ದೇಶದಲ್ಲಿ ಇನ್ನೂ 60 ಶಂಕಿತ ಉಗ್ರರು!
ಕರ್ನಾಟಕ ಸೇರಿ ದೇಶದ ದಕ್ಷಿಣ ರಾಜ್ಯಗಳಲ್ಲಿ ದಾಳಿ ನಡೆಸಲೂ ಇಸಿಸ್ ಉಗ್ರ ಸಂಘಟನೆ ಭಾರತಾದ್ಯಂತ ಯುವಕರನ್ನು ನೇಮಕಾತಿ...

ಬೆಂಗಳೂರು: ಕರ್ನಾಟಕ ಸೇರಿ ದೇಶದ ದಕ್ಷಿಣ ರಾಜ್ಯಗಳಲ್ಲಿ ದಾಳಿ ನಡೆಸಲೂ ಇಸಿಸ್ ಉಗ್ರ ಸಂಘಟನೆ ಭಾರತಾದ್ಯಂತ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದಿರುವ ಕೇಂದ್ರ ಗುಪ್ತಚರ ಇಲಾಖೆ ಮೂಲಗಳು, ಈಗಾಗಲೇ ದೇಶದಲ್ಲಿ ಇಂತಹ 60 ಮಂದಿ ಸಕ್ರಿಯರಾಗಿರುವ ಶಂಕೆ ವ್ಯಕ್ತಪಡಿಸಿದೆ. ಅಲ್ಲದೆ, ಯಾವ ಕ್ಷಣದಲ್ಲೂ ಇವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಿರಿಯಾದ ಹೊರಗಿರುವ ಇಸಿಸ್ ಸಂಪರ್ಕದ ಭಾರತೀಯರು, ದೇಶದ ಮೇಲೆ ಇಸಿಸ್ ಮಾದರಿಯ ದಾಳಿ ನಡೆಸುವ ಯೋಜನೆ ಹೊಂದಿದ್ದು, ಅದಕ್ಕಾಗಿ 2004ರಿಂದಲೇ ದೇಶದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ನೇಮಕಾತಿ ನಡೆಸಿದ್ದಾರೆ ಎಂದು ಸಿಎನ್ ಎನ್ ಐಬಿನ್ ವರದಿ ಮಾಡಿದೆ.
ಐಎಂ ಸದಸ್ಯರಾದ ಉಗ್ರರು, ದೇಶದಲ್ಲಿ ಆ ಸಂಘಟನೆ ಮೇಲೆ ಹೆಚ್ಚಿದ ಒತ್ತಡದ ಹಿನ್ನೆಲೆಯಲ್ಲಿ ಸಿರಿಯಾದ ಇಸಿಸ್ ಸಂಪರ್ಕ ಸಾಧಿಸಿ, ಈ ಯೋಜನೆ ರೂಪಿಸಿದ್ದಾರೆ. ಪ್ರಮುಖವಾಗಿ ದಕ್ಷಿಣ ರಾಜ್ಯಗಳು ಹಾಗೂ ಉತ್ತರ ಪ್ರದೇಶದ ಮುಸ್ಲಿಂ ಯುವಕರನ್ನು ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ಸೈಬರ್ ಪ್ರಚಾರ ಮಾಧ್ಯಮವನ್ನು ಬಳಸಿಕೊಳ್ಳುತ್ತಿದ್ದಾರೆ. ನೇಮಕವಾದ ಸುಮಾರು 60 ಮಂದಿಗೆ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಮೇಲೆ ಪ್ಯಾರಿಸ್ ಹೂಗ ಜಕಾರ್ತ ಮಾದರಿಯ ದಾಳಿಗೆ ತರಬೇತಿ ನೀಡಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಬಂಧನ ಸಾಧ್ಯತೆ: ದೇಶದ ವಿವಿಧೆಡೆ ಅಡಗಿರುವ ಶಂಕಿತ ಉಗ್ರರ ಚಲನವಲನಗಳ ಬಗ್ಗೆ ತೀವ್ರ ನಿಗಾವಹಿಸಿದ್ದು, ಯಾವುದೇ ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಶಂಕಿತ ಉಗ್ರರ ಪೈಕಿ ಕರ್ನಾಟಕದಲ್ಲಿಯೂ ಯಾರಾದರೂ ಇದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಲಭ್ಯ ಮಾಹಿತಿಗಳ ಪ್ರಕಾರ ಶಂಕಿತರ ಬಗ್ಗೆ ಕೆಲವು ಸುಳಿವುಗಳ ದೊರೆತಿದ್ದು, ಸದ್ಯದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಇದನ್ನು ಖಚಿತಪಡಿಸಲು ಮೂಲಗಳು ನಿರಾಕರಿಸಿವೆ.
ಹೈದ್ರಾಬಾದ್, ಮುಂಬೈ ಮತ್ತು ಮಂಗಳೂರಿನಲ್ಲಿ ಬಂಧಿತರಾಗಿದ್ದ ಉಗ್ರರ ಚಟುವಟಿಕೆಗಳು ಈ ಅನುಮಾನವನ್ನು ದೃಢ ಪಡಿಸಿವೆ. ಶುಕ್ರವಾರ ಮಂಗಳೂರು, ಹೈದ್ರಾಬ್ದ್, ಬೆಂಗಳೂರು, ಮುಂಬೈನಲ್ಲಿ ಬಂಧಿಸಲ್ಪಟ್ಟ ಶಂಕಿತ ಉಗ್ರರಿಂದ ದೊರೆತ ಮಾಹಿತಿಗಳು, ಕೆಲವೊಂದು ದಾಖಲೆಗಳು ಈ ಜಾಲದ ಹಿಂದೆ ಮತ್ತಷ್ಟು ಮಂದಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗಿದೆ.
ಹೈದ್ರಾಬಾದ್ ಮತ್ತು ಮುಂಬೈನಲ್ಲಿ ಬಂಧಿತರಾಗಿರುವ ಯುವಕರು, ಸದ್ಯ ಪಾಕಿಸ್ತಾನದಲ್ಲಿ ವಾಸ್ತವ್ಯ ಹೂಡಿರುವ ಎಯುಟಿ-ಅನ್ಸರ್ ಉಲ್ ತವಾಹಿದ್ ಮುಖ್ಯಸ್ಥ ಶಫಿ ಅರ್ಮರ್ ಜತೆ ಸಂಪರ್ಕ ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ. ಇವರ ನೆಲೆಗಳ ಮೇಲೆ ದಾಳಿ ನಡೆಸಿದ ವೇಳೆ ಸುಧಾರಿತ ಸ್ಫೋಟಕ ಸಾಧನಗಳು, ಭಾರಿ ಶಸ್ತ್ರಾಸ್ತ್ರಗಳು, ತಾಂತ್ರಿಕ ಉಪಕರಣಗಳು, ಸಿಡಿ, ನೀಲಿ ನಕ್ಷೆ ಸೇರಿ ಪತ್ತೆಯಾಗಿರುವ ಹಲವು ಮಹತ್ವದ ದಾಖಲೆಗಳು ಹಾಗೂ ಹೈದ್ರಾಬಾದ್ ನ ಮಜೀದ್ ಎಂಬುವರನ್ನು ವಶಕ್ಕೆ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


