿ ನಡೆಸಲಾರಂಭಿಸಿತ್ತು. ಆದರೆ ಸ್ವಲ್ಪ ಹೊತ್ತಲ್ಲೇ ಅದು ನಕಲಿ ಎಂದು ತಿಳಿಯುತ್ತಿದ್ದಂತೆ ಅನೇಕರು ಇದನ್ನು ಗೇಲಿ ಮಾಡಿದರು.
ಪತ್ರದಲ್ಲಿದ್ದ ತಪ್ಪುಗಳನ್ನು ಗುರುತಿಸಿ ಹಲವರು ಟ್ವೀಟ್ ಮಾಡಿದರು. ಇನ್ನು ಕೆಲವರು ವಾಟ್ಸ್ ಆ್ಯಪ್‌ನಲ್ಲಿ ನೆಹರು ಮತ್ತು ಆ್ಯಟ್ಲೆ ನಡುವೆ ನಡೆದ ಕಲ್ಪಿತ ಸಂಭಾಷಣೆಯ ಚಿತ್ರ ಗಳನ್ನು ಹರಿಬಿಟ್ಟು ಸುಳ್ಳು ಹರಡುವ ಪ್ರಯತ್ನ ಮಾಡಿದವರನ್ನು ಗೇಲಿ ಮಾಡಿದರು.
ಇದಕ್ಕೆ ಸಂಬಂಧಿಸಿದ ಒಂದು ವಾಟ್ಸಾಪ್ ಸಂಭಾಷಣೆ ಹೀಗಿದೆ. ನೆಹರು ಅವರು, ಆ್ಯಟ್ಲೆಗೆ ನಾನು ನಿಮಗೆ ಪತ್ರ ಬರೆಯುವುದಾಗಿ ಅದರಲ್ಲಿ ಬೋಸ್‌ರನ್ನು ಯುದ್ಧಾಪರಾಧಿ ಎಂದು ಕರೆಯುವುದಾಗಿ ಹೇಳುವರು. ಪದಗಳನ್ನು ತಪ್ಪಾಗಿ ಬರೆಯುವುದಾಗಿಯೂ ಹೇಳುವರು, ಇದಕ್ಕೆ ಆ್ಯಟ್ಲೆ ಯಾಕೆಂದು ಕೇಳಿದಾಗ, ಎಲ್ಲರಿಗೂ ಗೊತ್ತು ನನ್ನ ಇಂಗ್ಲಿಷ್ ಚೆನ್ನಾಗಿದೆ ಎಂದು . ಹಾಗಾಗಿ ಜನ ಪತ್ರ ನೋಡಿ ಟ್ವಿಟರ್‌ನಲ್ಲಿ ಶೇರ್ ಮಾಡಿ ಸಂಘಿಗಳನ್ನು ಬೈಯುತ್ತಾರೆ.
ಇಂಥದ್ದೇ ಇನ್ನೊಂದು ನೆಹರು ಆ್ಯಟ್ಲೆ ಸಂಭಾಷಣೆ ನೇರ ಮೋದಿ ಅವರನ್ನೇ ಗುರಿಯಾಗಿಸಿಕೊಂಡಿದೆ. ಈ ರೀತಿಯ ಕಲ್ಪಿತ ವಾಟ್ಸಾಪ್ ಸಂವಾದಗಳು ಹೆಚ್ಚಾಗುತ್ತಿದ್ದಂತೆ, ನೆಹರು-ಆ್ಯಟ್ಲೆ ನಡುವೆ ರಹಸ್ಯ ವಾಟ್ಸಾಪ್ ಮಾತುಕತೆಯನ್ನು ಬಹಿರಂಗಗೊಳಿಸಬೇಕು ಎಂಬ ಆಗ್ರಹದ ಟ್ವೀಟ್‌ಗಳೂ ಸದ್ದು ಮಾಡಿದವು.
ನಕಲಿ ಪತ್ರಕ್ಕೆ ಬೇಸ್ತು ಬಿದ್ದ ಅನೇಕ ಪತ್ರಕರ್ತರು ತಪ್ಪಿಗೆ ಕ್ಷಮೆ ಕೇಳಿದ ಉದಾಹಣೆಗಳೂ ನಡೆದವು. ಪತ್ರಕರ್ತರೊಬ್ಬರು ಈ ಪತ್ರವನ್ನು ನಿಜವೆಂದು ನಂಬಿ, ಇದು ದೊಡ್ಡ ವಿವಾದವನ್ನೇ ಹುಟ್ಟು ಹಾಕುತ್ತದೆ ಎಂದು ಫೇಸ್‌ಬುಕ್‌ನಲ್ಲಿ ಬರೆದು ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದರು. ಆದರೆ ಅನೇಕ ಪ್ರಜ್ಞಾವಂತರು ಪತ್ರದಲ್ಲಿರುವ ಲೋಪ ಗಳನ್ನು ಗುರುತಿಸಿ ಪ್ರಶ್ನೆ ಹಾಕಿದರು. ಅನೇಕರು ಈ ಪತ್ರ ಬರೆದಿದೆ ಎನ್ನಲಾದ ಅವಧಿಯಲ್ಲಿ ನೆಹರು ದೇಶದ ಪ್ರಧಾನಿಯಾಗಿರಲಿಲ್ಲ. ಪತ್ರವನ್ನು ಬೋಸ್ ನಿಧನರಾದ 4 ತಿಂಗಳ ಬಳಿಕ ಬರೆಯಲಾಯಿತು ಎಂಬ ವಾಸ್ತವಾಂಶ ಬಯಲು ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Aam Aadmi PartyJawaharlal NehruNetaji Subhash Chandra Boseಸುಭಾಷ್ ಚಂದ್ರ ಬೋಸ್ನೆಹರುwar criminalಕ್ಲೆಮೆಂಟ್ ಆ್ಯಟ್ಲೆಯುದ್ಧಾಪರಾಧಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


