ಪ್ರಧಾನ ಸುದ್ದಿ

ನೇತಾಜಿ ಅಂತ್ಯಕ್ರಿಯೆಯ ದಾಖಲೆ ಬಹಿರಂಗ ಪಡಿಸಿದ ವೆಬ್ ಸೈಟ್

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು 1945ರ ವಿಮಾನಾಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ತಾವೇ ಮಾಡಿರುವುದಾಗಿ ತೈವಾನ್​ನ ಅಧಿಕಾರಿ...

ನೇತಾಜಿ ಅಂತ್ಯಕ್ರಿಯೆಯ ದಾಖಲೆ ಬಹಿರಂಗ ಪಡಿಸಿದ ವೆಬ್ ಸೈಟ್
ನೇತಾಜಿ ಸುಭಾಶ್ಚಂದ್ರ ಬೋಸ್‌
Published On :
ಲಂಡನ್‌: ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು 1945ರ ವಿಮಾನಾಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ತಾವೇ ಮಾಡಿರುವುದಾಗಿ ತೈವಾನ್​ನ ಅಧಿಕಾರಿ ನೀಡಿರುವ ವಿವರಗಳನ್ನು www.bosefile.info  ವೆಬ್ ಸೈಟ್ ಗುರುವಾರ ಬಿಡುಗಡೆ ಮಾಡಿದೆ.
ಸುಭಾಶ್ಚಂದ್ರ ಬೋಸ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕುರಿತು ತೈವಾನ್‌ ಅಧಿಕಾರಿಯು ನೀಡಿದ್ದ ಸಾಕ್ಷ್ಯವನ್ನು ಒಳಗೊಂಡ ಅಂಶಗಳು ಬ್ರಿಟನ್‌ ವಿದೇಶ ಕಾರ್ಯಾಲಯದಲ್ಲಿನ ಎಫ್ಸಿ 1852/6 ಕಡತದಲ್ಲಿದೆ. ಇದು 1956ರಷ್ಟು ಹಳೆಯ ಕಡತವಾಗಿದೆ. ಬೋಸ್‌ ಕುರಿತು ಬ್ರಿಟನ್‌ ವೆಬ್‌ಸೈಟ್‌ ಬಿಡುಗಡೆ ಮಾಡಿರುವ ಕೊನೆಯ ಕೆಲವು ದಾಖಲೆಗಳು ಇವಾಗಿವೆ.
ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು 1945ರ ಆಗಸ್ಟ್‌ 18ರಂದು ತೈಪೇ ವಾಯುನೆಲೆಯ ಹೊರವಲಯದಲ್ಲಿ ಸಂಭವಿಸಿದ್ದ ವಿಮಾನಾಪಘಾತದಲ್ಲಿ ಮೃತಪಟ್ಟರೆಂಬುದನ್ನು ಈ ವರೆಗೂ ಬ್ರಿಟನ್‌, ಜಪಾನ್‌ ಹಾಗೂ ಭಾರತ ಸರಕಾರ ಹೇಳತ್ತಲೇ ಬಂದಿದ್ದು ಇದೀಗ ಬ್ರಿಟನ್‌ ವೆಬ್‌ಸೈಟ್‌ ನೇತಾಜಿ ಅವರ ಸಾವಿನ ಬಗ್ಗೆ ಇದಕ್ಕೆ ಹೊರತಾಗಿ ಯಾವುದೇ ಅನ್ಯ ಸಂದೇಹವಿಲ್ಲ ಎಂಬುದನ್ನು ಸಾಬೀತು ಪಡಿಸುವ ರೀತಿಯಲ್ಲಿ ಈ ದಾಖಲೆಗಳನ್ನು ಬಹಿರಂಗಪಡಿಸಿದೆ.
ತೈಪೆಯಲ್ಲಿ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಗೆ ಅನುಮತಿ ಪತ್ರ ನೀಡುವ ಅಧಿಕಾರ ಹೊಂದಿದ್ದ ತೈವಾನ್‌ ಅಧಿಕಾರಿ ತಾನ್‌ ತೀ ತೀ ಅವರು ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಮೃತ ದೇಹದ ಅಂತ್ಯಕ್ರಿಯೆ ತಾನೇ ಖುದ್ದು ಅಣಿಗೊಳಿಸಿದ್ದಾಗಿ ಹೇಳಿದ್ದಾರೆ. ತನ್ಮೂಲಕ ನೇತಾಜಿ ಸಾವಿನ ಕುರಿತಾದ ಎಲ್ಲ ಸಂದೇಹಗಳಿಗೆ ಅವರು ತೆರೆ ಎಳೆದಂತಾಗಿದೆ ಎಂದು ಬ್ರಿಟನ್‌ ವೆಬ್‌ಸೈಟ್‌ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.