ಪ್ರಧಾನ ಸುದ್ದಿ

ಜೆ ಎನ್ ಯು ಪ್ರಾಧ್ಯಾಪಕರ ಅಪ್ರಾಪ್ತ ಮನೆಗೆಲಸದ ಹುಡುಗಿ ಅಪಹರಣ; ಗ್ಯಾಂಗ್ ರೇಪ್

ಜವಾಹಾರ್ ನೆಹರು ವಿಶ್ವವಿದ್ಯಾಲಯದ (ಜೆ ಎನ್ ಯು) ಆವರಣದಲ್ಲಿ ಪ್ರಾಧ್ಯಾಪಕರೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ೧೬ ವರ್ಷದ ಬಾಲಕಿಯನ್ನು ಸೋಮವಾರ ನಾಲ್ಕು ಜನ ಅಪಹರಿಸಿ ಗ್ಯಾಂಗ್ ರೇಪ್

ಜೆ ಎನ್ ಯು ಪ್ರಾಧ್ಯಾಪಕರ ಅಪ್ರಾಪ್ತ ಮನೆಗೆಲಸದ ಹುಡುಗಿ ಅಪಹರಣ; ಗ್ಯಾಂಗ್ ರೇಪ್
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಜವಾಹಾರ್ ನೆಹರು ವಿಶ್ವವಿದ್ಯಾಲಯದ (ಜೆ ಎನ್ ಯು) ಆವರಣದಲ್ಲಿ ಪ್ರಾಧ್ಯಾಪಕರೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ೧೬ ವರ್ಷದ ಬಾಲಕಿಯನ್ನು ಸೋಮವಾರ ನಾಲ್ಕು ಜನ ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ಶಂಕಿತರನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಅಪಹರಣ, ಗ್ಯಾಂಗ್ ರೇಪ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತು ಅಪ್ರಾಪ್ತ ಬಾಲಕಿಯನ್ನು ಐದು ವರ್ಷಗಳಿಂದ ಕೆಲಸಕ್ಕೆ ಇಟ್ಟುಕೊಂಡಿದ್ದ ಆರೋಪದ ಮೇಲೆ ಬಾಲ ಕಾರ್ಮಿಕ ಮತ್ತು ಜೀತ ನಿಯಮದಡಿ ಪ್ರಾಧ್ಯಾಪಕರ ವಿರುದ್ಧವೂ ಕೇಸು ದಾಖಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾಲಕಿ ಹೊಟ್ಟೆ ನೋವು ಎಂದದ್ದಕ್ಕೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಿಂದ ಸೋಮವಾರ ರಾತ್ರಿ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಆಗ ಪೊಲೀಸರು ವಿಚಾರಣೆ ನಡೆಸಿದಾಗೆ ಸೋಮವಾರ ಜೆ ಎನ್ ಯು ಆವರಣದಿಂದ ಹೊರಬಂದು ಮಾರುಕಟ್ಟೆಯತ್ತ ಹೊರಟಾಗ ಬಾಲಕಿಗೆ ಗೊತ್ತಿರುವ ಒಬ್ಬ ಯುವಕ ತನ್ನ ಗೆಳೆಯರೊಂದಿಗೆ ಕಾರಿನಲ್ಲಿ ಹತ್ತಿಸಿಕೊಂಡಿದ್ದಾನೆ.

"ಆ ಯುವಕ ಬಾಲಕಿಯನ್ನು ಮಾರುಕಟ್ಟೆಯಲ್ಲಿ ಇಳಿಸುವುದಾಗಿ ತಿಳಿಸಿದ್ದಾನೆ. ಮತ್ತು ಬರುವ ಡ್ರಗ್ ಒಳಗೊಂಡ ಪಾನೀಯವನ್ನು ಬಾಲಕಿಗೆ ಕುಡಿಸಿ, ಭಾಗಶಃ ಪ್ರಜ್ಞೆ ತಪ್ಪಿದ ಮೇಲೆ ಮನೆಗೆ ಕೊಂಡೊಯ್ದು ನಾಲ್ಕು ಜನ ಗ್ಯಾಂಗ್ ರೇಪ್ ಮಾಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.