ನೇತಾಜಿಯವರ ಶ್ರಾದ್ಧ ಮಾಡಬೇಡಿ ಅಂದಿದ್ದರು ಗಾಂಧೀಜಿ
ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು 22 ಆಗಸ್ಟ್ 1945ರಲ್ಲಿ ಡೋಮೀ ಸುದ್ದಿ ಸಂಸ್ಥೆ...

Published On :
ನವದೆಹಲಿ: ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು 22 ಆಗಸ್ಟ್ 1945ರಲ್ಲಿ ಡೋಮೀ ಸುದ್ದಿ ಸಂಸ್ಥೆ ಪ್ರಸಾರ ಮಾಡಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಗಾಂಧೀಜಿಯವರು ಬೋಸ್ ಕುಟುಂಬಕ್ಕೆ ಟೆಲಿಗ್ರಾಂ ಕಳಿಸಿ ಬೋಸ್ ಅವರಿಗೆ ಶಾದ್ಧ ಮಾಡಬೇಡಿ ಎಂದಿದ್ದರು.
ಅಷ್ಟೇ ಅಲ್ಲ, ನೇತಾಜಿಯವರು ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು ಗಾಂಧೀಜಿ ಒಪ್ಪಿರಲಿಲ್ಲ.
ಸುಭಾಷ್ ಚಂದ್ರ ಬೋಸ್ ಅವರ ಅಣ್ಣ ಸರತ್ ಚಂದ್ರ ಬೋಸ್ ಅವರ ಪುತ್ರ ಅಮೀಯಾ ನಾಥ್ ಬೋಸ್, ಆಗಸ್ಟ್ 7, 1995ರಲ್ಲಿ ಆಗಿನ ಪ್ರಧಾನಿಯಾಗಿದ್ದ ಪಿವಿ ನರಸಿಂಹ ರಾವ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ, ನೇತಾಜಿಯವರ ಜತೆ ವಿಮಾನದಲ್ಲಿದ್ದ ಕರ್ನಲ್ ಹಬೀಬುರ್ ರೆಹ್ಮಾನ್ ಅವರು ಒಂದು ದಿನ ದೆಹಲಿಯ ಭಾಂಗಿ ಕಾಲನಿಯಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. ಆ ವೇಳೆ ನಾನು ಅಲ್ಲಿ ನಾನೂ ಉಪಸ್ಥಿತನಿದ್ದೆ. ರೆಹ್ಮಾನ್ ಅವರು 18 ಆಗಸ್ಟ್ 1945ರಂದು ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸಾವಿಗೀಡಾಗಿರುವ ಬಗ್ಗೆ ಮಾತನಾಡಿದ್ದರು.
ರೆಹ್ಮಾನ್ ಅಲ್ಲಿಂದ ಹೋದ ಮೇಲೆ ಅಲ್ಲಿ ನೆರೆದಿದ್ದ ಪತ್ರಿಕಾ ವರದಿಗಾರರನ್ನುದ್ದೇಶಿಸಿ ಗಾಂಧೀಜಿ ಮಾತನಾಡಿದ್ದರು. ಈ ವೇಳೆ ಗಾಂಧೀಜಿ, ಹಬೀಬ್ ಅವರು ಆತನ ನಾಯಕ ಹೇಳಿದ ಆದೇಶವನ್ನು ಪಾಲಿಸುತ್ತಿದ್ದಾರೆ. ಆದರೆ ವಿಮಾನ ಅಪಘಾತದಲ್ಲಿ ಸುಭಾಷ್ ಸಾವಿಗೀಡಾಗಿದ್ದಾರೆ ಎಂಬುದನ್ನು ನಾನು ನಂಬುವುದಿಲ್ಲ ಎಂದು ಹೇಳಿರುವುದಾಗಿ ಪತ್ರದಲ್ಲಿ ಅಮೀಯ ಸೇನ್ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


